ನಿಸ್ಸಾನ್ ಟೆರನೊ ಎಸ್‍ಯುವಿ ಆದ್ಧೂರಿ ಅನಾವರಣ
ಮುಂಬೈನಲ್ಲಿ ನಡೆದ ಆದ್ಧೂರಿ ಸಮಾರಂಭದಲ್ಲಿ ಬಹುನಿರೀಕ್ಷಿತ ನಿಸ್ಸಾನ್ ಟೆರನೊ ಕಾಂಪಾಕ್ಟ್ ಎಸ್‌ಯುವಿ ಕಾರು ಭರ್ಜರಿ ಅನಾವರಣಗೊಂಡಿದೆ. ಪ್ರಸ್ತುತ ಕಾರು ಅಕ್ಟೋಬರ್ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದ್ದು, ಮುಂಗಡ ಬುಕ್ಕಿಂಗ್ ಸೆಪ್ಟೆಂಬರ್ 1ರಿಂದ ಆರಂಭವಾಗಲಿದೆ.
ಇದರೊಂದಿಗೆ ಫೋರ್ಡ್ ಇಕೊಸ್ಪೋರ್ಟ್ ಹಾಗೂ ರೆನೊ ಡಸ್ಟರ್ ಆವೃತ್ತಿಗಳಿಗೆ ಟೆರನೊ ಮುಖಾಂತರ ನಿಸ್ಸಾನ್ ಸ್ಪಷ್ಟ ಉತ್ತರ ನೀಡಿದಂತಾಗಿದೆ. ನಿಮ್ಮ ಮಾಹಿತಿಗಾಗಿ ಡಸ್ಟರ್ ರಿ ಬ್ಯಾಡ್ಜ್ ಪಡೆದುಕೊಂಡಿರುವ ಟೆರನೊ, ಹೆಚ್ಚಿನ ಪ್ರೀಮಿಯಂ ಲುಕ್‌ನೊಂದಿಗೆ ಆಗಮನವಾಗಿದೆ.
ಎಕ್ಸ್‌ಟೀರಿಯರ್ ಸೇರಿದಂತೆ ಇಂಟಿರಿಯರ್ ಭಾಗಗಳಲ್ಲಿ ಹೆಚ್ಚಿನ ಬದಲಾವಣೆ ತರಲಾಗಿದೆ. ಫೀಚರ್ಸ್‌ಗಳನ್ನು ಗಮನಕ್ಕೆ ತೆಗೆದುಕೊಂಡಾಗ ಇದು ಖಂಡಿತವಾಗಿಯೂ ಡಸ್ಟರ್ ಮೀರಿಸಲಿದೆ ಎಂಬುದು ವಿಶ್ಲೇಷಕರ ಅಭಿಮತವಾಗಿದೆ.

ಫೀಚರ್ಸ್
ವಿಭಿನ್ನ ಬಂಪರ್, ಟೈಲ್ ಗೇಟ್, ಹೆಡ್ ಲ್ಯಾಂಪ್, ಟೈಲ್ ಲೈಟ್ ಹಾಗೂ ಎಲ್ಲ ಹೊಸತನದ ಗ್ರಿಲ್ ನಿಸ್ಸಾನ್ ಟೆರನೊ ವೈಶಿಷ್ಟ್ಯಕ್ಕೆ ಕಾರಣವಾಗಿದೆ. ಹಾಗಿದ್ದರೂ ಇಂಟಿರಿಯರ್ ಭಾಗಗಳು ರೆನೊ ಡಸ್ಟರ್‌ಗೆ ಸಾಮತ್ಯೆಯನ್ನು ಪಡೆದುಕೊಂಡಿದೆ.

ಎಂಜಿನ್ ಮಾಹಿತಿ
ಇನ್ನು ಎಂಜಿನ್ ಬಗ್ಗೆ ಮಾತನಾಡುವುದಾದರೆ, ಡಸ್ಟರ್‌ನಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಆಯ್ಕೆಯನ್ನು ನೀವಿಲ್ಲಿ ಗುರುತಿಸಬಹುದು. ನೂತನ ಟೆರನೊದಲ್ಲಿ 1.6 ಲೀಟರ್ ಪೆಟ್ರೋಲ್ ಹಾಗೂ ಎರಡು ಡೀಸೆಲ್ ಎಂಜಿನ್ ಆಯ್ಕೆಗಳಿವೆ.

ಕಾಂಪಾಕ್ಟ್ ಎಸ್‌ಯುವಿ
ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಲೇ ಇವೆ. ಇದನ್ನು ಗುರುತಿಸಿಕೊಂಡಿರುವ ನಿಸ್ಸಾನ್ ಮೂಲದ ನಿಸ್ಸಾನ್, ಟೆರನೊ ಮುಖಾಂತರ ಭಾರತದಲ್ಲಿ ಭದ್ರ ನೆಲೆ ಸ್ಥಾಪಿಸುವ ಇರಾದೆ ಹೊಂದಿದೆ.

ಎಸ್ಯುವಿ
ಸದ್ಯ ಹೊಂದಿರುವ ಎಸ್‌ಯುವಿ ಗ್ರಾಹಕರನ್ನು ಸಹ ನೂತನ ಟೆರನೊಗೆ ಸ್ಥಳಾಂತರವಾಗುವ ಮೂಲಕ ಹೊಸ ಅನುಭವ ಗಿಟ್ಟಿಸಿಕೊಳ್ಳಬಹುದಾಗಿದೆ ಎಂದು ಕಂಪನಿ ಭರವಸೆ ವ್ಯಕ್ತಪಡಿಸಿದೆ.

ಅಕ್ಟೋಬರ್‌ನಲ್ಲಿ ರಸ್ತೆಗೆ
ಅಂದ ಹಾಗೆ ನೂತನ ನಿಸ್ಸಾನ್ ಟೆರನೊ ಮುಂಗಡ ಬುಕ್ಕಿಂಗ್ ಸೆಪ್ಟೆಂಬರ್ 1ರಂದು ಆರಂಭವಾಗಲಿದೆ. ಹಾಗೆಯೇ ಈ ಬಹುನಿರೀಕ್ಷಿತ ಕಾರು ಭಾರತೀಯ ರಸ್ತೆಯನ್ನು ಆಕ್ಟೋಬರ್ 1ರಂದು ಪ್ರವೇಶಿಸಲಿದೆ.

ದರ ಮಾಹಿತಿ
ಇನ್ನು ದರದ ಬಗ್ಗೆ ಕಂಪನಿ ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ಆಟೋ ವಿಶ್ಲೇಷಕರ ಪ್ರಕಾರ ನೂತನ ಟೆರನೊ 10 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.


Click it and Unblock the Notifications








