ಬೆಂಝ್ ಸಿ ಕ್ಲಾಸ್ ಡೀಸೆಲ್ ಬೆಲೆ 43 ಲಕ್ಷ, ಮೈಲೇಜ್ 19.27 ನಂಬ್ತೀರಾ?
ಜರ್ಮನಿಯ ಐಷಾರಾಮಿ ಕಾರು ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಗೆ ಮಗದೊಂದು ಆಕರ್ಷಕ ಕಾರನ್ನು ಪರಿಚಯಿಸಿದೆ. ಐಷಾರಾಮಿ ಕಾರು ವಿಭಾಗದಲ್ಲಿನ ಏರುಗತಿಯನ್ನು ಮನಗಂಡಿರುವ ಬೆಂಝ್ ಸಂಸ್ಥೆಯೀಗ 46 ಲಕ್ಷ ರು.ಗಳಷ್ಟು (ಆನ್ ರೋಡ್ ಬೆಲೆ) ದುಬಾರಿಯ ಬೆಂಝ್ ಸಿ ಕ್ಲಾಸ್ ಡೀಸೆಲ್ ಮಾದರಿ ಬಿಡುಗಡೆ ಮಾಡಿದೆ. ಇದು ಈಗಿರುವ ಸಿ ಕ್ಲಾಸ್ ಪೆಟ್ರೋಲ್ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ.
ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಸಿ 220 ಸಿಡಿಐ ಸ್ಟೈಲ್ - 39.90 ಲಕ್ಷ ರು.
- ಸಿ 220 ಸಿಡಿಐ ಅವಂಟ್ ಗಾರ್ಡ್ ಡೀಸೆಲ್ - 42.90 ಲಕ್ಷ ರು.
ನೂತನ ಬೆಂಝ್ ಸಿ ಕ್ಲಾಸ್ ಎರಡು ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ ಸಿ220 ಸಿಡಿಐ ಸ್ಟೈಲ್ ಮತ್ತು ಸಿ220 ಸಿಡಿಐ ಅವಂಟ್ ಗಾರ್ಡ್. ಇಲ್ಲಿ ಗಮನಾರ್ಹ ಸಂಗತಿಯೆಂದರೆ ನೂತನ ಸಿ ಕ್ಲಾಸ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಭಾರತ ವಾಹನ ಅಧ್ಯಯನ ಸಂಸ್ಥೆಯ (ಎಆರ್‌ಎಐ) ಮಾನ್ಯತೆಯ ಪ್ರಕಾರ ಪ್ರತಿ ಲೀಟರ್‌ಗೆ 19.27 ಲೀಟರ್ ಮೈಲೇಜ್ ನೀಡಲಿದೆ. ನೈಜ ಪರಿಸ್ಥಿತಿಯಲ್ಲಿ ಇದರ ಮೈಲೇಜ್ ಎಷ್ಟೆಂಬುದನ್ನು ಈಗ ಖಚಿತಪಡಿಸಲು ಸಾಧ್ಯವಿಲ್ಲದಿದ್ದರೂ ಐಷಾರಾಮಿ ವಿಭಾಗದಲ್ಲಿ ಇಷ್ಟೊಂದು ಮೈಲೇಜ್ ಕಾಪಾಡಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ.

ಇನ್ನು ಇಂಧನವನ್ನು ಮತ್ತಷ್ಟು ಉಳಿತಾಯ ಮಾಡುವ ನಿಟ್ಟಿನಲ್ಲಿ ಇಕೊ ಸ್ಟ್ಯಾರ್ಟ್/ಸ್ಟಾರ್ಟ್ ಆಯ್ಕೆಯನ್ನು ನೀಡಲಾಗಿದೆ. ಇದರ 2.2 ಲೀಟರ್ ಎಂಜಿನ್ 170 ಅಶ್ವಶಕ್ತಿ (400 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಅಂತೆಯೇ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅಥವಾ 7ಜಿ ಟ್ರಾನಿಕ್ ಪ್ಲಸ್ ಗೇರ್ ಬಾಕ್ಸ್ ಹೊಂದಿರಲಿದೆ. ಹೊಸ ಸಿ ಕ್ಲಾಸ್‌ನಲ್ಲಿ ನಾವೀನ್ಯತೆಯ ಡ್ರೈವ್ ಮೋಡ್ ಸೆಲೆಕ್ಟರ್ ಜೊತೆಗೆ ಐದು ಡ್ರೈವಿಂಗ್ ಮೋಡ್‌ಗಳನ್ನು ಕಾಣಬಹುದಾಗಿದೆ.

