ಬೆಂಗ್ಳೂರು ಪ್ರವೇಶಿಸಿದ ನಿಸ್ಸಾನ್ ಪ್ರೀಮಿಯಂ ಮೈಕ್ರಾ
ಜಪಾನ್ ಮೂಲದ ಕಾರು ತಯಾರಕ ಸಂಸ್ಥೆಯಾದ ನಿಸ್ಸಾನ್ ಇತ್ತೀಚೆಗಷ್ಟೇ ಎರಡು ನೂತನ ಕಾರುಗಳನ್ನು ದೇಶಕ್ಕೆ ಪರಿಚಯಿಸಿತ್ತು. ಇದರ ಮುಂದುವರಿದ ಭಾಗವೆಂಬಂತೆ ನಿಸ್ಸಾನ್ ಮೈಕ್ರಾ ಪ್ರೀಮಿಯಂ ಹಾಗೂ ಮೈಕ್ರಾ ಆಕ್ಟಿವ್ ಕಾರುಗಳು ಬೆಂಗಳೂರು ಪ್ರವೇಶ ಪಡೆದಿದೆ.
ಕ್ರೀಡಾ, ದಿಟ್ಟ ಹಾಗೂ ಶಕ್ತಿಯುತ ಎಕ್ಸ್‌ಟೀರಿಯರ್ ಭಾಗಗಳನ್ನು ಹೊಂದಿರುವ ನೂತನ ನಿಸ್ಸಾನ್ ಮೈಕ್ರಾ, ಪ್ರೀಮಿಯರ್ ಇಂಟಿರಿಯರ್ ಟಚ್ ಪಡೆದುಕೊಂಡಿದೆ. ಅತ್ಯಂತ ಜನಪ್ರಿಯ ನಾಲ್ಕನೇ ಜನರೇಷನ್ ಸಿಟಿ ಕಾರು ತಲಹದಿಯಲ್ಲಿ ನೂತನ ಮೈಕ್ರಾ ನಿರ್ಮಾಣಗೊಂಡಿದೆ.
ಡೈನಾಮಿಕ್ ಹೊಸ ಲುಕ್ ಪಡೆದುಕೊಂದಿರುವ ನಿಸ್ಸಾನ್ ಮೈಕ್ರಾ ಇಂಟಿರಿಯರ್ ಭಾಗಗಳನ್ನು ಪರಿಷ್ಕೃತಗೊಳಿಸಲಾಗಿದ್ದು, ಹೆಚ್ಚು ಗ್ರಾಹಕ ಸ್ನೇಹಿ ಫೀಚರ್‌ಗಳನ್ನು ಆಳವಡಿಸಲಾಗಿದೆ. ರಾಷ್ಟ್ರದ್ಯಾಂತ ನಿಸ್ಸಾನ್ ಮೈಕ್ರಾ ನೂತನ ಕಾರುಗಳ ಮಾರಾಟ ಜುಲೈ 03ರಂದೇ ಆರಂಭಗೊಂಡಿತ್ತು.

ಸುರಕ್ಷಿತ ಡ್ರೈವಿಂಗ್ ಅನುಭವಕ್ಕೆ ನಿಸ್ಸಾನ್ ಮಹತ್ವ ನೀಡಿದೆ. ನೂತನ ಮೈಕ್ರಾ ಸಿವಿಟಿ ಗೇರ್ ಬಾಕ್ಸ್ ಪಡೆದುಕೊಂಡಿದ್ದು, ಈ ಸೆಗ್ಮೆಂಟ್‌ನಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ತಂತ್ರಗಾರಿಕೆ ಆಳವಡಿಸಲಾಗುತ್ತಿದೆ.

