ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ರೆನಾಲ್ಟ್ ಜೊಯ್ ಎಲೆಕ್ಟ್ರಿಕ್ ಕಾರು

ಜನಪ್ರಿಯ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಜೊಯ್ ಎಲೆಕ್ಟ್ರಿಕ್ ಕಾರನ್ನು ಕಾರನ್ನು ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಫ್ರೆಂಚ್ ಆಟೋ ತಯಾರಕರಾದ ರೆನಾಲ್ಟ್ 2020ರ ಆಟೋ ಎಕ್ಸ್‌ಪೋದಲ್ಲಿ ಜೊಯ್ ಎಲೆಕ್ಟ್ರಿಕ್ ಕಾರನ್ನು ಪ್ರದರ್ಶಿಸಿದ್ದರು.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ರೆನಾಲ್ಟ್ ಜೊಯ್ ಎಲೆಕ್ಟ್ರಿಕ್ ಕಾರು

ಈ ಮಾದರಿಯು ಮಾರುಕಟ್ಟೆಯ ಕಾರ್ಯಸಾಧ್ಯತೆಯನ್ನು ನಿರ್ಣಯಿಸುವುದಾಗಿ ಕಂಪನಿಯು ಘೋಷಿಸಿತು. ಈ ಹೊಸ ರೆನಾಲ್ಟ್ ಜೊಯ್ ಎಲೆಕ್ಟ್ರಿಕ್ ಕಾರನ್ನು ಚೆನೈ ಬಳಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ ರೆನಾಲ್ಟ್ ಜೊಯ್ ಎಲೆಕ್ಟ್ರಿಕ್ ಕಾರು ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಇದು ದೇಶದ ಬ್ರ್ಯಾಂಡ್‌ನ ಇವಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಪರೀಕ್ಷೆಯಾಗಬಹುದು.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ರೆನಾಲ್ಟ್ ಜೊಯ್ ಎಲೆಕ್ಟ್ರಿಕ್ ಕಾರು

ಕಂಪನಿಯು ತನ್ನ ಯೋಜನೆಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಜೊಯ್ ಜೊತೆ ಇನ್ನು ಖಚಿತಪಡಿಸಿಲ್ಲ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ಆಲ್-ಎಲೆಕ್ಟ್ರಿಕ್ ಕಾರು ಮುಂದಿನ ವರ್ಷದಲ್ಲಿ ಬಿಡುಗಡೆಯಾಗಬಹುದು.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ರೆನಾಲ್ಟ್ ಜೊಯ್ ಎಲೆಕ್ಟ್ರಿಕ್ ಕಾರು

ರೆನಾಲ್ಟ್ ಜೊಯ್ ಎಲೆಕ್ಟ್ರಿಕ್ ಕಾರನ್ನು 2012ರ ಜಿನೀವಾ ಮೋಟಾರ್ ಶೋನಲ್ಲಿ ಪ್ರದರ್ಶಿಸಿದ್ದರು. ಸದ್ಯ ರೆನಾಲ್ಟ್ ಜೊಯ್ ಎಲೆಕ್ಟ್ರಿಕ್ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಈ ಎಲೆಕ್ಟ್ರಿಕ್ ಕಾರು ಹಲವಾರು ಟ್ರಿಮ್ ಆಯ್ಕೆಗಳಲ್ಲಿ ಲಭ್ಯವದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ರೆನಾಲ್ಟ್ ಜೊಯ್ ಎಲೆಕ್ಟ್ರಿಕ್ ಕಾರು

ಯುರೋಪಿಯನ್ ಸ್ಪೆಕ್ ರೆನಾಲ್ಟ್ ಜೊಯ್ ಆರ್110 ಮತ್ತು ಟಾಪ್-ಸ್ಪೆಕ್ ಆರ್135 ಎಂಬ ಎರಡು ಬ್ಯಾಟರಿ ಸಂರಚನೆಗಳಲ್ಲಿ ಲಭ್ಯವಿದೆ. ಎರಡೂ ಮಾದರಿಗಳು ಒಂದೇ ರೀತಿಯ ಎಲೆಕ್ಟ್ರಿಕ್ ಪವರ್‌ಟ್ರೇನ್ ಸಂಯೋಜನೆಯನ್ನು ಮೂರು-ಹಂತದ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ 52 ಕಿ.ವ್ಯಾ ಬ್ಯಾಟರಿ ಪ್ಯಾಕ್‌ಗೆ ಜೋಡಿಸಿವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ರೆನಾಲ್ಟ್ ಜೊಯ್ ಎಲೆಕ್ಟ್ರಿಕ್ ಕಾರು

ಆರ್110 ಮಾದರಿಯಲ್ಲಿರುವ ಪವರ್‌ಟ್ರೇನ್ 107 ಬಿಹೆಚ್‍ಪಿ ಪವರ್ ಮತ್ತು 225 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮತ್ತೊಂದೆಡೆ ಟಾಪ್-ಸ್ಪೆಕ್ ಆರ್135 ಮಾದರಿಯಲ್ಲಿರುವ ಪವರ್‌ಟ್ರೇನ್ 134 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ರೆನಾಲ್ಟ್ ಜೊಯ್ ಎಲೆಕ್ಟ್ರಿಕ್ ಕಾರು

ಆರ್110 ಮಾದರಿಯು 11.4 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ಸ್ಪೀಡ್ ಅನ್ನು ಕ್ರಮಿಸುತ್ತದೆ. ಆರ್110 ಮಾದರಿಯು 135 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಟಾಪ್-ಸ್ಪೆಕ್ ಆರ್135 ಮಾದರಿಯು 9.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ಮಾದರಿಯು 140 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ರೆನಾಲ್ಟ್ ಜೊಯ್ ಎಲೆಕ್ಟ್ರಿಕ್ ಕಾರು

ರೆನಾಲ್ಟ್ ಜೊಯ್ ಎಲೆಕ್ಟ್ರಿಕ್ ಕಾರಿನ ಇಂಟಿರಿಯರ್ ನಲ್ಲಿ 9.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದರಲ್ಲಿ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಮತ್ತು ಬ್ರ್ಯಾಂಡ್‌ನ ಇತ್ತೀಚಿನ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ರೆನಾಲ್ಟ್ ಜೊಯ್ ಎಲೆಕ್ಟ್ರಿಕ್ ಕಾರು

ಇದರೊಂದಿಗೆ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಮೌಂಟಡ್ ಕಂಟ್ರೋಲ್ ಗಳೊಂದಿಗೆ ಮಲ್ಟಿಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್ ಎಬಿಎಸ್ ವಿಥ್ ಇಬಿಡಿ, ಮಲ್ಟಿಪಲ್ ಏರ್‌ಬ್ಯಾಗ್, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಇನ್ನಿತರ ಫೀಚರ್ ಗಳನ್ನು ಹೊಂದಿರಲಿದೆ.

Most Read Articles

Kannada
English summary
Renault Zoe EV Spotted Testing Ahead Of Launch In India. Read In Kannada.
Story first published: Monday, October 26, 2020, 18:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X