ದಾರಿಬಿಡಿ ಬರುತ್ತಿದೆ ಮಾರುತಿ ಎರ್ಟಿಗಾ ಸಿಎನ್‌ಜಿ ವರ್ಷನ್

By Nagaraja

ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರ ವರ್ಧಿಸುತ್ತಿರುವಂತೆಯೇ ಆಟೋ ಕಂಪನಿಗಳು ಬದಲಿ ವ್ಯವಸ್ಥೆ ಕಂಡುಕೊಳ್ಳುವ ಪ್ರಯತ್ನದಲ್ಲಿ ತೊಡಗಿವೆ. ಈ ಮೂಲಕ ಕಳೆಗುಂದಿರುವ ಮಾರುಕಟ್ಟೆಗೆ ಉತ್ತೇಜನ ನೀಡುವ ಪ್ರಯತ್ನ ಮಾಡುತ್ತಿವೆ.

ಇದರಂತೆ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ತನ್ನ ಜನಪ್ರಿಯ ಎರ್ಟಿಗಾದ ಸಿಎನ್‌ಜಿ ಆವೃತ್ತಿಯನ್ನು ಸದ್ಯದಲ್ಲೇ ಬಿಡುಗಡೆಗೊಳಿಸಲಿದೆ. ಮೂಲಗಳ ಪ್ರಕಾರ ಮಾರುತಿ ಎರ್ಟಿಗಾ ಸಿಎನ್‌ಜಿ ವರ್ಷನ್ ಮುಂದಿನ ವಾರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.

ಮಲ್ಟಿ ಪರ್ಪಸ್ ವಾಹನಗಳಲ್ಲಿ ತನ್ನದೇ ಆದ ಸ್ಥಾನ ಕಾಪಾಡಿಕೊಂಡಿರುವ ಮಾರುತಿ ಎರ್ಟಿಗಾ, ಲೈಫ್ ಯುಟಿಲಿಟಿ ವೆಹಿಕಲ್ ಎಂಬ ನೂತನ ವಿಭಾಗ ಸೃಷ್ಟಿ ಮಾಡಿತ್ತು. ಪ್ರಸ್ತುತ ಸಿಎನ್‌ಜಿ ವರ್ಷನ್ ಸ್ಟಾಂಡರ್ಡ್‌ ವೆರಿಯಂಟ್‌ಗಿಂತಲೂ ರು. 30,000ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್ ಕ್ಲಿಕ್ಕಿಸಿರಿ....

ದಾರಿಬಿಡಿ ಬರುತ್ತಿದೆ ಮಾರುತಿ ಎರ್ಟಿಗಾ ಸಿಎನ್‌ಜಿ ವರ್ಷನ್

ಮಾರುತಿ ಎರ್ಟಿಗಾ ಎಲ್‌ಎಕ್ಸ್‌ಐ ಹಾಗೂ ವಿಎಕ್ಸ್‌ಐ ವೆರಿಯಂಟ್‌ಗಳಲ್ಲಿ ಮಾತ್ರ ಸಿಎನ್‌ಜಿ ಕಿಟ್ ಲಭ್ಯವಿರಲಿದೆ.

ದಾರಿಬಿಡಿ ಬರುತ್ತಿದೆ ಮಾರುತಿ ಎರ್ಟಿಗಾ ಸಿಎನ್‌ಜಿ ವರ್ಷನ್

ಮಾರುತಿ ಎರ್ಟಿಗಾ ಸಿಎನ್‌ಜಿ, 1.4 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 93 ಪಿಎಸ್ ಪವರ್ (130ಎನ್‌ಎಂ ಟರ್ಕ್ಯೂ) ಉತ್ಪಾದಿಸಲಿದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ.

ದಾರಿಬಿಡಿ ಬರುತ್ತಿದೆ ಮಾರುತಿ ಎರ್ಟಿಗಾ ಸಿಎನ್‌ಜಿ ವರ್ಷನ್

ಅಂದರೆ 45 ಲೀಟರ್ ಪೆಟ್ರೋಲ್ ಟ್ಯಾಂಕ್ ಜತೆಗೆ ಮಾರುತಿ ಎರ್ಟಿಗಾ ಎಂಪಿವಿ 60 ಲೀಟರ್ ಸಿಎನ್‌ಜಿ ಟ್ಯಾಂಕ್ ಪಡೆಯಲಿದೆ. ಇದು ಬೂಟ್‌ನಲ್ಲಿ ಲಗತ್ತಿಸಲಾಗುತ್ತದೆ.

ದಾರಿಬಿಡಿ ಬರುತ್ತಿದೆ ಮಾರುತಿ ಎರ್ಟಿಗಾ ಸಿಎನ್‌ಜಿ ವರ್ಷನ್

ಪ್ರಸ್ತುತ ಮಾರುಕಟ್ಟೆಯಲ್ಲಿ ಷೆವರ್ಲೆ ಎಂಜಾ, ಮಹೀಂದ್ರ ಕ್ವಾಂಟೊ, ಫೋಟೊ ಇಕೊಸ್ಪೋರ್ಟ್‌ಗಳಂತಹ ಕಾರುಗಳಿಗೆ ಎರ್ಟಿಗಾ ಪ್ರಬಲ ಪೈಪೋಟಿ ನೀಡುತ್ತಿದೆ.

ದಾರಿಬಿಡಿ ಬರುತ್ತಿದೆ ಮಾರುತಿ ಎರ್ಟಿಗಾ ಸಿಎನ್‌ಜಿ ವರ್ಷನ್

ಸದ್ಯ ಮಾರುಕಟ್ಟೆಯಲ್ಲಿ ಮೂರು ವೆರಿಯಂಟ್‌ಗಳಲ್ಲಿ ಮಾರುತಿ ಎರ್ಟಿಗಾ ಲಭ್ಯವಿದ್ದು, ಡೀಸೆಲ್ ಹಾಗೂ ಪೆಟ್ರೋಲ್ ಮಾದರಿಗಳಿಗೆ 5.99 ಲಕ್ಷ ರು.ಗಳಿಂದ 8.45 ಲಕ್ಷ ರು.ಗಳ ವರೆಗೆ ದೆಹಲಿ ಎಕ್ಸ್ ಶೋ ರೂಂ ದರಗಳಿವೆ.

More from DriveSpark

Article Published On: Saturday, June 8, 2013, 16:31 [IST]
English summary
Maruti Ertiga CNG is expected to be launched in next week. The Ertiga CNG variant would cost about Rs 30,000 more than the regular variant in the same trim.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+