ಭಾರತದತ್ತ ದೃಷ್ಟಿ ಹಾಯಿಸಿದ ಇನ್ನೊಂದು ನಿಸ್ಸಾನ್ ಎಸ್‌ಯುವಿ
ನೀವು ಭಾರತದ ದೇಶಿಯ ಮಾರುಕಟ್ಟೆಯಲ್ಲಿನ ಆಗು ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇ ಆದ್ದಲ್ಲಿ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್ ಮಾರುಕಟ್ಟೆ ತಂತ್ರ ಸಂಪೂರ್ಣವಾಗಿ ಬದಲಾವಣೆಯಾಗಿರುವುದನ್ನು ನೋಡಬಹುದು.
ಈ ಹಿಂದೆ ದೇಶದಲ್ಲಿ ಸನ್ನಿ ಹಾಗೂ ಮೈಕ್ರಾ ಆವೃತಿಗಳು ನಿರೀಕ್ಷಿದಷ್ಟು ಯಶ ಸಾಧಿಸದಿದ್ದರೂ ಹಿಂಜರಿಯದ ನಿಸ್ಸಾನ್, ಮತ್ತಷ್ಟು ಆಕ್ರಮಣಕಾರಿ ಯೋಜನೆಗಳೊಂದಿಗೆ ದೇಶಕ್ಕೆ ರಿ ಎಂಟ್ರಿ ಕೊಡುವ ಸಿದ್ಧತೆ ನಡೆಸಿತ್ತು.
ಪರಿಷ್ಕೃತ ಮೈಕ್ರಾ ಆಗಮನ ಹಾಗೂ ಟೆರನೊ ಕ್ರಾಸೋವರ್ ಆವೃತ್ತಿಗಳು ಇದಕ್ಕೆ ಪೂರಕವಾಗಿದ್ದವು. ಇಲ್ಲಿಗೆ ನಿಸ್ಸಾನ್ ಯೋಜನೆ ಮುಗಿದಿಲ್ಲ. ಪ್ರಸ್ತುತ ಭಾರತ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಲಭಿಸುತ್ತಿರುವ ಪ್ರತಿಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಸುತ್ತಿರುವ ನಿಸ್ಸಾನ್, ಸದ್ಯದಲ್ಲೇ ದೇಶಕ್ಕೆ ನೂತನ ಎಸ್‌ಯುವ ಕಾರು ಪರಿಚಯಿಸುವ ಯೋಜನೆಯಲ್ಲಿದೆ.

ನಿಸ್ಸಾನ್ ಕ್ಯಾಶ್ ಕಿ
ಇನ್ನೊಂದು ಕ್ರಾಸೋವರ್ ಅಥವಾ ಕಾಂಪಾಕ್ಟ್ ಎಸ್‌ಯುವಿ ಪರಿಚಯಿಸುವುದು ನಿಸ್ಸಾನ್ ಗುರಿಯಾಗಿದೆ. ಅಂದರೆ ನಿಸ್ಸಾನ್ ಕ್ಯಾಶ್ ಕಿ (Qashqai) ಆಗಮನ ಬಹುತೇಕ ಖಚಿತವಾಗಲಿದೆ.

ಪ್ರೀಮಿಯೇ ಕ್ರಾಸೋವರ್
ಪ್ರಸ್ತುತ ಯುರೋಪ್ ಮಾರುಕಟ್ಟೆಯಲ್ಲಿರುವ ಕ್ಯಾಶ್ ಕಿ ನಿಕಟ ಭವಿಷ್ಯದಲ್ಲಿ ಭಾರತೀಯ ಪ್ರೀಮಿಯಂ ಕ್ರಾಸೋವರ್ ಸೆಗ್ಮೆಂಟ್‌ಗೆ ಪ್ರವೇಶಿಸಲಿದೆ.

ಕ್ರಾಸೋವರ್ ಯುಟಿಲಿಟಿ ವೆಹಿಕಲ್
ನಿಸ್ಸಾನ್ ಕ್ಯಾಶ್ ಕಿ (Qashqai) 2007ನೇ ಇಸವಿಯಲ್ಲಿ ಜಪಾನ್ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್‌ನಿಂದ ಬಿಡುಗಡೆಯಾದ ಕ್ರಾಸೋವರ್ ಯುಟಿಲಿಟಿ ವೆಹಿಕಲ್ (ಯುಸಿವಿ) ಆಗಿದೆ.

