ಅಮಿತ ವೇಗವೇ ಪಾಲ್ ವಾಕರ್ ಸಾವಿಗೆ ಕಾರಣ..!

By Nagaraja

ಇತ್ತೀಚೆಗಷ್ಟೇ ಕಾರು ಅಪಘಾತವೊಂದರಲ್ಲಿ ವಿಶ್ವ ಪ್ರಸಿದ್ಧ ನಟ ಪಾಲ್ ವಾಕರ್ ಸಾವನ್ನಪ್ಪಿದ್ದರು. ಇದೀಗ ಬಂದಿರುವ ಮರಣೋತ್ತರ ಪರೀಕ್ಷಾ ವರದಿಯಲ್ಲಿ, ಅಮಿತ ವೇಗವೇ ಸಾವಿಗೆ ಕಾರಣ ಎಂಬುದು ತಿಳಿದು ಬಂದಿದೆ.

ಇವನ್ನೂ ಓದಿ: 'ಒಂದು ದಿನ ವೇಗ ನನ್ನ ಕೊಂದರೆ ಅಳದಿರಿ, ಯಾಕೆಂದರೆ ನಾನು ನಗುತ್ತಿರುವೆನು'

ಫಾಸ್ಟ್ ಆಂಡ್ ಫ್ಯೂರಿಯಸ್' ಚಲನಚಿತ್ರ ಮೂಲಕ ಜನಪ್ರಿಯರಾಗಿದ್ದ ಪಾಲ್ ವಾಕರ್ 2013 ನವೆಂಬರ್ 30ರಂದು ತಮ್ಮದೇ ಸಹಾಯಾರ್ಥ ಸಂಸ್ಥೆ 'ರೀಚ್ ಔಟ್ ವರ್ಲ್ಡ್ ವೈಡ್' ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ನೇಹಿತನ ಜತೆ ಕಾರಲ್ಲಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು. ಅಮಿತ ವೇಗದಲ್ಲಿದ್ದ ಕಾರು ಮೊದಲು ರಸ್ತೆ ಬದಿಯಲ್ಲಿದ್ದ ಕಂಬಕ್ಕೆ ಹೊಡೆದು ಬಳಿಕ ಮರಕ್ಕೆ ಢಿಕ್ಕಿ ಹೊಡೆದಿತ್ತು. ತಕ್ಷಣವೇ ಕಾರು ಬೆಂಕಿಗಾಹುತಿಯಾದ ಪರಿಣಾಮವಾಗಿ ಪಾಲ್ ವಾಕರ್ ಜತೆಗೆ ಸ್ನೇಹಿತ ರೋಜರ್ ರೋಡಸ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಅಮಿತ ವೇಗವೇ ಪಾಲ್ ವಾಕರ್ ಸಾವಿಗೆ ಕಾರಣ..!

ಇದೀಗ ಲಾಸ್ ಏಂಜಲೀಸ್‌ನ ಕೌಂಟಿ ಕೊರೊನೆರ್‌ ಕಚೇರಿ (County Coroner's office) ಬಿಡುಗಡೆ ಮಾಡಿರುವ ಮರಣೋತ್ತರ ಪರೀಕ್ಷಾ ವರದಿಯಲ್ಲಿ, ವಾಕರ್ ಸಂಚರಿಸುತ್ತಿದ್ದ ಪೋರ್ಷೆ ಕರೆರಾ ಜಿಟಿ ಸೂಪರ್ ಕಾರು ಗಂಟೆಗೆ 160ಕ್ಕೂ ಕೀ.ಮೀ. ಹೆಚ್ಚು ವೇಗದಲ್ಲಿ ಸಂಚರಿಸುತ್ತಿತ್ತು ಎಂಬುದು ಬಯಲಾಗಿದೆ.

ಅಮಿತ ವೇಗವೇ ಪಾಲ್ ವಾಕರ್ ಸಾವಿಗೆ ಕಾರಣ..!

ಈ 15 ಪುಟಗಳ ವರದಿಯಲ್ಲಿ ಅಮಿತ ವೇಗ ಸಾವಿಗೆ ಕಾರಣ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಯಾವ ಕಾರಣದಿಂದಾಗಿ ಚಾಲಕನಿಗೆ ನಿಯಂತ್ರಣ ತಪ್ಪಿತ್ತು ಎಂಬುದು ಇನ್ನೂ ತಿಳಿದು ಬಂದಿಲ್ಲ. ಅಪಘಾತ ವೇಳೆ ಪಾಲ್ ವಾಕರ್ ಸ್ನೇಹಿತ ಕಾರನ್ನು ಚಲಾಯಿಸುತ್ತಿದ್ದರು.

