ಮುಂಬೈಗರೇ ಎರಡನೇ ಕಾರು ಕೊಳ್ಳುವ ಆಸೆ ಬಿಟ್ಟುಬಿಡಿ!
ಮುಂಬೈಗರೇ, ನೀವು ಎರಡನೇ ಕಾರು ಕೊಳ್ಳುವ ಬಯಕೆ ಹೊಂದಿದ್ದೀರಾ? ಅಂತಹ ಯಾವುದೇ ಕನಸುಗಳಿದ್ದರೆ ಈಗಲೇ ಕೈ ಬಿಡುವುದು ಒಳಿತು. ಯಾಕೆಂದರೆ ಮುಂಬೈ ಸಾರಿಗೆ ವಿಭಾಗವು, ಮಾಲಿಕರು ಎರಡನೇ ಕಾರು ಖರೀದಿಸುವುದರ ಮೇಲೆ
ಬರೋಬ್ಬರಿ ಅಂದರೆ ಶೇಕಡಾ 200ರಷ್ಟು ತೆರಿಗೆ ವಿಧಿಸುವ ಕ್ರಮವೊಂದನ್ನು ಕೈಗೊಳ್ಳಲು ಮುಂದಾಗುತ್ತಿದೆ.
ಜಗತ್ತಿನ ಅತಿ ಕೆಟ್ಟ ಟ್ರಾಫಿಕ್ ಜಾಮ್ ಎಲ್ಲಿ ಗೊತ್ತೇ?
ದೇಶದ ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿರುವ ಮುಂಬೈನಲ್ಲಿನ ವಾಹನ ಸಂಖ್ಯೆಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಇಂತಹದೊಂದು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಕಾರು ಹೊಂದಿರುವವರು ಎರಡನೇ ಕಾರು ಕೊಳ್ಳಲು ಬಯಸಿದ್ದಲ್ಲಿ ಅಂತವರ ಮೇಲೆ ಶೇಕಡಾ 150ರಿಂದ 200ರಷ್ಟು ತೆರಿಗೆ ಹೇರಿಕೆಯಾಗಲಿದೆ.

ನಿಮ್ಮ ಮಾಹಿತಿಗಾಗಿ, ಪ್ರಸ್ತುತ ಕಾರು ಖರೀದಿ ವೇಳೆ ಶೇಕಡಾ 10ರಿಂದ 13ರಷ್ಟು ತೆರಿಗೆ ಪಾವತಿಸಬೇಕಾಗಿದೆ. ಅಂದರೆ ಹೊಸ ನೀತಿಯಂತೆ ತಕ್ಷಣದಲ್ಲೇ ನೀವು ಖರೀದಿಸುವ ಎರಡನೇ ಕಾರಿನ ಮೇಲೆ ಶೇಕಡಾ 39ರಷ್ಟು ತೆರಿಗೆ ವರ್ಧನೆಯಾಗಲಿದೆ.

ಈ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸದ್ಯದಲ್ಲೇ ಸಾರಿಗೆ ಇಲಾಖೆಯು ಸಲಹೆಯನ್ನು ನೀಡಲಿದೆ. ಅಧಿಕಾರಿಗಳ ಪ್ರಕಾರ ಮುಂಬೈನಲ್ಲಿ ಪ್ರತಿ ಕುಟುಂಬವು ಎರಡರಿಂದ ಮೂರು ಕಾರುಗಳನ್ನು ಹೊಂದಿದ್ದು, ವಿಪರೀತ ವಾಹನ ದಟ್ಟಣೆಗೆ ಕಾರಣವಾಗುತ್ತಿದೆ. ವರದಿಯೊಂದರ ಪ್ರಕಾರ ಮುಂಬೈನಲ್ಲಿ ಶೇಕಡಾ 15ರಷ್ಟು ಕುಟುಂಬಗಳು ಎರಡು ಅಥವಾ ಅದಕ್ಕಿಂತಲೂ ಹೆಚ್ಚು ವಾಹನಗಳನ್ನು ಹೊಂದಿದೆ.

ಈ ನಿಟ್ಟಿನಲ್ಲಿ ತೆರಿಗೆಯನ್ನು ಹೆಚ್ಚಿಸುವ ಮೂಲಕ ವಾಹನಗಳನ್ನು ಕೊಂಡುಕೊಳ್ಳುವ ಸಂಖ್ಯೆಯನ್ನು ನಿಯಂತ್ರಿದಲ್ಲಿಡಬಹುದಾದ ನಿರೀಕ್ಷೆಯನ್ನು ಸಾರಿಗೆ ಇಲಾಖೆ ಹೊಂದಿದೆ. ಈಗಿರುವ ಪ್ರಕಾರ ಬಿಎಂಡಬ್ಲ್ಯು ಮತ್ತು ಆಡಿ ಐಷಾರಾಮಿ ಕಾರುಗಳಿಗೆ 5ರಿಂದ 7 ಲಕ್ಷ ರು.ಗಳ ವರೆಗೆ ತೆರಿಗೆ ಪಾವತಿಸಬೇಕಾಗಿದೆ.

ಸಾರಿಗೆ ಅಧಿಕಾರಿಯೊಬ್ಬರ ಅಭಿಪ್ರಾಯದ ಪ್ರಕಾರ ನೀವು ಎರಡನೇ ಕಾರಿಗಾಗಿ 21 ಲಕ್ಷ ರುಪಾತಿ ತೆರಿಗೆ ರೂಪದಲ್ಲಿ ಪಾವತಿಸಲು ಪ್ರೇರಿತರಾದ್ದಲ್ಲಿ ನೀವು ಕಾರು ಖರೀದಿಗೂ ಮುನ್ನ ಎರಡು ಬಾರಿ ಯೋಚಿಸುವ ಸಾಧ್ಯತೆಯಿದೆ ಎಂದಿದೆ.

ಇದರ ಜತೆಗೆ ಪಾರ್ಕಿಂಗ್ ವೆಚ್ಚ ಹೆಚ್ಚಳಗೊಳಿಸುವುದು, ಡೀಸೆಲ್ ಹಾಗೂ ಪೆಟ್ರೋಲ್ ಕಾರುಗಳಿಗೆ ವಿಶೇಷ ತೆರಿಗೆ ವಿಧಿಸುವ ಕುರಿತಾಗಿಯೂ ಸಾರಿಗೆ ಇಲಾಖೆಯ ಪರಿಗಣನೆಯಲ್ಲಿದೆ.

2006ರಲ್ಲಿ 14 ಲಕ್ಷದಷ್ಟಿದ್ದ ವಾಹನಗಳ ಸಂಖ್ಯೆ ಕೆಲವೇ ವರ್ಷಗಳಲ್ಲಿ ದ್ವಿಚಕ್ರ, ಟ್ರಕ್ ಮತ್ತು ಬಸ್‌ಗಳ ಸಂಖ್ಯೆ 22 ಲಕ್ಷಕ್ಕೆ ಏರಿಕೆಯಾಗಿತ್ತು. ಈ ಮೂಲಕ ಮುಂಬೈ ಶೇಕಡಾ 7ರಷ್ಟು ವಾಹನಗಳ ವೃದ್ಧಿ ದಾಖಲಿಸಿತ್ತು. ವರದಿಯ ಪ್ರಕಾರ ವಾಣಿಜ್ಯ ನಗರಿಯಲ್ಲಿ ದಿನವೊಂದರಲ್ಲಿ ಸರಾಸರಿ 300ರಿಂದ 350 ವಾಹನಗಳು ರಸ್ತೆಗಿಳಿಯುತ್ತಿದೆ.


Click it and Unblock the Notifications








