ಮಾರುತಿ ಕಾರು ಖರೀದಿಸ್ತೀರಾ? ಮೊದಲು ಆಫರ್ ತಿಳ್ಕೊಳ್ಳಿರಿ!
ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಕಾರುಗಳನ್ನು ಖರೀದಿಸಲು ಇದು ಸೂಕ್ತ ಸಮಯ. ಇತ್ತೀಚೆಗಷ್ಟೇ ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ಸಣ್ಣ ಕಾರುಗಳಿಗೆ ಅಬಕಾರಿ ಸುಂಕ ಕಡಿತಗೊಳಿಸಿರುವ ಹಿನ್ನಲೆಯಲ್ಲಿ ಕಾರು ಬೆಲೆಗಳಲ್ಲಿ ಇಳಿಕೆ ಕಂಡುಬಂದಿದೆ.
ಇದೀಗ ಮಾರಾಟವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾರುತಿ ಸುಜುಕಿ ತನ್ನ ರೇಂಜ್ ಕಾರುಗಳಿಗೆ ರಿಯಾಯಿತಿ ದರ ನೀಡುತ್ತಿದೆ. ಇದು ಮಾರಾಟವನ್ನು ಇನ್ನಷ್ಟು ಉತ್ತೇಜಿಸುವುದೆಂದು ನಿರೀಕ್ಷಿಸಲಾಗಿದೆ. ಅಷ್ಟಕ್ಕೂ ಮಾರುತಿಯಿಂದ ಇತ್ತೀಚೆಗಷ್ಟೇ ಲಾಂಚ್ ಆಗಿರುವ ಸೆಲೆರಿಯೊ ಕಾರಿಗೂ ಆಫರ್ ಲಭ್ಯವಿದೆಯೇ? ಉತ್ತರಕ್ಕಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ.

ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಸ್ವಿಫ್ಟ್ ಡಿಜೈರ್
ಹ್ಯಾಚ್‌ಬ್ಯಾಕ್ ಹಾಗೂ ಕಾಂಪಾಕ್ಟ್ ಸೆಡಾನ್ ವಿಭಾಗಗಳಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಸ್ವಿಫ್ಟ್ ಡಿಜೈರ್ ಆವೃತ್ತಿಗಳಿಗೆ ರು. 10,000 ವರೆಗೆ ರಿಯಾಯಿತಿ ದರ ನೀಡಲಾಗುತ್ತದೆ.

ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಸ್ವಿಫ್ಟ್ ಡಿಜೈರ್
ಇದರ ಜತೆಗೆ 50,000 ವರೆಗೆ ಎಕ್ಸ್‌ಚೇಂಜ್ ಬೋನಸ್, ರು. 1500 ವರೆಗೆ ಕಾರ್ಪೋರೇಟ್ ಡಿಸ್ಕೌಂಟ್ ಒದಗಿಸಲಾಗುತ್ತಿದೆ. ಈ ಮೂಲಕ ಒಟ್ಟು ರು. 61,500 ವರೆಗೆ ಉಳಿತಾಯ ಮಾಡಬಹುದಾಗಿದೆ.

ಮಾರುತಿ ಸುಜುಕಿ ರಿಟ್ಜ್
ಅದೇ ಹೊತ್ತಿಗೆ ಮಾರುತಿ ಸುಜುಕಿ ರಿಟ್ಜ್ ಕಾರಿಗೆ ರು. 20,000 ವರೆಗೆ ರಿಯಾಯಿತಿ ದರ ಲಭ್ಯವಿರುತ್ತದೆ. ಇದರ ಜತೆಗೆ ರು. 1500 ವರೆಗೆ ಕಾರ್ಪೋರೇಟ್ ಡಿಸ್ಕೌಂಟ್ ಮತ್ತು ರು. 50,000 ವರೆಗೆ ಎಕ್ಸ್‌ಚೇಂಜ್ ಬೋನಸ್ ನೀಡಲಾಗುತ್ತದೆ.