ಬೆಸ್ಟ್ ಇನ್ ಸೆಗ್ಮೆಂಟ್
ಉದ್ದವಾದ ಚಕ್ರಾಂತರ,
ಗರಿಷ್ಟ ತಿರುಗುಬಲ,
ಗರಿಷ್ಠ ಇಂಧನ ಕ್ಷಮತೆ,
ಪ್ಯಾನರಾಮಿಕ್ ಸನ್ ರೂಫ್,
ರಿವರ್ಸ್ ಕ್ಯಾಮೆರಾ
ಇನ್ನೊಂದೆಡೆ ದೇಶಕ್ಕೆ ಪ್ರವೇಶಿಸಿ ಮೂರು ತಿಂಗಳಾಗುವುದಷ್ಟರಲ್ಲಿ ಸಿ ಕ್ಲಾಸ್ ಅವಂಟ್ ಗಾರ್ಡ್ ಪೆಟ್ರೋಲ್ ಮಾದರಿಯ ನಿರ್ಮಾಣ ಪ್ರಕ್ರಿಯೆ ಸ್ಥಳೀಯವಾಗಿ ಆರಂಭಿಸಿರುವುದಾಗಿ ಸಂಸ್ಥೆ ಘೋಷಿಸಿದೆ. ಇದರ ಎಕ್ಸ್ ಶೋ ರೂಂ ಬೆಲೆ 40.90 ಲಕ್ಷ ರು.ಗಳಾಗಿರಲಿದೆ.

ಸುರಕ್ಷತೆ
7 ಏರ್ ಬ್ಯಾಗ್,
ಪ್ರಿ ಸೇಫ್,
ಅಪಾಯ ಎಚ್ಚರ,
ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ,
ಹಿಲ್ ಸ್ಟ್ಯಾರ್ಟ್ ಅಸಿಸ್ಟ್,
ಇಎಸ್ ಪಿ, ಎಎಸ್ ಆರ್, ಬಿಎಎಸ್, ಎಬಿಎಸ್

ಆಯಾಮ (ಎಂಎಂ)
ಎತ್ತರ - 1442
ವೀಲ್ ಬೇಸ್ - 2840
ಭಾರ (ಕೆ.ಜಿ) - 1655
ಸಾಮಾನಿಡುವ ಜಾಗದ ಸಾಮರ್ಥ್ಯ - 480 ಲೀಟರ್
ಟರ್ನಿಂಗ್ ಸರ್ಕಲ್ - 11.22 ಮೀಟರ್
ಹೊರಗಡೆ ಡೈನಾಮಿಕ್ ಎಲ್‌ಇಡಿ ಹೆಡ್ ಲ್ಯಾಂಪ್ ಜೊತೆ ಎಲ್‌ಇಡಿ ಇಂಟೆಲಿಜೆಟ್ ಸಿಸ್ಟಂ ಹೊಂದಿರುವ ಹೊಸ ಸಿ ಕ್ಲಾಸ್ ಡೀಸೆಲ್ ಕಾರನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.

ವಿಶಿಷ್ಟತೆ
ಕ್ರೂಸ್ ಕಂಟ್ರೋಲ್
ಡ್ರೈವ್ ಮೋಡ್ ಸೆಲೆಕ್ಟರ್
ಇಕೊ ಸ್ಟ್ಯಾರ್ಟ್/ಸ್ಟಾಪ್ ಫಂಕ್ಷನ್,
ಆರ್ಟಿಕೊ ಲೆಥರ್ ಸೀಟು,
3ಡಿ ನೇವಿಗೇಷನ್,
ಬ್ಲೂಟೂತ್ ಕನೆಕ್ಟಿವಿಟಿ,
ರಿವರ್ಸ್ ಕ್ಯಾಮೆರಾ,
ಪ್ಯಾನರಾಮಿಕ್ ಸ್ಲೈಡಿಂಗ್ ಸನ್ ರೂಫ್,
ಕೀಲೆಸ್ ಗೊ ಫಂಕ್ಷನ್


Click it and Unblock the Notifications