ನಿಸ್ಸಾನ್ ಡ್ಯುಯಲಿಸ್
ಜಪಾನ್ ಹಾಗೂ ಆಸ್ಟ್ರೇಲಿಯಾದಲ್ಲಿ ನಿಸ್ಸಾನ್ ಡ್ಯುಯಲಿಸ್ (Dualis) ಎಂಬ ಹೆಸರಿನಿಂದ ಅರಿಯಲ್ಪಡುವ ಕ್ಯಾಶ್ ಕಿ ಯುರೋಪ್‌ನಲ್ಲಿ ಜೆ ಸೆಗ್ಮೆಂಟ್‌ನಲ್ಲಿ ಪ್ರದರ್ಶನ ಕಂಡಿತ್ತು.

ಹಿನ್ನಲೆ
ಇರಾನ್ ನೈಋತ್ಯ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಅಲೆಮಾರಿ ಬುಡಕಟ್ಟಿನ ಜನರ ಹೆಸರಿನಲ್ಲಿ ನಿಸ್ಸಾನ್ ಈ ಕಾರಿಗೆ ಕ್ಯಾಶ್ ಕಿ ಎಂಬ ಹೆಸರನ್ನಿಟ್ಟಿತ್ತು.

ಎಂಜಿನ್
ಯುರೋಪ್‌ನಲ್ಲಿ ನಾಲ್ಕು ಎಂಜಿನ್ ಆಯ್ಕೆಗಳೊಂದಿಗೆ ಆಗಮನವಾಗಿರನ್ನು ಈ ಕಾರಲ್ಲಿ ರೆನೊ 1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್ ಕೂಡಾ ಸೇರಿದೆ.

ಮಹೀಂದ್ರ ಪ್ರತಿಸ್ಪರ್ಧಿ
ಭಾರತದಲ್ಲಿ ಪ್ರಮುಖವಾಗಿಯೂ ಮಹೀಂದ್ರ ಎಕ್ಸ್‌ಯುವಿ500 ಪ್ರೀಮಿಯಂ ಎಸ್‌ಯುವಿ ಹಾಗೂ ಹೋಂಡಾ ಸಿಆರ್-ವಿ ಪ್ರತಿಸ್ಪರ್ಧಿಯಾಗಿ ನಿಸ್ಸಾನ್ ಕ್ಯಾಶ್ ಕಿ ರಸ್ತೆಗಿಳಿಯಲಿದೆ.

ಆಲ್ ವೀಲ್ ಡ್ರೈವ್
ಯುರೋಪ್‌ನಲ್ಲಿ ಫ್ರಂಟ್ ವೀಲ್ ಹಾಗೂ ಆಲ್ ವೀಲ್ ಡ್ರೈವ್ ಸಂರಚನೆಗಳಲ್ಲಿ ಆಗಮನವಾಗಿರುವ ಕ್ಯಾಶ್ ಕಿ ಭಾರತದಲ್ಲೂ ಇದನ್ನೇ ಪುನರಾವರ್ತಿಸುವ ಸಾಧ್ಯತೆಯಿದೆ.

ಮುಂದಿನ ವರ್ಷ ಆಗಮನ ಸಾಧ್ಯತೆ
ಅಂದ ಹಾಗೆ ಮುಂದಿನ ಒಂದು ವರ್ಷದೊಳಗೆ ಈ ಬಹುನಿರೀಕ್ಷಿತ ಕಾರನ್ನು ದೇಶಕ್ಕೆ ಪರಿಚಯಿಸುವ ಯೋಜನೆಯನ್ನು ನಿಸ್ಸಾನ್ ಕಂಪನಿ ಹೊಂದಿದೆ.

ದರ ಮಾಹಿತಿ
ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಕ್ರೀಡಾ ಬಳಕೆಯ ವಾಹನಗಳಿಗೆ ಭಾರಿ ಬೇಡಿಕೆಯಿದೆ. ಹಾಗೆಯೇ 15ರಿಂದ 20 ಲಕ್ಷ ರು.ಗಳ ಅಸುಪಾಸಿನಲ್ಲಿ ಕ್ಯಾಶ್ ಕಿ ಆಗಮನವಾಗುವ ನಿರೀಕ್ಷೆಯಿದೆ.

ಏಳು ಸೀಟು, ಐದು ಡೋರ್
ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಏಳು ಸೀಟಿನ ಈ ಐದು ಡೋರಿನ ಕ್ಯಾಶ್ ಕಿ ಕ್ರಾಸೋವರ್ ಎಸ್‌ಯುವಿ ಮುಂದಿನ ವರ್ಷ ಭಾರತ ಪ್ರವೇಶ ಪಡೆಯಲಿದೆ.


Click it and Unblock the Notifications