ಪರಿವರ್ತಿತ ಟೊಯೊಟಾ ಫಾರ್ಚ್ಯುನರ್ ಲಾಂಚ್

By Nagaraja

ಒಂದು ದಿಕ್ಕಿನಲ್ಲಿ ಭಾರತೀಯರು ಅಗ್ಗದ ಐಷಾರಾಮಿ ಬಿಎಂಡಬ್ಲ್ಯು 1 ಸಿರೀಸ್ ಹಾಗೂ ಹ್ಯುಂಡೈ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರನ್ನು ಬರಮಾಡಿಕೊಳ್ಳುತ್ತಿದ್ದರೆ ಇನ್ನೊಂದೆಡೆ ಇಂಡೋನೇಷ್ಯಾದಲ್ಲಿ ಪರಿವರ್ತಿತ ಟೊಯೊಟಾ ಫಾರ್ಚ್ಯುನರ್ ಪ್ರೀಮಿಯಂ ಎಸ್‌ಯುವಿ ಕಾರು ಬಿಡುಗಡೆಗೊಂಡಿದೆ.

ಸಾಮಾನ್ಯವಾಗಿ ಜಪಾನ್ ವಾಹನ ತಯಾರಕರಿಂದ ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗುತ್ತಿರುವ ಎಲ್ಲ ಮಾಡೆಲ್‌ಗಳು ದೇಶದ ವಾಹನ ಪ್ರಿಯರಲ್ಲಿ ಅತ್ಯಂತ ಹೆಚ್ಚು ಕುತೂಹಲಕ್ಕೆ ಎಡೆಮಾಡಿಕೊಡುತ್ತಿದೆ. ಯಾಕೆಂದರೆ ಇಂಡೋನೇಷ್ಯಾದಲ್ಲಿ ಬಿಡುಗಡೆಗೊಂಡಿರುವ ಈ ಕಾರುಗಳು ಸದ್ಯದಲ್ಲೇ ಭಾರತ ಎಂಟ್ರಿ ಕೊಡುವ ಸಾಧ್ಯತೆಗಳಿವೆ.

ಇದೀಗ ಇಂಡೋನೇಷ್ಯಾದಲ್ಲಿ ಟೊಯೊಟಾ ನೇತೃತ್ವ ವಹಿಸುತ್ತಿರುವ ಪಿಟಿ ಟೊಯೊಟಾ ಆಸ್ಟ್ರಾ ಮೋಟಾರ್, ನೂತನ ಪೋರ್ಚುನರ್ ಫೇಸ್‌ಲಿಫ್ಟ್ ವರ್ಷನ್ ಬಿಡುಗಡೆಗೊಳಿಸಿದ್ದು, ಸದ್ಯದಲ್ಲೇ ಭಾರತಕ್ಕೆ ಪ್ರವೇಶಿಸುವ ಸಾಧ್ಯತೆಯಿದೆ.

ಟಿಆರ್‌ಡಿ ಸ್ಫೋರ್ಟಿವೊ ಕಿಟ್

ಟಿಆರ್‌ಡಿ ಸ್ಫೋರ್ಟಿವೊ ಕಿಟ್

ನೂತನ ಟೊಯೊಟಾ ಫಾರ್ಚ್ಯುನರ್ ಪರಿಷ್ಕೃತ ಆವೃತ್ತಿಯು ಟಿಆರ್‌ಡಿ ಸ್ಪೋರ್ಟಿವೊ ಕಿಟ್ ಪಡೆದುಕೊಳ್ಳಲಿದೆ. ಅಲ್ಲದೆ ಎಲ್‌ಇಡಿ ಡೇ ಟೈಮ್ ರನ್ನಿಂಗ್ ಹೆಡ್‌ಲೈಟ್ ಸೌಲಭ್ಯ ಹೊಂದಿರಲಿದೆ.

ಕ್ರೋಮ್ ಗ್ರಿಲ್

ಕ್ರೋಮ್ ಗ್ರಿಲ್

ರೆಗುಲರ್ ಟೊಯೊಟಾ ಫಾರ್ಚ್ಯುನರ್ ಕ್ರೋಮ್ ಗ್ರಿಲ್ ಪಡೆದುಕೊಂಡರೆ ಟಿಆರ್‌ಡಿ ಆವೃತ್ತಿಯಲ್ಲಿ ಕಪ್ಪು ಬಣ್ಣದ ಕ್ರೋಮ್ ಗ್ರಿಲ್ ಇರಲಿದೆ.

