ಇಗೋ ಬಂದಿದೆ ನೋಡು ಬೆಂಝ್ ಕೋಟಿಯ ಕಾರು
ಇಗೋ ಬಂದಿದೆ ನೋಡು ಮರ್ಸಿಡಿಸ್ ಬೆಂಝ್ ಕೋಟಿ ಬೆಲೆಬಾಳುವ ಕಾರು. ಹೌದು, ಜಾಗತಿಕ ಮಟ್ಟದಲ್ಲಿ ದುಬಾರಿ ಕಾರುಗಳನ್ನು ತಯಾರಿಸುವುದರಲ್ಲಿ ಹೆಸರುವಾಸಿಯಾಗಿರುವ ಜರ್ಮನಿಯ ಲಗ್ಷುರಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಇನ್ನೊಂದು ಆಕರ್ಷಕ ಕಾರನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿದೆ.
ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಬೆಂಝ್‌ನ ಅತಿ ದುಬಾರಿ 2014 ಇ63 ಎಎಂಜಿ ನಿರ್ವಹಣಾ ಸೆಡಾನ್ ಕಾರು ಬಿಡುಗಡೆಗೊಂಡಿದೆ.
ಹೆಸರಲ್ಲೇ ಸೂಚಿಸಿದ ಹಾಗೇ ಎಎಂಜಿ ಎಂದಾಕ್ಷಣ ಶಕ್ತಿಶಾಲಿ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಕಂಪ್ಲೀಟ್ ಬಿಲ್ಟ್ ಯುನಿಟ್ ಮೂಲಕ ಇದು ದೇಶಕ್ಕೆ ಪರಿಚಯವಾಗಿದೆ. ಅಂದ ಹಾಗೆ ಬೆಂಝ್ ದರವೆಷ್ಟು? ಹೆಚ್ಚಿನ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ದರ ಮಾಹಿತಿ
ಮರ್ಸಿಡಿಸ್ ಬೆಂಝ್ ಇ63 ಎಎಂಜಿ ದೆಹಲಿ ಎಕ್ಸ್ ಶೋ ರೂಂ ದರ 1.29 ಕೋಟಿ ರು.ಗಳಾಗಿವೆ.

ಎಂಜಿನ್
ಇದರಲ್ಲಿ 5.5 ಲೀಟರ್ ಟ್ವಿನ್ ಟರ್ಬೊ ವಿ8 ಎಂಜಿನ್ ಆಳವಡಿಸಲಾಗಿದ್ದು, 557 ಅಶ್ವಶಕ್ತಿ (720 ಎನ್‌ಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ನಿರ್ವಹಣೆ
ಮರ್ಸಿಡಿಸ್ ಬೆಂಝ್ ಇ63 ಎಎಂಜಿ, 4.2 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಪ್ರತಿ ಗಂಟೆಗೆ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಆಕರ್ಷಕ ವಿನ್ಯಾಸ
ಇಂಟಿರಿಯರ್ ಸೇರಿದಂತೆ ಎಕ್ಸ್‌ಟೀರಿಯರ್ ವಿನ್ಯಾಸಗಳು ನೈಜ ಬೆಂಝ್ ವಿನ್ಯಾಸವನ್ನು ಪಡೆದುಕೊಂಡಿದೆ.

ಸುರಕ್ಷಾ ಮಾನದಂಡ
ಆಕ್ಟಿವ್ ಪಾರ್ಕಿಂಗ್ ಅಸಿಸ್ಟ್‌ಗಳಂತಹ ಆಧುನಿಕ ಫೀಚರ್‌ಗಳನ್ನು ಪಡೆದುಕೊಂಡಿದೆ.

ಮರ್ಸಿಡಿಸ್ ಬೆಂಝ್ ಇ63 ಎಎಂಜಿ
ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








