ಮಾರುತಿ ಲಾಭದಿಂದ ಮಾತ್ರ ಜೀವನ ಸಾಗಿಸುತ್ತಿರುವ ಸುಜುಕಿ

By Nagaraja

ಮಾರುತಿ ದೇಶದ ನಂ.1 ಕಾರು ತಯಾರಕ ಸಂಸ್ಥೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಇದೀಗ ಬಂದಿರುವ ಆಘಾತಕಾರಿ ಸುದ್ದಿಯೆಂದರೆ ಭಾರತೀಯ ಮೂಲದ ಈ ವಾಹನ ತಯಾರಕ ಸಂಸ್ಥೆಯಿಂದ ಬರುವ ಗೌರವಧನದಿಂದ ಪೋಷಕ ಸಂಸ್ಥೆ ಸುಜುಕಿ ಜೀವನ ಸಾಗಿಸುತ್ತಿದೆ.

ಅಂದರೆ ಸುಜುಕಿ ಅಕ್ಷರಶ: ಮಾರುತಿಯಿಂದ ಬರುವ ಆದಾಯಕ್ಕೆ ನಿರ್ಭರವಾಗಿರುವುದು ಕಂಡುಬಂದಿದೆ. ಜಗತ್ತಿನ ಕಾರು ಮಾರುಕಟ್ಟೆಯಲ್ಲಿ ಸುಜುಕಿ ಅಂತದ್ದೇನು ಹೆಸರು ಮಾಡಿಲ್ಲ. ಉತ್ತರ ಅಮೆರಿಕದಲ್ಲಂತೂ ಇದರ ಸಾಧನೆ ಬರಿ ಶೂನ್ಯವಾಗಿಬಿಟ್ಟಿದೆ. ಸಂಸ್ಥೆಯ ಬಹುತೇಕ ಆದಾಯ ತವರೂರಾದ ಜಪಾನ್ ಹಾಗೂ ಯುರೋಪ್‌ನಿಂದ ಲಭಿಸುತ್ತಿದೆ.

ಮಾರುತಿ ಲಾಭದಿಂದ ಮಾತ್ರ ಜೀವನ ಸಾಗಿಸುತ್ತಿರುವ ಸುಜುಕಿ

ನಾವಿಲ್ಲಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್) ಎಷ್ಟು ಯಶಸ್ಸು ಸಾಧಿಸಿದೆ ಎಂಬುದನ್ನು ಉಲ್ಲೇಖಿಸಲು ಬಯಸುವುದಿಲ್ಲ. ಆದರೆ ಪೋಷಕ ಸಂಸ್ಥೆ ಸುಜುಕಿ ಒಟ್ಟಾರೆಯಾಗಿ ಗಳಿಸುತ್ತಿರುವ ಆದಾಯವು (ತೆರಿಗೆ ನಂತರ), ಮಾರುತಿ ಪಾವತಿಸುತ್ತಿರುವ ಗೌರವಧನಕ್ಕಿಂತಲೂ ಕಡಿಮೆಯಾಗಿದೆ.

ಮಾರುತಿ ಲಾಭದಿಂದ ಮಾತ್ರ ಜೀವನ ಸಾಗಿಸುತ್ತಿರುವ ಸುಜುಕಿ

ಇಲ್ಲಿ ಕೊಟ್ಟಿರುವ ಅಂಕಿಅಂಶಗಳನ್ನು ಒಮ್ಮೆ ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿರಿ - 2012-2013ನೇ ಆರ್ಥಿಕ ಸಾಲಿನಲ್ಲಿ ಮಾರುತಿಯು ಪೋಷಕ ಸಂಸ್ಥೆಯಾಗಿರುವ ಸುಜುಕಿಗೆ ಗೌರವಧನ ಮೂಲಕ 2,453.8 ಕೋಟಿ ರುಪಾಯಿ ಪಾವತಿಸಿದೆ. ಇದು ಮಾರುತಿಯ ಒಟ್ಟು ನಿವ್ವಳ ಲಾಭಕ್ಕಿಂತ (ತೆರಿಗೆ ನಂತರ) ಶೇಕಡಾ 102ರಷ್ಟಾಗಿದೆ. ಅಂದರೆ ಇದೇ ಅವಧಿಯಲ್ಲಿ ಸುಜುಕಿ ಸಂಗ್ರಹಿಸಿರುವ ಒಟ್ಟು ಆದಾಯ 2402 ಕೋಟಿ ರು.ಗಳಾಗಿವೆ.

