ಚಿನ್ನದ ಹುಡುಗ ಉಸೈನ್ ಬೋಲ್ಟ್‌ಗೆ ಚಿನ್ನದ ಕಾರು ಉಡುಗೊರೆ
ಭೂಮಿಯ ಅತಿ ವೇಗದ ಓಟಗಾರ 2008ರ ಬೀಜಿಂಗ್ ಒಲಿಂಪಿಕ್ 'ಹ್ಯಾಟ್ರಿಕ್' ಚಿನ್ನದ ಪದಕ ವೀರ ಜಮೈಕಾದ ಉಸೈನ್ ಬೋಲ್ಡ್ ಅವರಿಗೆ ವಿಶ್ವದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿರುವ ನಿಸ್ಸಾನ್, ಚಿನ್ನದ ಲೇಪನದ ಜಿಟಿಆರ್ ಕಾರನ್ನು ಉಡುಗೊರೆಯಾಗಿ ನೀಡಿದೆ.
ಚಿನ್ನದ ಲೇಪನದ ನಿಸ್ಸಾನ್ ಜಿಟಿಆರ್ ಸ್ಪೋರ್ಟ್ಸ್ ಕಾರನ್ನು ಕಳೆದ ವರ್ಷ ಅಭಿವೃದ್ಧಿಪಡಿಸಲಾಗಿತ್ತು. ಬೋಲ್ಟ್ ಸಹಾಯಾರ್ಥ ಸಂಸ್ಥೆಯ ಧನ ಸಹಾಯಕ್ಕಾಗಿ ಈ ಕಾರನ್ನು ಹರಾಜಿಗಿಡಲಾಗಿತ್ತು. ಈ ಮೂಲಕ ಒಟ್ಟು 1.01 ಕೋಟಿ ರುಪಾಯಿಗಳನ್ನು ಸಂಗ್ರಹಿಸಲಾಗಿತ್ತು.
ಇದೀಗ ಬೋಲ್ಟ್‌ಗಾಗಿ ಮಾತ್ರ ನಿಸ್ಸಾನ್ ಮತ್ತೊಂದು ಚಿನ್ನದ ಲೇಪನದ ಕಾರನ್ನು ತಯಾರಿಸಿದೆ. ಬೋಲ್ಟ್ ಡ್ರೈವಿಂಗ್ ಹವ್ಯಾಸ ಹಾಗೂ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ತಯಾರಿಸಲಾಗಿದೆ.

ಕಳೆದ ವರ್ಷ ನಿಸ್ಸಾನ್ ಪ್ರಮುಖ ಪ್ರಚಾರ ರಾಯಭಾರಿಯಾಗಿ ಬೋಲ್ಟ್ ಅವರನ್ನು ನೇಮಕಗೊಳಿಸಲಾಗಿತ್ತು.

2014 ನಿಸ್ಸಾನ್ ಜಿಟಿಆರ್ 3.8 ಲೀಟರ್ ಟ್ವಿನ್ ಟರ್ಬೊ ವಿ6 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 6,400 ಆರ್‌ಪಿಎಂನಲ್ಲಿ 545 ಹಾರ್ಸ್ ಪವರ್ ಉತ್ಪಾದಿಸುವ ಶಕ್ತಿ ಹೊಂದಿದೆ.

ಬೋಲ್ಟ್ ತರಹನೇ ನಿಸ್ಸಾನ್ ಜಿಟಿಆರ್ ಕೂಡಾ ಪ್ರತಿ ಗಂಟೆಗೆ 315 ಕೀ.ಮೀ. ವೇಗತೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಕೇವಲ ಮೂರು ಸೆಕೆಂಡುಗಳಲ್ಲಿ 100 ಕೀ.ಮೀ ವೇಗ ವರ್ಧಿಸಲಿದೆ.

ಪ್ರಸ್ತುತ ಗಾಯದಿಂದ ಪೂರ್ಣ ಗುಣಮುಖರಾಗಿರುವ ಬೋಲ್ಟ್ ಮುಂಬರುವ 100 ಮೀಟರ್ ಸ್ಪರ್ಧೆಯಲ್ಲಿ ಭಾಗವಹಿಸುವ ನಂಬಿಕೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಜುಲೈನಲ್ಲಿ ಸಾಗಲಿರುವ ಲಂಡನ್ ಒಲಿಂಪಿಕ್ ವಾರ್ಷಿಕೋತ್ಸವ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಇರಾದೆ ಹೊಂದಿದ್ದಾರೆ.

ಚಿನ್ನದ ಹುಡುಗ ಉಸೈನ್ ಬೋಲ್ಟ್‌ಗೆ ಚಿನ್ನದ ಕಾರು ಉಡುಗೊರೆ

ಚಿನ್ನದ ಹುಡುಗ ಉಸೈನ್ ಬೋಲ್ಟ್‌ಗೆ ಚಿನ್ನದ ಕಾರು ಉಡುಗೊರೆ

ಚಿನ್ನದ ಹುಡುಗ ಉಸೈನ್ ಬೋಲ್ಟ್‌ಗೆ ಚಿನ್ನದ ಕಾರು ಉಡುಗೊರೆ

ಚಿನ್ನದ ಹುಡುಗ ಉಸೈನ್ ಬೋಲ್ಟ್‌ಗೆ ಚಿನ್ನದ ಕಾರು ಉಡುಗೊರೆ

ಚಿನ್ನದ ಹುಡುಗ ಉಸೈನ್ ಬೋಲ್ಟ್‌ಗೆ ಚಿನ್ನದ ಕಾರು ಉಡುಗೊರೆ

ಚಿನ್ನದ ಹುಡುಗ ಉಸೈನ್ ಬೋಲ್ಟ್‌ಗೆ ಚಿನ್ನದ ಕಾರು ಉಡುಗೊರೆ

ಚಿನ್ನದ ಹುಡುಗ ಉಸೈನ್ ಬೋಲ್ಟ್‌ಗೆ ಚಿನ್ನದ ಕಾರು ಉಡುಗೊರೆ

Click it and Unblock the Notifications