ವಿ ಆಕಾರದ ಕ್ರೋಮ್ ಗ್ರಿಲ್
ಕ್ರೋಮ್ ಫಿನಿಶ್ ಪಡೆದ ಫ್ರಂಟ್ ಫಾಗ್ ಲ್ಯಾಂಪ್
ಪ್ರೀಮಿಯಂ ಲುಕ್
ಹಿಂದುಗಡೆ ಪರಿಷ್ಕೃತ ಬಂಪರ್
ಎಲ್‌ಇಡಿ ಟೈಲ್ ಲ್ಯಾಂಪ್
8 ಸ್ಪೋಕ್ ಅಲಾಯ್ ವೀಲ್

ನ್ಯೂ ಸೆಂಟರ್ ಕನ್ಸೋಲ್
ಪ್ರೀಮಿಯಂ ಅನುಭವ
ಅಲ್ಟ್ರಾ ವಿಶಾಲವಾದ ಕ್ಯಾಬಿನ್
ಹೊಂದಾಣಿಸಬಹುದಾದ ಡ್ರೈವ್ ಸೀಟ್
ಆರಾಮದಾಯಕ ಚಾಲನೆ
ಸಿಲ್ವರ್ ಫಿನಿಶ್ ಡೋರ್ ಟ್ರಿಮ್
ಪರಿಷ್ಕೃತ ಸೀಟ್
2 ಡಿನ್ ಮ್ಯೂಸಿಕ್ ಸಿಸ್ಟಂ, ಯುಎಸ್ಬಿ, ಎಯುಎಕ್ಸ್
ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್
ರಿಯರ್ ವ್ಯೂ ಕ್ಯಾಮೆರಾ
ಬ್ಲ್ಯೂಟೂತ್ ಕನೆಕ್ಟಿವಿಟಿ

ಹೊಸ ಮೈಕ್ರಾ ಕಾರಿನ ಪ್ರಮುಖ ಆಕರ್ಷಣೆ ಏನೆಂದರೆ ಇದರಲ್ಲಿರುವ ಸಿವಿಟಿ (Continuously Variable Transmission) ಗೇರ್ ಬಾಕ್ಸ್ ಹಾಗೂ ಸುಧಾರಿತ ಎಕ್ಸ್ ಟ್ರಾನಿಕ್ ಸಿವಿಟಿ ತಂತ್ರಗಾರಿಕೆ ಜತೆ ಸ್ಪೋರ್ಟ್ಸ್ ಮೋಡ್ ಬಟನ್ ಆಗಿದೆ. ದೇಶದ ಹ್ಯಾಚ್‌ಬ್ಯಾಕ್ ಕಾರಿಗೆ ಇಂತಹದೊಂದು ಫೀಚರ್ ಇದೇ ಮೊದಲ ಬಾರಿಗೆ ಆಳವಡಿಸಲಾಗುತ್ತಿದೆ. ಸಿವಿಟಿ ಮೂಲಕ ಚಾಲಕರಿಗೆ ನಯವಾಗಿ ವೇಗವರ್ಧಿಸಲು ಸಾಧ್ಯವಾಗಲಿದೆ.

ಎರಡು ಎಂಜಿನ್ ವೆರಿಯಂಟ್‌ಗಳಲ್ಲಿ ನಿಸ್ಸಾನ್ ಮೈಕ್ರಾ ಆಗಮನವಾಗಿದೆ. ಇದು ಗರಿಷ್ಠ ನಿರ್ವಹಣೆಗೆ ಸಹಕಾರಿಯಾಗಿದೆ. ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ಗೆ 18.44 ಕೀ.ಮೀ. ಹಾಗೂ 1.5 ಲೀಟರ್ ಡೀಸೆಲ್ ವೆರಿಯಂಟ್ ಪ್ರತಿ ಲೀಟರ್‌ಗೆ 23.08 ಕೀ.ಮೀ ಮೈಲೇಜ್ ನೀಡಲಿದೆ.

ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಜತೆ ಸೈಡ್ ಏರ್ ಬ್ಯಾಗ್
ಆಂಟಿ ಲಾಂಕಿಂಗ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್)
ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ)
ಬ್ರೇಕ್ ಅಸಿಸ್ಟ್ (ಬಿಎ)
ರಿವರ್ಸ್ ಕ್ಯಾಮೆರಾ
ಆಟೋ ಆಂಟಿ ಡ್ಯಾಜ್ಲಿಂಗ್ ರೂಮ್ ಮಿರರ್

ಒಟ್ಟು ನಾಲ್ಕು ಸ್ಟಾಂಡರ್ಡ್ ವೆರಿಯಂಟ್‌ಗಳಲ್ಲಿ ನಿಸ್ಸಾನ್ ಮೈಕ್ರಾ ಲಭ್ಯವಿರುತ್ತದೆ.
ಎಕ್ಸ್‌ಎಲ್, ಎಕ್ಸ್ ಎಲ್ ಆಯ್ಕೆ, ಎಕ್ಸ್‌ವಿ ಹಾಗೂ ಎಕ್ಸ್‌ವಿ ಪ್ರೀಮಿಯಂ (ಡೀಸೆಲ್)
ಈ ಪೈಕಿ ಎಕ್‌ವಿ ವೆರಿಯಂಟ್‌ನಲ್ಲಿ ಮಾತ್ರ ಮೈಕ್ರಾ ಎಕ್ಸ್ ಟ್ರಾನಿಕ್ ಸಿವಿಟಿ ಲಭ್ಯವಿರಲಿದೆ.

ಒಟ್ಟು ಆರು ಕಲರ್ ವೆರಿಯಂಟ್. ಅವುಗಳೆಂದರೆ
Olive Green (new),
Turquoise Blue (new), Blade Silver,
Storm White,
Onyx Black,
Brick Red.

ನಿಸ್ಸಾನ್ ಮೈಕ್ರಾ ಡೀಸೆಲ್ (ಎಕ್ಸ್ ಶೋ ರೂಂ ಬೆಂಗಳೂರು)
ಎಕ್ಸ್‌ಎಲ್- 610566 ಲಕ್ಷ ರು.
ಎಕ್ಸ್‌ಎಲ್ ಆಪ್ಷನ್- 654330 ಲಕ್ಷ ರು.
ಎಕ್ಸ್‌ವಿ- 701713 ಲಕ್ಷ ರು.
ಎಕ್ಸ್‌ವಿ ಪ್ರೀಮಿಯಂ- 726694 ಲಕ್ಷ ರು.

ನಿಸ್ಸಾನ್ ಮೈಕ್ರಾ ಪೆಟ್ರೋಲ್ (ಎಕ್ಸ್ ಶೋ ರೂಂ ಬೆಂಗಳೂರು)
ಎಕ್ಸ್‌ಎಲ್- 488432 ಲಕ್ಷ ರು.
ಎಕ್ಸ್‌ಎಲ್ ಆಪ್ಷನ್- 552552 ಲಕ್ಷ ರು.
ಎಕ್ಸ್‌ವಿ ಸಿವಿಟಿ- 650614 ಲಕ್ಷ ರು.

30 ವರ್ಷಗಳ ಪರಂಪರೆಯುಳ್ಳ ಮೈಕ್ರಾ ವಿಶ್ವದ್ಯಾಂತ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈಗಾಗಲೇ ಜಾಗತಿಕವಾಗಿ 6.5 ಮಿಲಿಯನ್ ಯನಿಟ್ ಮಾರಾಟ ಸಂಖ್ಯೆ ಪೂರ್ಣಗೊಳಿಸಿರುವ ಮೈಕ್ರಾ ಭಾರತದ ಬೆಳೆದು ಬರುತ್ತಿರುವ ಮಾರುಕಟ್ಟೆಯತ್ತ ದೃಷ್ಟಿ ಹಾಯಿಸಿದೆ.


Click it and Unblock the Notifications