ಅಮಿತ ವೇಗವೇ ಪಾಲ್ ವಾಕರ್ ಸಾವಿಗೆ ಕಾರಣ..!

ಅಮೆರಿಕದಲ್ಲಿ ವೇಗದಲ್ಲಿ ಕಾರು ಓಡಿಸುವುದು ಸರ್ವೇ ಸಾಮಾನ್ಯವಾಗಿದೆ. ಅಲ್ಲಿನ ರಸ್ತೆ ಅಷ್ಟೊಂದು ಗುಣಮಟ್ಟದಲ್ಲಿರುತ್ತದೆ. ಹಾಗೆಯೇ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಹಾಗಿರುವಾಗ ಕಾರಿನ ನಿಯಂತ್ರಣ ಹೇಗೆ ತಪ್ಪಿತ್ತು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಅಮಿತ ವೇಗವೇ ಪಾಲ್ ವಾಕರ್ ಸಾವಿಗೆ ಕಾರಣ..!

ಇದೇ ಸಂದರ್ಭದಲ್ಲಿ ವಾಕರ್ ಹಾಗೂ ಆತನ ಸ್ನೇಹಿತ ರೋಡಸ್, ಚಾಲನೆ ವೇಳೆ ಪಾನಮತ್ತರಾಗಿರಲಿಲ್ಲ ಎಂಬುದನ್ನು ಸಹ ವರದಿ ಉಲ್ಲೇಖಿಸಿದೆ. ಅಂದರೆ ಚಾಲನೆ ವೇಳೆ ಪ್ರಜ್ಞಾವಸ್ಥೆಯಲ್ಲಿದ್ದರು ಹಾಗೂ ಯಾವುದೇ ಅಮಲಿನ ಪಾನೀಯಗಳನ್ನು ಸೇವಿಸಿರಲಿಲ್ಲ ಎಂಬುದು ಸಹ ದಾಖಲಾಗಿದೆ.

ಅಮಿತ ವೇಗವೇ ಪಾಲ್ ವಾಕರ್ ಸಾವಿಗೆ ಕಾರಣ..!

ತಲೆ, ಕುತ್ತಿಗೆ ಮತ್ತು ಎದೆಗೆ ಗಂಭೀರ ಗಾಯ ಮಾಡಿಕೊಂಡ ರೋಡಸ್ ತಕ್ಷಣವೇ ಮೃತಪಟ್ಟಿದ್ದರೆ ಕಾರಿಗೆ ಬೆಂಕಿ ಆವರಿಸುವವರೆಗೂ ತಮ್ಮ ಪ್ರಾಣಕ್ಕಾಗಿ ವಾಕರ್ ಹೋರಾಟ ನಡೆಸುತ್ತಿದ್ದರು ಎನ್ನಲಾಗಿದೆ.

ಅಮಿತ ವೇಗವೇ ಪಾಲ್ ವಾಕರ್ ಸಾವಿಗೆ ಕಾರಣ..!

ಈ ನಡುವೆ ಪಾಲ್ ವಾಕರ್ ಅಭಿನಯದ ಕೊನೆಯ ಚಿತ್ರವಾಗಿರುವ 'ಫಾಸ್ಟ್ ಆಂಡ್ ಪ್ಯೂರಿಯಸ್ 7' ಬಿಡುಗಡೆ ದಿನಾಂಕವನ್ನು 2014 ಜುಲೈನಿಂದ 2015 ಎಪ್ರಿಲ್ 10ಕ್ಕೆ ಮುಂದೂಡಲಾಗಿದೆ. ಪಾಲ್ ವಾಕರ್ ಮರಣದ ಹಿನ್ನಲೆಯಲ್ಲಿ ಕಥೆ, ಸಂಭಾಷಣೆ ಮತ್ತೆ ಬರೆಯಲಾಗುವುದು.

More from DriveSpark

Article Published On: Monday, January 6, 2014, 12:17 [IST]
English summary
It has finally been confirmed that excess speed was the reason behind the car crash in which Hollywood actor Paul Walker and his friend Roger Rodas died.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+