ಅಂತರ್ಜಾಲದಲ್ಲಿ ಅತಿ ಹೆಚ್ಚು ಉಲ್ಲೇಖಿಸಲ್ಪಟ್ಟ ಕಾರು ಬ್ರಾಂಡ್ ಯಾವುದು?

By Nagaraja

ನಿಮಗೆಲ್ಲರಿಗೂ ತಿಳಿದಂತೆಯೇ 2014 ಫೆಬ್ರವರಿ ತಿಂಗಳಲ್ಲಿ ದೇಶದ ವಾಹನೋದ್ಯಮ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಪ್ರಮುಖ ಕಾರಣವೆಂದರೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನೇರವೇರಿದ 2014 ಆಟೋ ಎಕ್ಸ್‌ಪೋ. ನಿರೀಕ್ಷೆಯಂತೆಯೇ ವಾಹನ ಪ್ರೇಮಿಗಳನ್ನು ಆಕರ್ಷಿಸುವಲ್ಲಿ ಆಟೋ ಎಕ್ಸ್ ಪೋ ಯಶಸ್ವಿಯಾಗಿದೆ. ಕೇವಲ ದೇಶಿಯ ಕ್ಷೇತ್ರದಿಂದ ಮಾತ್ರವಲ್ಲದೆ ವಿದೇಶಿ ವಾಹನೋದ್ಯಮ ಸಹ ಈ ಪ್ರತಿಷ್ಠಿತ ವಾಹನ ಪ್ರದರ್ಶನ ಮೇಳವನ್ನು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದವು.

ಅಷ್ಟಕ್ಕೂ ದೇಶದ ಪ್ರತಿಷ್ಠಿತ ಆಟೋ ಶೋದಲ್ಲಿ ಅತಿ ಹೆಚ್ಚು ಉಲ್ಲೇಖಿಸಲ್ಪಟ್ಟ ವಾಹನ ತಯಾರಕ ಸಂಸ್ಥೆ ಹಾಗೂ ಮಾದರಿ ಯಾವುದು ಎಂಬುದು ನಿಮಗೆ ಗೊತ್ತೇ? ಇದಕ್ಕುತ್ತರ ಕಂಡುಹುಡುಕುವ ಪ್ರಯತ್ನವನ್ನು ಇಂಡಿಯಾಆಟೋ ಸಾಮಾಜಿಕ ಸೂಚ್ಯಂಕ ವರದಿಯು ಪ್ರಯತ್ನ ಮಾಡಿದೆ. ಅಂತರ್ಜಾಲದಲ್ಲಿ ಫೆಬ್ರವರಿ ತಿಂಗಳಲ್ಲಿ ಅತಿ ಹೆಚ್ಚು ಬಾರಿ ಉಲ್ಲೇಖಿಸಲಾದ ಬ್ರಾಂಡ್‌ಗಳನ್ನು ಕೆಳಗಡೆ ಕೊಡಲಾಗಿದೆ.

ಅಂತರ್ಜಾಲದಲ್ಲಿ ಅತಿ ಹೆಚ್ಚು ಉಲ್ಲೇಖಿಸಲ್ಪಟ್ಟ ಕಾರು ಬ್ರಾಂಡ್

ನೀವು ನಂಬ್ತೀರೋ ಬಿಡ್ತೀರೋ 2014 ಫೆಬ್ರವರಿ ತಿಂಗಳಲ್ಲಿ ನಡೆದ ಆಟೋ ಎಕ್ಸ್ ಪೋದ ವೇಳೆಯಲ್ಲಿ ಟೊಯೊಟಾವನ್ನು ಅತಿ ಹೆಚ್ಚು ಬಾರಿ ಪ್ರಸ್ತಾಪಿಸಲಾಗಿದೆ. ಇದಾದ ಬಳಿಕ ಫೋರ್ಡ್, ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಹಾಗೂ ಆಡಿ ಗುರುತಿಸಿಕೊಂಡಿವೆ.

