ನಿಮ್ಮ ಮಾರುತಿ ಕಾರಿನಲ್ಲೂ ಪ್ರಾಬ್ಲಂ ಇದೆಯಾ?
ಅಚ್ಚರಿಯ ಸುದ್ದಿಯೊಂದರಲ್ಲಿ ದೇಶದ ಅತಿ ಹೆಚ್ಚು ವಿಶ್ವಾಸಾರ್ಹ ಕಂಪನಿಗಳಲ್ಲಿ ಒಂದೆನಿಸಿಕೊಂಡಿರುವ ಮಾರುತಿ ಸುಜುಕಿಯ ಕೆಲವು ನಿರ್ದಿಷ್ಟ ಮಾದರಿಗಳಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಹಿಂಪಡೆಯಲು ನಿರ್ಧರಿಸಲಾಗಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ
ಇದರಿಂದ ಮಾರುತಿ ನೆಚ್ಚಿನ ಗ್ರಾಹಕರಲ್ಲಿ ಗೊಂದಲ ಸೃಷ್ಟಿಯಾಗುವಂತಾಗಿದೆ. ನಾಲ್ಕು ಮಾದರಿಗಳಲ್ಲಾಗಿ ಒಟ್ಟು 1492 ಯುನಿಟ್‌ಗಳನ್ನು ಹಿಂಪಡೆಯಲಾಗಿದೆ.
ಅಷ್ಟಕ್ಕೂ ಮಾರುತಿಯಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಯಾದರೂ ಏನು? ಈ ನಿರ್ದಿಷ್ಟ ಮಾಡೆಲ್‌ಗಳಾದರೂ ಯಾವುವು? ಎಂಬತ್ಯಾದಿ ಮಾಹಿತಿಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ....

2013 ಅಕ್ಟೋಬರ್ 19ರಿಂದ 26ರ ವರೆಗೆ ನಿರ್ಮಿಸಿರುವ ಎರ್ಟಿಗಾ ಎಂಪಿವಿ, ಡಿಜೈರ್ ಕಾಂಪಾಕ್ಟ್ ಸೆಡಾನ್ ಮತ್ತು ಸ್ವಿಫ್ಟ್ ಮತ್ತು ಎ ಸ್ಟಾರ್ ನಿರ್ದಿಷ್ಟ ಹ್ಯಾಚ್‌ಬ್ಯಾಕ್ ಕಾರುಗಳ ಮಾದರಿಗಳಲ್ಲಿ ತೊಂದರೆ ಕಾಣಿಸಿಕೊಂಡಿದೆ.

ಈ ನಿರ್ದಿಷ್ಟ ಕಾರುಗಳ ಸ್ಟೀರಿಂಗ್ ಅಂಕಣದಲ್ಲಿ ಸಮಸ್ಯ ತಲೆದೋರಿದ್ದು, ಇದನ್ನು ಶೀಘ್ರದಲ್ಲೇ ಸರಿಪಡಿಸಿಕೊಡಲಾಗುವುದು ಎಂದು ಮಾರುತಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೇಲೆ ಸೂಚಿಸಲಾದ ಕಾರುಗಳಿಗೆ ನೂತನ ಸ್ಟೀರಿಂಗ್ ಅಂಕಣ ಲಗತ್ತಿಸಿಕೊಡಲಾಗುವುದು. ಅಲ್ಲದೇ ಇದನ್ನು ಹೊರತುಪಡಿಸಿರೆ ಬೇರೆ ಯಾವುದೇ ಮಾದರಿಗಳಲ್ಲಿ ತೊಂದರೆ ಕಾಣಿಸಿಕೊಂಡಿಲ್ಲ ಎಂಬುದನ್ನು ಕಂಪನಿ ಸ್ಪಷ್ಟಪಡಿಸಿದೆ.

ಈ ಹಿಂದೆ 2010ರಲ್ಲಿ ಎಸ್ಟಾರ್ ಆವೃತ್ತಿಯಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಹಿಂಪಡೆಯಲಾಗಿತ್ತು. ಇದು ಮಾರುತಿ ಪಾಲಿಗೆ ಈ ಹಿಂದಿನ ಅತಿ ದೊಡ್ಡ ರಿಕಾಲ್ ಎನಿಸಿಕೊಂಡಿತ್ತು.

ಕಳೆದ ಜುಲೈ ತಿಂಗಳಲ್ಲಿ ಸಿಯಾಮ್ ತಾತ್ಕಾಲಿಕ ರಿಕಾಲ್ ಯೋಜನೆಯನ್ನು ಅನುಷ್ಠಾನಗೊಳಿಸಿದ ಬಳಿಕ ಬಹುತೇಕ ಎಲ್ಲ ಕಾರು ಕಂಪನಿಗಳು ಎಚ್ಚರಿಕಾ ನಡೆಯನ್ನು ಅನುಸರಿಸುತ್ತಿದೆ.

ಇದರೊಂದಿಗೆ ಈಗಾಗಲೇ 3 ಲಕ್ಷ ಯುನಿಟ್‌ಗಳನ್ನು ವಾಪಾಸ್ ಪಡೆದಿದೆ. ಇದರಲ್ಲಿ ಜನರಲ್ ಮೋಟಾರ್ಸ್ ಹಿಂಪಡೆದ 1.14 ಲಕ್ಷ ಷೆವರ್ಲೆ ತವೆರಾ ಯುನಿಟ್‌ಗಳು ಸಹ ಸೇರಿಕೊಂಡಿದೆ.


Click it and Unblock the Notifications