ಮನರಂಜನಾ ಸಿಸ್ಟಂ

ಮನರಂಜನಾ ಸಿಸ್ಟಂ

ಬಂಪರ್ ಹಾಗೂ ಅಲಾಯ್ ವೀಲ್ ಕೂಡಾ ವಿಭಿನ್ನ ವಿನ್ಯಾಸವನ್ನು ಪಡೆದುಕೊಂಡಿದೆ. ಹಾಗೆಯೇ ಹೊಸತಾದ ಮನರಂಜನಾ ವ್ಯವಸ್ಥೆ ಮತ್ತು ಡಿವಿಡಿ ಪ್ಲೇಯರ್ ಕೂಡಾ ಇರಲಿದೆ.

ವೈಶಿಷ್ಟ್ಯಗಳೇನು?

ವೈಶಿಷ್ಟ್ಯಗಳೇನು?

* ಟಿಆರ್‌ಡಿ ಸಸ್ಫೆಷನ್

* ನ್ಯೂ ಟಿಆರ್‌ಡಿ ಸ್ಫೋರ್ಟಿವೊ ಕಿಟ್

* ನ್ಯೂ ಎಲ್‌ಇಡಿ ಡೇ ಟೈಮ್ ರನ್ನಿಂಗ್ ಹೆಡ್‌ಲೈಟ್

* ಹೊಸತಾದ ಮನರಂಜನಾ ಸಿಸ್ಟಂ

* ಸ್ಫೋರ್ಟಿವೊ ಅಲಾಯ್ ವೀಲ್

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು 2.7 ಲೀಟರ್ ಪೆಟ್ರೋಲ್ ಹಾಗೂ 2.5 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಇದರ ಎರಡು ಗೇರ್ ಬಾಕ್ಸ್‌ಗಳು ಆಯ್ಕೆಗಳು 5 ಸ್ಪೀಡ್ ಮ್ಯಾನುವಲ್ ಹಾಗೂ 4 ಸ್ಪೀಡ್ ಆಟೋಮ್ಯಾಟಿಕ್‌ನಿಂದ ನಿಯಂತ್ರಿಸಲ್ಪಡಲಿದೆ.

ಇಂಡಿಯನ್ ವರ್ಷನ್

ಇಂಡಿಯನ್ ವರ್ಷನ್

ಅಂದ ಹಾಗೆ ಭಾರತೀಯ ವರ್ಷನ್ ಫಾರ್ಚ್ಯುನರ್‌ನಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆ ಲಭ್ಯವಿರುವುದಿಲ್ಲ. ಇದು 3.0 ಲೀಟರ್ ಡೀಸೆಲ್ ಹಾಗೂ 5 ಸ್ಪೀಡನ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ.

ದರ ಮಾಹಿತಿ

ದರ ಮಾಹಿತಿ

ಇಂಡೋನೇಷ್ಯಾ ವರ್ಷನ್ ಫಾರ್ಚ್ಯುನರ್ ಫೇಸ್‌ಲಿಫ್ಟ್ ವರ್ಷನ್ ದರ 24.16 ಲಕ್ಷ ರು.ಗಳಿಂದ ಆರಂಭವಾಗಿ 29.19 ಲಕ್ಷ ರು.ಗಳ ವರೆಗಿದೆ.

ಆಲ್ ನ್ಯೂ ಫಾರ್ಚ್ಯುನರ್

ಆಲ್ ನ್ಯೂ ಫಾರ್ಚ್ಯುನರ್

ಇತ್ತೀಚೆಗಷ್ಟೇ ಟೊಯೊಟಾ ಇನ್ನೋವಾ ಫೇಸ್‌ಲಿಫ್ಟ್ ಇಂಡೋನೇಷ್ಯಾದಲ್ಲಿ ಲಾಂಚ್ ಆಗಿತ್ತು. ಇದೀಗ ಫಾರ್ಚ್ಯುನರ್ ಕೂಡಾ ಪರಿವರ್ತಿತ ಆವೃತಿ ಪಡೆದುಕೊಂಡಿದೆ. ಇವೆರಡೂ ಸದ್ಯದಲ್ಲೇ ಭಾರತಕ್ಕೆ ಎಂಟ್ರಿ ಕೊಡಲಿದೆ. ಏತನ್ಮಧ್ಯೆ ಆಲ್ ನ್ಯೂ ಫಾರ್ಚ್ಯುನರ್ 2016ರಲ್ಲಿ ಲಾಂಚ್ ಆಗಲಿದೆ.

More from DriveSpark

Article Published On: Wednesday, September 4, 2013, 10:47 [IST]
English summary
PT Toyota Astra Motor, the Indonesian subsidy of Toyota, has unveiled an updated version of the Fortuner and have also introduced a refreshed TRD Sportivo kit for the SUV
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+