ಏನಿದು ನಿಸ್ಸಾನ್ ಸಿವಿಟಿ ಟ್ರಾನ್ಸ್‌ಮಿಷನ್ ತಂತ್ರಜ್ಞಾನ

By Nagaraja

ಜಪಾನ್ ಮೂಲದ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್ ಇತ್ತೀಚೆಗಷ್ಟೇ ಬೆಂಗಳೂರಿನ ಮಲ್ಲೇಶ್ವರಂ ಮಂತ್ರಿ ಮಾಲ್‌ನಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ತನ್ನ ನೂತನ ಸಿವಿಟಿ ಟ್ರಾನ್ಸ್‌ಮಿಷನ್ ತಂತ್ರಜ್ಞಾನವನ್ನು ಅನಾವರಣಗೊಳಿಸಿತ್ತು.

ಮಾಧ್ಯಮ ಮಿತ್ರರು ವಿಶೇಷವಾಗಿ ಆಹ್ವಾನಿಸಲ್ಪಟ್ಟಿದ್ದ ಈ ಕಾರ್ಯಕ್ರಮದಲ್ಲಿ ತನ್ನ ಹೊಸ ಸಿವಿಟಿ ಟ್ರಾನ್ಸ್‌ಮಿಷನ್ ಬಗ್ಗೆ ನಿಸ್ಸಾನ್ ವಿವರವಾದ ಮಾಹಿತಿ ರವಾನಿಸಿತ್ತು. ನಿಸ್ಸಾನ್ ಮೈಕ್ರಾ ಹ್ಯಾಚ್‌ಬ್ಯಾಕ್ ಹಾಗೂ ನಿಸ್ಸಾನ್ ಸನ್ನಿ ಸೆಡಾನ್ ಕಾರುಗಳಲ್ಲಿ ಸಿವಿಟಿ ಟ್ರಾನ್ಸ್‌ಮಿಷನ್ ಆಳವಡಿಸುವುದು ನಿಸ್ಸಾನ್ ಯೋಜನೆಯಾಗಿದೆ. ಸಂಸ್ಥೆಯ ಪ್ರಕಾರ ಹೊಸ ಸಿವಿಟಿ ತಂತ್ರಜ್ಞಾನವು ಈಗಿರುವ ಆಟೋಮ್ಯಾಟಿಕ್ ಐದು, ಆರು ಅಥವಾ ಏಳು ಗೇರ್‌ಗಿಂತಲೂ ಅತ್ಯುತ್ತಮವಾಗಿರಲಿದೆ ಎಂದಿದೆ.

ನಿಸ್ಸಾನ್ ಸಿವಿಟಿ ಟ್ರಾನ್ಸ್‌ಮಿಷನ್ ತಂತ್ರಜ್ಞಾನ

ನಿಸ್ಸಾನ್ ಸಿವಿಟಿ ಟ್ರಾನ್ಸ್‌ಮಿಷನ್‌ನಲ್ಲಿ ಸ್ಟೀಲ್ ಬೆಲ್ಟ್ ಆಳವಡಿಕೆ ಮಾಡಲಾಗಿದ್ದು ಇದು ಗೇರ್ ಬದಲಾವಣೆ ವೇಳೆ ನಯವಾಗಿ ಮೇಲಕ್ಕೆ ಕೆಲಕ್ಕೆ ಚಲಿಸಲು ಸಹಕಾರಿಯಾಗಲಿದೆ. ಇಲ್ಲಿ ಯಾವುದೇ ಮೆಕ್ಯಾನಿಕಲ್ ಶಿಫ್ಟಿಂಗ್ ಅಗತ್ಯವಿರುವುದಿಲ್ಲ.

1. ಗೇರ್ ಹಂಟ್ ಮತ್ತು ಶಿಫ್ಟ್ ಶಾಕ್ ಸಮಸ್ಯೆ ಇರಲ್ಲ

1. ಗೇರ್ ಹಂಟ್ ಮತ್ತು ಶಿಫ್ಟ್ ಶಾಕ್ ಸಮಸ್ಯೆ ಇರಲ್ಲ

ನಿರಂತರವಾಗಿ ಬದಲಾಗುವ ಸಿವಿಟಿ ಟ್ರಾನ್ಸ್‌ಮಿಷನ್ ಬಳಕೆಯಿಂದ ನೀವು ಸಾಂಪ್ರಾದಾಯಕಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳಲ್ಲಿ ಎದುರಾಗುವ ಗೇರ್ ಹಂಟ್ ಅಥವಾ ಸರ್ಚ್ ಮತ್ತು ಶಿಫ್ಟ್ ಶಾಕ್ ಸಮಸ್ಯೆಯನ್ನು ದೂರ ಮಾಡಬಹುದಾಗಿದೆ.

2. ಬಾಳ್ವಿಕೆ

2. ಬಾಳ್ವಿಕೆ

ಇತರ ಸ್ವಯಂಚಾಲಿತ ಟ್ರಾನ್ಸ್‌ಮಿಷನ್‌ಗಳಿಗೆ ಸಿವಿಟಿ ಟ್ರಾನ್ಸ್‌ಮಿಷನ್ ಹೆಚ್ಚು ಬಾಳ್ವಿಕೆ ಬರಲಿದೆ. ಅಲ್ಲದೆ ಸಾಮಾನ್ಯ ಆಟೋ ಟ್ರಾನ್ಸ್‌ಮಿಷನ್‌ಗಿಂತಲೂ ಶೇಕಡಾ 13ರಷ್ಟು ಹಗುರ ಭಾರವಾಗಿದೆ.

3. ಸುಗಮ, ಇಂಧನ ದಕ್ಷ ಚಾಲನೆ

3. ಸುಗಮ, ಇಂಧನ ದಕ್ಷ ಚಾಲನೆ

ನಿಸ್ಸಾನ್ ಪ್ರಕಾರ, ನಿರಂತರವಾಗಿ ಬದಲಾಗುವ ಟ್ರಾನ್ಸ್‌ಮಿಷನ್‌ನೊಂದಿಗೆ ಸುಗಮನ ಚಾಲನೆಯೊಂದಿಗೆ ಹೆಚ್ಚು ಇಂಧನ ದಕ್ಷತೆಯನ್ನು ಸಿವಿಟಿ ಟ್ರಾನ್ಸ್‌ಮಿಷನ್ ಒದಗಿಸಲಿದೆ.

4. ಹೈಟೆಕ್

4. ಹೈಟೆಕ್

ಗೇರ್ ಬದಲಾವಣೆ ವೇಳೆ ಸರಳವಾಗಿ ಹೊಂದಿಕೊಳ್ಳುವ ನಿಸ್ಸಾನ್ ಸಿವಿಟಿ ಟ್ರಾನ್ಸ್‌ಮಿಷನ್ ನಿಜಕ್ಕೂ ಆಧುನಿಕ ತಂತ್ರಗಾರಿಕೆಯನ್ನು ಪಡೆದಿದೆ. ಒಟ್ಟಿನಲ್ಲಿ ನಿಸ್ಸಾನ್ ಸಿವಿಟಿ ಟ್ರಾನ್ಸ್‌ಮಿಷನ್ ವಾಹನ ಪ್ರೇಮಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

Article Published On: Tuesday, September 9, 2014, 11:47 [IST]
English summary
Nissan India is in the process of promoting its CVT transmission technology available in the NIssan Micra hatchback and the Nissan Sunny sedan. The company claims that its CVT technology has a number of benefits over regular automatic transmissions that feature five, six or seven gears.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+