ಮಾರುತಿ ಎರ್ಟಿಗಾ ಸಿಎನ್‌ಜಿ, ಆಟೋಮ್ಯಾಟಿಕ್ ಬರುತ್ತಂತೆ!

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ತನ್ನ ಜನಪ್ರಿಯ ಮಲ್ಟಿ ಯುಟಿಲಿಟಿ ವೆಹಿಕಲ್ ಆದ ಎರ್ಟಿಗಾದ ಸಿಎನ್‌ಜಿ ವರ್ಷನ್ ಸದ್ಯದಲ್ಲೇ ಲಾಂಚ್ ಮಾಡಲಿದೆ. ಇದೇ ಸಂದರ್ಭದಲ್ಲಿ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ ಮಾಡುವ ಯೋಜನೆ ಕೂಡಾ ಪ್ರಗತಿಯಲ್ಲಿದೆ.

ಮೂಲಗಳ ಪ್ರಕಾರ ಉತ್ತಮ ಮಾರಾಟ ಕಾಯ್ದುಕೊಂಡಿರುವ ಮಾರುತಿ ಎರ್ಟಿಗಾ ಪ್ರತಿ ತಿಂಗಳು ಸರಾಸರಿ 6,000 ಯುನಿಟ್ ಸೇಲ್ ಆಗುತ್ತಿವೆ. ಹಾಗಿದ್ದರೂ ರೆನೊ ಡಸ್ಟರ್ ಹಾಗೂ ಮಹೀಂದ್ರ ಕ್ವಾಂಟೊದಿಂದ ನಿಕಟ ಪೈಪೋಟಿ ಎದುರಾಗುತ್ತಿದೆ.

ಇವೆಲ್ಲವನ್ನು ನಿಭಾಯಿಸಲು ನೂತನ ಎರ್ಟಿಗಾ ಸಿಎನ್‌ಜಿ ವರ್ಷನ್ ಲಾಂಚ್ ಮಾಡಲು ಮಾರುತಿ ಯೋಜನೆ ಹಾಕಿಕೊಂಡಿದೆ. ಪ್ರಸ್ತುತ ಪೆಟ್ರೋಲ್ ಹಾಗೂ ಡೀಸೆಲ್ ವೆರೆಯಂಟ್‌ಗಳಲ್ಲಿ ಎರ್ಟಿಗಾ ಮಾರಾಟವಾಗುತ್ತಿವೆ.

ಮಾರುತಿ ಎರ್ಟಿಗಾ ಸಿಎನ್‌ಜಿ, ಆಟೋಮ್ಯಾಟಿಕ್ ಬರುತ್ತಂತೆ!

ಸಿಎನ್‌ಜಿ ಆವೃತ್ತಿ ಮುಖಾಂತರ ಪ್ರತಿ ತಿಂಗಳು 1,000ದಿಂದ 1,500 ಯುನಿಟ್ ಮಾರಾಟವನ್ನು ಮಾರುತಿ ಗುರಿಯಿರಿಸಿಕೊಂಡಿದೆ.

ಮಾರುತಿ ಎರ್ಟಿಗಾ ಸಿಎನ್‌ಜಿ, ಆಟೋಮ್ಯಾಟಿಕ್ ಬರುತ್ತಂತೆ!

ತನ್ನ ನಿಕಟ ಪ್ರತಿಸ್ಪರ್ಧಿಗಳ ಪೈಕಿ ಮಹೀಂದ್ರ ಕ್ಸೈಲೋ ಅಥವಾ ಕ್ವಾಂಟೊಗೆ ಸಿಎನ್‌ಜಿ ವರ್ಷನ್ ಇಲ್ಲವಾಗಿರುವುದರಿಂದ ಮಾರುತಿಗಿದು ಮಾರುಕಟ್ಟೆ ಕುದುರಿಸಿಕೊಳ್ಳಲು ಉತ್ತಮ ಅವಕಾಶ ಒದಗಿಸಲಿದೆ.

ಮಾರುತಿ ಎರ್ಟಿಗಾ ಸಿಎನ್‌ಜಿ, ಆಟೋಮ್ಯಾಟಿಕ್ ಬರುತ್ತಂತೆ!

ಈ ಮೂಲಕ ದೇಶದ ಮಲ್ಟಿ ಪರ್ಪಸ್ ವೆಹಿಕಲ್ ಸೆಗ್ಮೆಂಟ್‌ನಲ್ಲಿ ಸಿಎನ್‌ಜಿ ವರ್ಷನ್ ಪರಿಚಯಿಸಿದ ಮೊದಲ ಮಾಡೆಲ್ ಎಂಬ ಖ್ಯಾತಿಯನ್ನು ಮಾರುತಿ ಎರ್ಟಿಗಾ ಪಡೆಯಲಿದೆ.

ಮಾರುತಿ ಎರ್ಟಿಗಾ ಸಿಎನ್‌ಜಿ, ಆಟೋಮ್ಯಾಟಿಕ್ ಬರುತ್ತಂತೆ!

ಅದೇ ಹೊತ್ತಿಗೆ ಇಂಡೋನೇಷ್ಯಾಗೆ ಎರ್ಟಿಗಾ ಆಟೋಮ್ಯಾಟಿಕ್ ವರ್ಷನ್ ಪರಿಚಯಿಸುವ ಕುರಿತಾಗಿಯೂ ಮಾರುತಿ ಯೋಜನೆಯಲ್ಲಿದೆ. ಅಂದರೆ ನಿಕಟ ಭವಿಷ್ಯದಲ್ಲಿ ಭಾರತಕ್ಕೂ ಆಟೋಮ್ಯಾಟಿಕ್ ವರ್ಷನ್ ರಂಗಪ್ರವೇಶವಾಗಲಿದೆ.

ಮಾರುತಿ ಎರ್ಟಿಗಾ ಸಿಎನ್‌ಜಿ, ಆಟೋಮ್ಯಾಟಿಕ್ ಬರುತ್ತಂತೆ!

ಇದು ಕೂಡಾ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪವರ್ ಹೊಂದಿದ ದೇಶದ ಮೊದಲ ಎಂಪಿವಿ ಎನಿಸಿಕೊಳ್ಳಲಿದೆ. ಅಂದ ಹಾಗೆ ಆಟೋಮ್ಯಾಟಿಕ್ ವರ್ಷನ್ ಲಾಂಚ್ ಮಾಡುವುದು ಮಾರುತಿ ಪಾಲಿಗೆ ಕಷ್ಟದ ವಿಯಷವೇನಲ್ಲ. ಕಂಪನಿಯು ಈಗಾಗಲೇ ಭಾರತದಲ್ಲಿ ಡಿಜೈರ್, ಎಸ್‌ಎಕ್ಸ್4 ಹಾಗೂ ಎ-ಸ್ಟಾರ್ ಆವೃತ್ತಿಯಲ್ಲಿ ಫೋರ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಳವಡಿಸಿಕೊಂಡಿದೆ.

Article Published On: Thursday, March 28, 2013, 15:01 [IST]
English summary
Maruti Suzuki India is planning to launch a CNG and Automatic version of the Ertiga soon, report says.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+