ಮುಂದುವರಿಯಲಿದೆ ರಿಗಲ್, ಫೆಲಿಜ್ ವಿಶೇಷ ಆವೃತ್ತಿ

By Nagaraja

ದೇಶದ ನಂ.1 ಕಾರು ಉತ್ಪಾದಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಇತ್ತೀಚೆಗಷ್ಟೇ ಸ್ವಿಫ್ಟ್ ಡಿಜೈರ್ ರಿಗಲ್ ಹಾಗೂ ಎರ್ಟಿಗಾ ಫೆಲಿಜ್ ವಿಶೇಷ ಆವೃತ್ತಿಯ ಕಾರುಗಳನ್ನು ಲಾಂಚ್ ಮಾಡಿದ್ದವು.

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಕುಸಿದಿರುವುದರಿಂದ ಈ ಸ್ಪೆಷಲ್ ಎಡಿಷನ್ ಕಾರುಗಳನ್ನು ಮಂದುವರಿಸಲು ದೇಶದ ಅತಿದೊಡ್ಡ ಕಾರು ಉತ್ಪಾದಕ ಸಂಸ್ಥೆ ನಿರ್ಧರಿಸಿದೆ.

ಮಾರುಕಟ್ಟೆಯಲ್ಲಿ ಮಾರಾಟ ಕ್ಷೀಣವಾಗಿದೆ. ಹಾಗಾಗಿ ತನ್ನ ಜನಪ್ರಿಯ ಮಾಡೆಲ್‌ಗಳ ವಿಶೇಷ ಆವೃತ್ತಿಗಳನ್ನು ಮುಂದುವರಿಸಲು ಕಂಪನಿ ನಿರ್ಧಾರ ಕೈಕೊಂಡಿದೆ.

ತನ್ನ ಪ್ರತಿಸ್ಪರ್ಧಿ ಹೋಂಡಾ ಅಮೇಜ್ ಓಟವನ್ನು ತಡೆಗಟ್ಟಲು ಸ್ವಿಫ್ಟ್ ಡಿಜೈರ್ ರಿಗಲ್ ಆವೃತ್ತಿಯನ್ನು ಮಾರುತಿ ಬಿಡುಗಡೆಗೊಳಿಸಿತ್ತು. ಹಾಗೆಯೇ ಮಾರುತಿ ಎರ್ಟಿಗಾ ಎಂಪಿವಿಯ ಮೊದಲ ವರ್ಷಾಚರಣೆಯ ಅಂಗವಾಗಿ ಎರ್ಟಿಗಾ ಫೆಲಿಜ್ ಸ್ಪೆಷಲ್ ಎಡಿಷನ್ ಲಾಂಚ್ ಮಾಡಿತ್ತು.

ಮುಂದುವರಿಯಲಿದೆ ರಿಗಲ್, ಫೆಲಿಜ್ ವಿಶೇಷ ಆವೃತ್ತಿ

ಮಾರುಕಟ್ಟೆಗೆ ಉತ್ತೇಜನ ನೀಡುವ ಸಲುವಾಗಿ ಮಾರುತಿ ಎರ್ಟಿಗಾ ಫಿಲಿಜ್ ಹಾಗೂ ಸ್ವಿಫ್ಟಿ ಡಿಜೈರ್ ರಿಗಲ್ ಆವೃತ್ತಿಯನ್ನು ಲಾಂಚ್ ಮಾಡಿತ್ತು.

ಮುಂದುವರಿಯಲಿದೆ ರಿಗಲ್, ಫೆಲಿಜ್ ವಿಶೇಷ ಆವೃತ್ತಿ

ಮಾರಾಟವು ಹಿನ್ನಡೆ ಅನುಭವಿಸಿರುವ ಹಿನ್ನಲೆಯಲ್ಲಿ ಜೂನ್ ತಿಂಗಳ ಎಂಟು ದಿನಗಳ ಪರ್ಯಂತ ಗುರ್ಗಾಂವ್ ಹಾಗೂ ಮಾನೇಸರ್ ಘಟಕವನ್ನು ಮುಚ್ಚುಗಡೆಗೊಳಿಸಲು ಮಾರುತಿ ನಿರ್ಧರಿಸಿದೆ.