ಬ್ರಾಂಡ್ ವೈಬ್ರಂಟ್ ಇಂಡೆಕ್ಸ್

ಬ್ರಾಂಡ್ ವೈಬ್ರಂಟ್ ಇಂಡೆಕ್ಸ್

ಆಟೋ ಎಕ್ಸ್ ಪೋದಲ್ಲಿ ನೂತನ ಬಿಎಂಡಬ್ಲ್ಯು 3 ಜಿಟಿ ಲಾಂಚ್ ಮಾಡಿರುವುದು ಜರ್ಮನಿಯ ಈ ಐಷಾರಾಮಿ ವಾಹನ ತಯಾರಕ ಸಂಸ್ಥೆಗೆ ವೈಬ್ರಂಟ್ ಸೂಚ್ಯಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಸಹಕಾರಿಯಾಗಿದೆ. ಇದನ್ನು ಜಾಗ್ವಾರ್ (ಎಫ್ ಟೈಪ್ ಕೂಪೆ) ಮತ್ತು ಮರ್ಸಿಡಿಸ್ ಬೆಂಝ್ (ಎಸ್ ಕ್ಲಾಸ್ ಮತ್ತು ಜಿಎಲ್‌ಎ ಕ್ಲಾಸ್) ಹಿಂಬಾಲಿಸಿದೆ.

ಮಾಸಿಕ ಮನೋಭಾವ (Sentiment)

ಮಾಸಿಕ ಮನೋಭಾವ (Sentiment)

ಈ ವಿಭಾಗದಲ್ಲಿ ರೆನೊ ಕ್ವಿಡ್ ಅತಿ ಹೆಚ್ಚು ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಅದೇ ಹೊತ್ತಿಗೆ ಸ್ವಲ್ಪ ದುಬಾರಿಯಾಗಿರುವುದು ಫೋಕ್ಸ್‌ವ್ಯಾಗನ್ ವೆಂಟೊಗೆ ನಕಾರಾತ್ಮಕ ಪರಿಣಾಮ ಬೀರಿದೆ.

ಅಗ್ರ ವಿಭಾಗ (ಎಸ್‌ಯುವಿ)

ಅಗ್ರ ವಿಭಾಗ (ಎಸ್‌ಯುವಿ)

ಈ ಪಟ್ಟಿಯಲ್ಲಿ ಮಹೀಂದ್ರ ಸ್ಕಾರ್ಪಿಯೊ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದು, 2014 ಹ್ಯುಂಡೈ ಸಾಂಟಾಫೆ, 2014 ಸ್ಕೋಡಾ ಯೆಟಿ, ಟಾಟಾ ನೆಕ್ಸಾನ್ ಕಾನ್ಸೆಪ್ಟ್ ಮತ್ತು ಷೆವರ್ಲೆ ಆಡ್ರಾ ಕಾನ್ಸೆಪ್ಟ್ ನಂತರದ ಸ್ಥಾನಗಳಲ್ಲಿ ಗುರುತಿಸಿಕೊಂಡಿದೆ.

ಅಗ್ರ ವಿಭಾಗ (ಸಣ್ಣ ಹ್ಯಾಚ್‌ಬ್ಯಾಕ್)

ಅಗ್ರ ವಿಭಾಗ (ಸಣ್ಣ ಹ್ಯಾಚ್‌ಬ್ಯಾಕ್)

ಎಸ್‌ಯುವಿ ಬಳಿಕ ಸಣ್ಣ ಹ್ಯಾಚ್‌ಬ್ಯಾಕ್ ಕಾರುಗಳು ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಇಲ್ಲಿ ದೇಶದ ಅತಿ ಅಗ್ಗದ ಕಾರು ಟಾಟಾ ನ್ಯಾನೋ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ಮಾರುತಿ ಸುಜುಕಿ ಸೆಲೆರಿಯೊ ಅಗ್ರಸ್ಥಾನ ಕಳೆದುಕೊಂಡಿದೆ.