ಮಾರುತಿ ಸುಜುಕಿ ಎಸ್‌ಎಕ್ಸ್4
ಮಾರುತಿ ಪಾಲಿಗೆ ಎಸ್‌ಎಕ್ಸ್4 ಉತ್ತಮ ಮಾರಾಟವನ್ನು ಕಂಡುಕೊಳ್ಳದಿದ್ದರೂ ಈ ಸೆಡಾನ್ ಕಾರಿಗೂ ಆಕರ್ಷಕ ಆಫರ್ ನೀಡುವ ಮೂಲಕ ಗ್ರಾಹಕರನ್ನು ಪ್ರೋತ್ಸಾಹಿಸುವ ಪ್ರಯತ್ನ ಮಾಡಲಾಗುತ್ತಿದೆ. ಮಾರುತಿ ಎಸ್‌ಎಕ್ಸ್4 ಖರೀದಿ ವೇಳೆ ರು. 40,000 ವರೆಗೆ ರಿಯಾಯಿತಿ ದರ, ರು. 50000 ವರೆಗೆ ಎಕ್ಸ್‌ಚೇಂಜ್ ಬೋನಸ್ ಹಾಗೆಯೇ ರು. 1,500 ವರೆಗೆ ಕಾರ್ಪೋರೇಟ್ ಡಿಸ್ಕೌಂಟ್ ಲಭ್ಯವಿರುತ್ತದೆ. ಈ ಮೂಲಕ ಒಂದು ಲಕ್ಷ ರು.ಗಳ ವರೆಗೂ ಉಳಿತಾಯ ಮಾಡಿಕೊಳ್ಳಬಹುದು.

ಮಾರುತಿ ಸುಜುಕಿ ವ್ಯಾಗನಾರ್
ವ್ಯಾಗನಾರ್ ಹಾಗೂ ವ್ಯಾಗನಾರ್ ಸ್ಟ್ರೀಂಗ್ರೇ ಆವೃತ್ತಿಗಳಿಗೆ ರು. 30,000 ವರೆಗೆ ಡಿಸ್ಕೌಂಟ್ ಲಭ್ಯವಿರುತ್ತದೆ. ಇದರ ಜತೆಗೆ ರು. 30000 ವರೆಗೆ ಎಕ್ಸ್‌ಚೇಂಜ್ ಬೋನಸ್ ಹಾಗೂ ರು. 1500 ವರೆಗೆ ಕಾರ್ಪೋರೇಟ್ ಬೋನಸ್ ಲಭ್ಯವಿರುತ್ತದೆ.

ಮಾರುತಿ ಸುಜುಕಿ ಎರ್ಟಿಗಾ
ಅಂತಿಮವಾಗಿ ಜನಪ್ರಿಯ ಎಂಪಿವಿ ಮಾರುತಿ ಎರ್ಟಿಗಾ ಆವೃತ್ತಿಗೆ ರು. 20,000 ವರೆಗೆ ರಿಯಾಯಿತಿ ದರ, ರು. 20,000 ವರೆಗೆ ಎಕ್ಸ್‌ಚೇಂಜ್ ಬೋನಸ್ ಹಾಗೂ ರು. 1500 ಕಾರ್ಪೋರೇಟ್ ಬೋನಸ್ ಲಭ್ಯವಿರಲಿದೆ.

ಮಾರುತಿ ಸೆಲೆರಿಯೊ
ಹಾಗಿದ್ದರೂ ಬಿಸಿ ಬಿಸಿ ದೋಸೆಯಂತೆ ಬುಕ್ಕಿಂಗ್ ಕಂಡುಕೊಳ್ಳುತ್ತಿರುವ ಇತ್ತೀಚೆಗಷ್ಟೇ ಲಾಂಚ್ ಆಗಿರುವ ಬಹುನಿರೀಕ್ಷಿತ ಮಾರುತಿ ಸೆಲೆರಿಯೊ ಆವೃತ್ತಿಗೆ ಮಾತ್ರ ಯಾವುದೇ ಆಫರುಗಳು ಅನ್ವಯವಾಗುವುದಿಲ್ಲ.


Click it and Unblock the Notifications