ಮಾರುತಿ ಸುಜುಕಿ ಎರ್ಟಿಗಾ ಫೆಲಿಜ್

ಪ್ರಸ್ತುತ ಮಾರುತಿ ಸುಜುಕಿ ಫೆಲಿಜ್ ವಿಶೇಷ ಆವೃತ್ತಿಯು ZXi ಹಾಗೂ VXi ವೆರಿಯಂಟ್‌ಗಳಲ್ಲಿ ಲಭ್ಯವಿದೆ. ಇದರ ಎಕ್ಸ್ ಶೋ ರೂಂ ದರವು ಅನುಕ್ರಮವಾಗಿ 9,14674 ಲಕ್ಷ ರು. ಹಾಗೂ 8.23,740 ಲಕ್ಷ ರು.ಗಳಿವೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ರಿಗಲ್

ಹಾಗೆಯೇ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ರಿಗಲ್ ವಿಶೇಷ ಆವೃತ್ತಿಯು VXi ಮಾಡೆಲ್‌ನಲ್ಲಿ ಲಭ್ಯವಿದ್ದು, ಇದರ ಮುಂಬೈ ಎಕ್ಸ್ ಶೋ ರೂಂ ದರ 6.79.692 ಲಕ್ಷ ರು.ಗಳಾಗಿವೆ.

ಮಾರುತಿ ಸುಜುಕಿ ಎರ್ಟಿಗಾ ಫೆಲಿಜ್

ಮಾರುತಿ ಸುಜುಕಿ ಎರ್ಟಿಗಾ ಫೆಲಿಜ್ ಕೆಲವೊಂದು ಆಕರ್ಷಕ ಫೀಚರ್‌ಗಳನ್ನು ಹೊಂದಿದೆ. ಅವುಗಳೆಂದರೆ.

ರಿಯರ್ ಸ್ಪಾಯ್ಲರ್,

ಬೆಳ್ಳಿ ಬಣ್ಣದ ಫ್ರಂಟ್ ಗ್ರಿಲ್,

ಫಾಗ್ ಲ್ಯಾಂಪ್ ಹೌಸಿಂಗ್,

ಏರ್ ಡ್ಯಾಮ್,

ಪರಿಷ್ಕೃತ ಔಟರ್ ರಿಯರ್ ವ್ಯೂ ಮಿರರ್,

ಸೈಡ್ ಆಂಡ್ ರಿಯರ್ ಬಾಡಿ ಗ್ರಾಫಿಕ್ಸ್

ಮಾರುತಿ ಸುಜುಕಿ ಎರ್ಟಿಗಾ ಫೆಲಿಜ್

ಇನ್ನು ಇಂಟಿರಿಯರ್ ಭಾಗಗಳಲ್ಲಿ

ಸ್ಟೀರಿಂಗ್ ವೀಲ್ ಕವಲ್

ಸೀಟ್

ಫ್ಲೋರ್ ಮ್ಯಾಟ್,

ಬ್ಯಾಕ್ ಪಾಕೆಟ್ ಓರ್ಗನೈಸರ್

ಡೋರ್ ಸಿಲ್ ಗಾರ್ಡ್

ಎರ್ಟಿಗಾ ಬ್ರಾಂಡಿಗ್

ಡಿಜಿಟಲ್ ಡಿಸ್‌ಪ್ಲೇ

ರಿವರ್ಸ್ ಪಾರ್ಕಿಂಗ್ ಸೆನ್ಸಾರ್

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ರಿಗಲ್

ಇನ್ನು ವಿಶೇಷ ನೀಲಿ ಬಣ್ಣದೊಂದಿಗೆ ಆಗಮವಾಗಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ರಿಗಲ್, ಸಾಮಾನ್ಯ ವೆರಿಯಂಟ್‌ಗಿಂತಲೂ ವಿಭಿನ್ನವಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ರಿಗಲ್

ಇದರಲ್ಲಿ ರಿಯರ್ ಪಾರ್ಕಿಂಗ್, ಸಿಲ್ವರ್ ಫ್ರಂಟ್ ಗ್ರಿಲ್, ಸಿಲ್ವರ್ ಫಾಗ್ ಲ್ಯಾಂಪ್ ಹೌಸಿಂಗ್, ಎಲೆಕ್ಟ್ರಿಕಲಿ ಹೊಂದಾಣಿಸಬಹುದಾದ ಕ್ರೋಮ್ ಬಾಡಿ ಕಲರ್ ಒಆರ್‌ವಿಎಂ ಸೌಲಭ್ಯವಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ರಿಗಲ್

ಇನ್ನು ಆಂತರಿಕ ಭಾಗದಲ್ಲಿ ಸ್ಟೀಲ್ ಡೋರ್ ಸಿಲ್ ಗಾರ್ಡ್, ಲೆಥರ್ ಸೀಟ್ ಕವರ್ ಹಾಗೂ ಪಿಲ್ಲೊ, ಫ್ಲೋರ್ ಮ್ಯಾಟ್ ಹಾಗೂ ರಿಗಲ್ ಬ್ರಾಂಡ್ ಇರಲಿದೆ.

More from DriveSpark

Article Published On: Tuesday, June 11, 2013, 10:49 [IST]
English summary
Maruti Suzuki India Limited is keeping the Swift DZire Regal and the Ertiga Feliz special edition models on sale, in order to drive sales in the domestic market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+