ಅಗ್ರ ವಿಭಾಗ (ದೊಡ್ಡ ಹ್ಯಾಚ್‌ಬ್ಯಾಕ್)

ಅಗ್ರ ವಿಭಾಗ (ದೊಡ್ಡ ಹ್ಯಾಚ್‌ಬ್ಯಾಕ್)

ದೊಡ್ಡ ಹ್ಯಾಚ್‌ಬ್ಯಾಕ್ ಕಾರುಗಳ ವಿಭಾಗದಲ್ಲಿ ನೂತನ ಟೊಯೊಟಾ ಎಟಿಯೋಸ್ ಕ್ರಾಸ್ ಅಗ್ರಸ್ಥಾನ ಪಡೆದುಕೊಂಡಿದೆ. ಇದನ್ನು ಫೋರ್ಡ್ ಫಿಗೊ, ಹೋಂಡಾ ಜಾಝ್ ಮತ್ತು ಹ್ಯುಂಡೈ ಐ20 ಹಿಂಬಾಲಿಸಿದೆ.

ಅಗ್ರ ವಿಭಾಗ (ಎಕ್ಸಿಕ್ಯೂಟಿವ್ ಸೆಡಾನ್)

ಅಗ್ರ ವಿಭಾಗ (ಎಕ್ಸಿಕ್ಯೂಟಿವ್ ಸೆಡಾನ್)

ಇಲ್ಲೂ ಟೊಯೊಟಾದ ಕರೊಲ್ಲಾ ಆಲ್ಟೀಸ್ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇದರಿಂದಾಗಿ ಹೋಂಡಾ ಸಿವಿಕ್ ಸ್ವಲ್ಪದರಲ್ಲೇ ಹಿನ್ನಡೆ ಅನುಭವಿಸಿತ್ತು.

ಅಗ್ರ ವಿಭಾಗ (ಎಂಯುವಿ/ಎಂಪಿವಿ)

ಅಗ್ರ ವಿಭಾಗ (ಎಂಯುವಿ/ಎಂಪಿವಿ)

ಮಗದೊಮ್ಮೆ ಟೊಯೊಟಾದ ಇನ್ನೋವಾ ಎಂಯುವಿ/ಎಂಪಿವಿ ವಿಭಾಗದಲ್ಲಿ ತನ್ನ ಸಾನಿಧ್ಯ ವ್ಯಕ್ತಪಡಿಸಿದೆ. ಮಾರುತಿ ಸುಜುಕಿ ಎರ್ಟಿಗಾ ಹಾಗೂ ಮಹೀಂದ್ರ ಬೊಲೆರೊ ನಂತರದ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು.

ಅಗ್ರ ವಿಭಾಗ (ಮಿಡ್ ಸೈಜ್ ಸೆಡಾನ್)

ಅಗ್ರ ವಿಭಾಗ (ಮಿಡ್ ಸೈಜ್ ಸೆಡಾನ್)

ಅಂತಿಮವಾಗಿ ಮಿಡ್ ಸೈಜ್ ಸೆಡಾನ್ ವಿಭಾಗದಲ್ಲಿ ಟೊಯೊಟಾದ ಎಟಿಯೋಸ್ ಮಾದರಿ ಅಗ್ರಪಂಕ್ತಿಯಲ್ಲಿ ಗುರುತಿಸಿಕೊಂಡಿದೆ.

ಅಂತರ್ಜಾಲದಲ್ಲಿ ಅತಿ ಹೆಚ್ಚು ಉಲ್ಲೇಖಿಸಲ್ಪಟ್ಟ ಕಾರು ಬ್ರಾಂಡ್

ಅಷ್ಟಕ್ಕೂ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡಿರುವ ಕಾರುಗಳ ಪೈಕಿ ನಿಮ್ಮ ಫೇವರಿಟ್ ಬ್ರಾಂಡ್ ಯಾವುದು ಎಂಬುದನ್ನು ಕಾಮೆಂಟ್ ಬಾಕ್ಸ್‌ನಲ್ಲಿ ದಾಖಲಿಸಿರಿ.

More from DriveSpark

Article Published On: Wednesday, April 2, 2014, 10:33 [IST]
English summary
February was the month when the internet was dominated by auto related activities due to the Delhi Auto Expo 2014 that took place early in the month. But did you wonder which car maker and which car models were the most talked about or mentioned online?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+