ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ಕಾರು- ಮರ್ಸಿಡಿಸ್
ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ಕಾರು ಯಾವುದು? ಇದಕ್ಕೆ ಉತ್ತರ ನಿಮಗಿಲ್ಲಿ ಸಿಗಬಹುದು. ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಎಸ್ ಎಎಂಜಿ ಎಲೆಕ್ಟ್ರಿಕ್ ಡ್ರೈವ್ ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೇವಲ 7 ನಿಮಿಷ ಹಾಗೂ 56.234 ಸೆಕೆಂಡುಗಳಲ್ಲಿ ಲ್ಯಾಪ್ ರಿಂಗ್ ಹಾದು ಹೋಗುವ ಎಎಂಜಿ ಸೂಪರ್ ಕಾರು ನೂತನ ದಾಖಲೆ ನಿರ್ಮಿಸಿದೆ. ಇದೇ ಮೊದಲ ಬಾರಿಗೆ 8ಕ್ಕೂ ನಿಮಿಷಕ್ಕೂ ಕಡಿಮೆ ಸಮಯದಲ್ಲಿ ಬೆಂಝ್ ಈ ಸಾಧನೆ ಮಾಡಿದೆ.
ಅಂದ ಹಾಗೆ ಎಸ್‌ಎಲ್‌ಎಸ್ ಎಲೆಕ್ಟ್ರಿಕ್ ಡ್ರೈವ್ ನಾಲ್ಕು ಮೋಟಾರ್‌ಗಳಿಂದ ನಿಯಂತ್ರಿಸಲ್ಪಡುತ್ತಿದೆ. ಇದರಿಂದ ಪ್ರತಿ ವೀಲ್‌ಗೂ ಶಕ್ತಿ ವರ್ಗಾವಣೆ ಆಗಲಿದ್ದು, ಒಟ್ಟಾರೆ 751 ಅಶ್ವಶಕ್ತಿ (1000 ಎನ್‌ಎಂ ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಎಲೆಕ್ಟ್ರಿಕ್ ಪವರ್ ವಾಹನಗಳ ಪೈಕಿ ಕೇವಲ ಎಂಟು ನಿಮಿಷದೊಳಗೆ ರಿಂಗ್ ಲ್ಯಾಪ್ ದೂರವನ್ನು ಕ್ರಮಿಕರಿಸಿರುವ ಮೊದಲ ಕಾರೆಂಬ ಖ್ಯಾತಿಗೆ ಮರ್ಸಿಡಿಸ್ ಪಾತ್ರವಾಗಿದೆ.

ಇನ್ನು ಮರ್ಸಿಡಿಸ್ ಬೆಂಝ್ ಎಲೆಕ್ಟ್ರಿಕ್ ಡ್ರೈವ್ ಕೇವಲ 3.9 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗ ವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಪ್ರತಿ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಸಹಜವಾಗಿಯೇ ಎಲೆಕ್ಟ್ರಿಕ್ ಡ್ರೈವ್‌ನಿಂದ ನಿಯಂತ್ರಿಸಲ್ಪಟ್ಟಿದ್ದರಿಂದ ಹೆಚ್ಚಿನ ಶಬ್ದ ಮಾಲಿನ್ಯವಿಲ್ಲದೆ ಸುಗಮ ಸಂಚರವನ್ನು ನೀಡುತ್ತದೆ.







ವೀಡಿಯೋ ವೀಕ್ಷಿಸಿ


Click it and Unblock the Notifications