ಮಾರುತಿ ಲಾಭದಿಂದ ಮಾತ್ರ ಜೀವನ ಸಾಗಿಸುತ್ತಿರುವ ಸುಜುಕಿ

ಇಲ್ಲಿ ಗಮನಾರ್ಹ ಅಂಶವೆಂದರೆ ಮಾರುತಿ ಗೌರವಧನವಾಗಿ ಇಷ್ಟೊಂದು ದೊಡ್ಡ ಮೊತ್ತ ಪಾವತಿ ಮಾಡುತ್ತಿರುವುದರ ಹೊರತಾಗಿಯೂ ಈ ನಿಗದಿತ ಅವಧಿಯಲ್ಲಿ ಶೇಕಡಾ 5.6ರಷ್ಟು ಲಾಭ ಪಡೆಯುವಲ್ಲಿ ಯಶಸ್ವಿಯಾಗಿದೆ.

ಮಾರುತಿ ಲಾಭದಿಂದ ಮಾತ್ರ ಜೀವನ ಸಾಗಿಸುತ್ತಿರುವ ಸುಜುಕಿ

ಒಟ್ಟಿನಲ್ಲಿ ಸುಜುಕಿ ಗಳಿಕೆಗಿಂತ ಹೆಚ್ಚಿನ ಮೊತ್ತವನ್ನು ರಾಯಲ್ಟಿ ರೂಪದಲ್ಲಿ ನೀಡುತ್ತಿರುವುದು ಮಾರುತಿಯಲ್ಲಿರುವ ಅಲ್ಪಸಂಖ್ಯಾತ ಶೇರುದಾರರದಲ್ಲಿ ಅತೃಪ್ತಿಗೆ ಕಾರಣವಾಗಿದೆ. ವಾಸ್ತವಾಂಶ ಏನೆಂದರೆ 2008ನೇ ಸಾಲಿನಿಂದ 2013ರ ವರೆಗೆ ಮಾರುತಿ ಪಾವತಿಸುತ್ತಿರುವ ಗೌರವಧನವು ಶೇಕಡಾ 2.7ರಿಂದ 5.75ಕ್ಕೆ ವರ್ಧನೆಯಾಗಿದೆ.

ಮಾರುತಿ ಲಾಭದಿಂದ ಮಾತ್ರ ಜೀವನ ಸಾಗಿಸುತ್ತಿರುವ ಸುಜುಕಿ

ಇವೆಲ್ಲದರ ನಡುವೆ ಗುಜರಾತ್‌ನಲ್ಲಿ ನೂತನ ಕಾರು ಘಟಕವನ್ನು ಆರಂಭಿಸುವ ಯೋಜನೆ ಸುಜುಕಿ ಹೊಂದಿದ್ದು, ಇದು ಮಾರುತಿಗೆ ಇನ್ನಷ್ಟು ಹೊಡೆತ ನೀಡುವ ಸಾಧ್ಯತೆಯಿದೆ. ಯಾಕೆಂದರೆ ಹಾಗೆ ಮಾಡುವುದರಿಂದ ಮಾರುತಿ ಪಾವತಿಸಲಿರುವ ಗೌರವಧನ ಇನ್ನಷ್ಟು ವರ್ಧನೆಯಾಗಲಿದೆ.

ಮಾರುತಿ ಲಾಭದಿಂದ ಮಾತ್ರ ಜೀವನ ಸಾಗಿಸುತ್ತಿರುವ ಸುಜುಕಿ

ಪ್ರಸ್ತುತ ವಿವಾದವು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮೆಟ್ಟಿಲು ಹತ್ತಿದ್ದು, ಮಾರುತಿಯಲ್ಲಿರುವ ಅಲ್ಪಸಂಖ್ಯಾತ ಶೇರುದಾರರು ಸುಜುಕಿ ಯೋಜನೆ ಕೈಬಿಡುವಂತೆ ಒತ್ತಾಯಿಸಿದ್ದಾರೆ.

More from DriveSpark

Article Published On: Monday, March 17, 2014, 5:04 [IST]
English summary
It's well know that Japanese automaker Suzuki is not a global force in the four wheeler market. The company no longer even has a presence in North American. The majority of the company's profit comes from Japan, with only a small portion contributed by Europe.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+