ಮಾರುತಿಯಿಂದ ಹ್ಯುಂಡೈ ವರ್ನಾ ಪ್ರತಿಸ್ಪರ್ಧಿ ಸದ್ಯದಲ್ಲೇ ರಸ್ತೆಗೆ!
ಮಾರುತಿ ಸುಜುಕಿ ಮಾಡೆಲ್‌ಗಳ ಪೈಕಿ ವೈಫಲ್ಯ ಅನುಭವಿಸಿದ ಕಾರು ಎಂದೇ ವಿಶ್ಲೇಷಿಸಬಹುದಾದ ಎಸ್‌ಎಕ್ಸ್4 ಬದಲಿಯಾಗಿ ನೂತನ ಆವೃತ್ತಿಯನ್ನು ಲಾಂಚ್ ಮಾಡಲು ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆ ಸಿದ್ಧತೆ ನಡೆಸುತ್ತಿದೆ.
ನಿಮ್ಮ ಮಾಹಿತಿಗಾಗಿ 2007ನೇ ಇಸವಿಯಲ್ಲಿ ದೇಶಕ್ಕೆ ಮೊದಲ ಬಾರಿ ಪರಿಚಯಗೊಂಡಿದ್ದ ಎಸ್‌ಎಕ್ಸ್4 ಮಾರಾಟದ ವಿಚಾರದಲ್ಲಿ ಭಾರಿ ಹಿನ್ನಡೆಯನ್ನು ಅನುಭವಿಸಿತ್ತು. ಈ ನಿಟ್ಟಿನಲ್ಲಿ ಸದ್ಯ ಲಭ್ಯವಿರುವ ಎಸ್‌ಎಕ್ಸ್4 ಸೆಡಾನ್ ಕಾರನ್ನು ಬದಲಾಯಿಸಲು ಮಾರುತಿ ನಿರ್ಧರಿಸಿದೆ.
ಹೊಸ ಸೆಡಾನ್ ಕಾರು ವೈಎಲ್1 ಕೋಡ್ ಹೆಸರು ಪಡೆದುಕೊಂಡಿದ್ದು, 2014ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಕಾಣಲಿದೆ. ತದಾ ಬಳಿಕ ದೇಶದ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಸ್ಫೂರ್ತಿ
ಮಾರುತಿ ಮಾತೃಸಂಸ್ಥೆ ಸುಜುಕಿ ಆಂಥೆಟಿಕ್ ಕಾನ್ಸೆಪ್ಟ್‌ನಿಂದ ಸ್ಪೂರ್ತಿ ಪಡೆದಿರುವ ವೈಎಲ್1 ಸೆಡಾನ್ ಕಾರು ಜಾಗತಿಕ ಪ್ರದರ್ಶನದ ಅಂಗವಾಗಿ ವರ್ಷಾರಂಭದಲ್ಲಿ ನಡೆದ ಶಾಂಘೈ ಮೋಟಾರು ಶೋದಲ್ಲಿ ಪ್ರದರ್ಶನಗೊಂಡಿತ್ತು.

ಎರ್ಟಿಗಾ ಫ್ಲಾಟ್ ಫಾರ್ಮ್
ಈ ನಡುವೆ ಮಾರುತಿ ಸುಜುಕಿ ಎರ್ಟಿಗಾ ಫ್ಲಾಟ್‌ಫಾರ್ಮ್‌ನ್ಲಲಿ ವೈಎಲ್1 ನಿರ್ಮಾಣವಾಗಲಿದೆ ಎಂಬ ವರದಿಯೂ ಇದೆ. ಹಾಗೆಯೇ ಸ್ವಿಫ್ಟ್ ಹಾಗೂ ಎರ್ಟಿಗಾ ಆವೃತ್ತಿಗಳ ಬಿಡಿಭಾಗಗಳನ್ನು ಪಡೆಯಲಿದೆಯೆಂಬ ಸೂಚನೆಯೂ ಲಭಿಸಿದೆ.

ಸಿ ಸೆಗ್ಮೆಂಟ್
ಎರ್ಟಿಗಾದಲ್ಲಿ ಕಂಡುಬಂದಿರುವ ಕೆ ಸಿರೀಸ್ ಪೆಟ್ರೋಲ್ ಎಂಜಿನ್‌ನಿಂದ ವೈಎಲ್1 ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ. ಇದು ಎಂಟ್ರಿ ಲೆವೆಲ್ ಸಿ ಸೆಗ್ಮೆಂಟ್‌ನಲ್ಲಿ ಹೆಚ್ಚು ಶಕ್ತಿ ತುಂಬಲಿದೆ.

ಡೀಸೆಲ್ ಎಂಜಿನ್
ಇದಕ್ಕೆ ಸಮಾನವಾಗಿ 1.3 ಲೀಟರ್ ಮಲ್ಟಿಜೆಟ್ ಟರ್ಬೊ ಡೀಸೆಲ್ ಸಹ ಬಳಕೆಯಾಗುವ ಸಾಧ್ಯತೆಯಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

ಹ್ಯುಂಡೈ ವರ್ನಾ ಪ್ರತಿಸ್ಪರ್ಧಿ
ಹ್ಯುಂಡೈ ವರ್ನಾ, ನಿಸ್ಸಾನ್ ಸನ್ನಿ ಹಾಗೂ ರೆನೊ ಸ್ಕಾಲಾಗಳಂತಹ ಆವೃತ್ತಿಗಳನ್ನು ವೈಎಲ್1 ಹಿಂದಿಕ್ಕುವ ಯೋಜನೆ ಹೊಂದಿದೆ. ರಿಯರ್ ಎಸಿ ವೆಂಟ್, ಕಿ ಲೆಸ್ ಎಂಟ್ರಿ, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಇತರ ಪ್ರಮುಖ ವೈಶಿಷ್ಟ್ಯಗಳಾಗಿವೆ.

ಸೆಡಾನ್ ಕಾರು
ಒಟ್ಟಿನಲ್ಲಿ ಸಣ್ಣ ಕಾರು ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿರುವ ಮಾರುತಿ ಸೆಡಾನ್ ಸೆಗ್ಮೆಂಟ್‌ನಲ್ಲೂ ಗರಿಷ್ಠ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.


Click it and Unblock the Notifications








