ಮರ್ಸಿಡಿಸ್ ಬೆಂಝ್ ಇ350 ಸಿಡಿಐ ಡೀಸೆಲ್ ಕಾರು ಲಾಂಚ್
ಮರ್ಸಿಡಿಸ್ ಬೆಂಝ್‌ನ ಅತ್ಯಂತ ಐಷಾರಾಮಿ ಕಾರುಗಳಲ್ಲಿ ಒಂದಾಗಿರುವ ಇ350 ಸಿಡಿಐ ಡೀಸೆಲ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ಮರ್ಸಿಡಿಸ್ ಬೆಂಝ್ ಇ350 ಪುಣೆ ಎಕ್ಸ್ ಶೋ ರೂಂ ಬೆಲೆ 57 .42 ಲಕ್ಷ ರು.ಗಳಾಗಿರಲಿದೆ.
ಬೆಂಝ್ ಇ350 ಕ್ಲಾಸ್‌ನಲ್ಲಿ ಹೆಚ್ಚುವರಿ ಬ್ಲೂಟೆಕ್ ಡೀಸೆಲ್ ಎಂಜಿನ್ ಆಯ್ಕೆಯು ದೇಶದಲ್ಲಿನ ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿದೆ. ಪ್ರಸ್ತುತ 2.0 ಲೀಟರ್ ಬೇಸ್ ಪೆಟ್ರೋಲ್ (ಇ200), 2.1 ಲೀಟರ್ ಡೀಸೆಲ್ (ಇ250ಸಿಡಿಐ) ಮತ್ತು 5.5 ಲೀಟರ್ ವಿ8 ಪೆಟ್ರೋಲ್ (ಇ63 ಎಎಂಜಿ) ಎಂಜಿನ್ ಆಯ್ಕೆಗಳು ಮಾತ್ರ ಲಭ್ಯವಿದೆ. ಇದಕ್ಕೀಗ ಹೊಸತಾದ 3.0 ಲೀಟರ್ ವಿ6 ಟ್ವಿನ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ (ಇ350) ಸೇರ್ಪಡೆಯಾಗಲಿದೆ.

ಬೆಂಝ್‌ನ ಹೊಸ ಎಂಜಿನ್ 266 ಅಶ್ವಶಕ್ತಿ ಉತ್ಪಾದಿಸಲಿದೆ 620 ಎನ್‌ಎಂ ಟಾರ್ಕ್ ಇರಲಿದೆ. ಇದು 7 ಸ್ಪೀಡ್ ಡ್ಯುಯಲ್ ಕ್ಲಚ್ 7 ಜಿ ಟ್ರಾನಿಕ್ ಪ್ಲಸ್ ಗೇರ್ ಬಾಕ್ಸ್ ಸಹ ಇರಲಿದೆ.

ಸಂಸ್ಥೆಯ ಪ್ರಕಾರ ಬೆಂಝ್ ಬ್ಲೂಟೆಕ್ ಡೀಸೆಲ್ ಎಂಜಿನ್ 6.6 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀಮೀ. ಮತ್ತು ಗರಿಷ್ಠ ಗಂಟೆಗೆ 250 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

ಎಂಜಿನ್‌ಗೆ ತಕ್ಕಂತೆ ಹೊಸ ಇ350 ಕಾರು ಹೆಚ್ಚು ಕ್ರೀಡಾತ್ಮಕ ಲುಕ್‌ನಲ್ಲಿ ಗೋಚರಿಸುವ ನಿಟ್ಟಿನಲ್ಲಿ ಬೆಂಝ್ ಕೆಲವೊಂದು ಸ್ಪೋರ್ಟಿಯರ್ ವೈಶಿಷ್ಟ್ಯಗಳನ್ನು ಆಳವಡಿಸಿದೆ.

ಹೊಸ ಮಾಹಿತಿ ಮನರಂಜನಾ ಸಿಸ್ಟಂ, ಪ್ಯಾನರೋಮಿಕ್ ಸನ್‌ರೂಫ್, ಗ್ಲೋಸ್ ಬ್ಲ್ಯಾಕ್ ಆಶ್ ವುಡ್ ಟ್ರಿಮ್ ಇರಲಿದೆ. ಇವೆಲ್ಲದರ ಜೊತೆಗೆ 360 ಡಿಗ್ರಿ ಕ್ಯಾಮೆರಾ, ಇಂಟೆಲಿಜೆಟ್ ಲೈಟ್ ಸಿಸ್ಟಂ, ಆಕ್ಟಿವ್ ಪಾರ್ಕ್ ಅಸಿಸ್ಟ್, ಅಟೆಕ್ಷನ್ ಅಸಿಸ್ಟ್, ಹರ್ಮನ್ ಕಾರ್ಡನ್ ಸೌರಂಡ್ 610 ವಾಟ್ಸ್ 14 ಸ್ಪೀಕರ್ಸ್, 17 ಇಂಚು ಮಲ್ಟಿ ಸ್ಪೋಕ್ ಅಲಾಯ್ ವೀಲ್, ಕಮಾಂಡ್ ಆನ್‌ಲೈನ್ ಮತ್ತು ವಾಯ್ಸ್ ಕಂಟ್ರೋಲ್ ಇರಲಿದೆ.

ಅಂದ ಹಾಗೆ ಹೊಸ ಬೆಂಝ್ ಇ350 ಬ್ಲೂಟೆಕ್ ಡೀಸೆಲ್ ಕಾರು ಪುಣೆಯ ಚಕನ್ ಘಟಕದಲ್ಲಿ ನಿರ್ಮಾಣವಾಗಲಿದ್ದು, ಬಿಎಂಡಬ್ಲ್ಯು 530ಡಿ ಮತ್ತು ಆಡಿ ಎ6 3.0 ಲೀಟರ್ ಡೀಸೆಲ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.


Click it and Unblock the Notifications








