ಪೋರ್ಷೆ ಸ್ಪೋರ್ಟ್ಸ್ ಕಾರು ಖರೀದಿ ಮುನ್ನ ಸ್ವಲ್ಪ ಯೋಚಿಸಿ
ಕೊನೆಗೂ ದೇಶದ ಕ್ರೀಡಾ ಕಾರು ಸ್ನೇಹಿಗಳಿಗೆ ಸಿಹಿ ಸುದ್ದಿ ಬಂದಿದ್ದು, ವಿಶ್ವದ ಮುಂಚೂಣಿಯ ಸ್ಪೋರ್ಟ್ಸ್ ಕಾರು ತಯಾರಕ ಸಂಸ್ಥೆಯಾಗಿರುವ ಪೋರ್ಷೆ ನೂತನ ಕೆಮಾನ್ ಎಸ್ ಕಾರನ್ನು ಭಾರತಕ್ಕೆ ಪರಿಚಯಿಸಿದೆ.
ಆದರೆ ದರ ಮಾತ್ರ ಸ್ವಲ್ಪ ದುಬಾರಿಯಾಗಿದ್ದು, ದೆಹಲಿ ಎಕ್ಸ್ ಶೋ ರೂಂ ದರ 93.99 ಲಕ್ಷ ರು.ಗಳಾಗಿವೆ. ಕಳೆದ ವರ್ಷ ಲಾಸ್ ಏಜಂಲೀಸ್ ಆಟೋ ಶೋದಲ್ಲಿ ಅನಾವರಣಗೊಂಡಿದ್ದ ಪ್ರಸ್ತುತ ಕಾರು ಶಕ್ತಿಯುತ ನಿರ್ವಹಣೆಗೆ ಹೆಸರುವಾಸಿಯಾಗಿದೆ.
ಇದು 3.4 ಲೀಟರ್ ಫ್ಲಾಟ್ ಸಿಕ್ಸ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 321 ಅಶ್ವಶಕ್ತಿ (370 ಎನ್‌ಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಕೇವಲ 4.9 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗ ವರ್ಧಿಸುವ ಸಾಮರ್ಥ್ಯ ಹೊಂದಿದೆ.

ಪೋರ್ಷೆ ಕೆಮಾನ್ ಎಸ್
ಭಾರತೀಯ ಗ್ರಾಹಕರನ್ನು ಗಮನಕ್ಕೆ ತೆಗೆದುಕೊಂಡಾಗ ದರ ತುಂಬಾನೇ ದುಬಾರಿಯಾಗಿರುವುದರಿಂದ ಆರಂಭದಲ್ಲೇ ನಾವು ಪೋರ್ಷೆ ಸ್ಪೋರ್ಟ್ಸ್ ಕಾರು ತಗೊಳ್ಳುವ ಮುನ್ನ ಸ್ವಲ್ಪ ಯೋಚಿಸಿ ಎಂಬ ಶೀರ್ಷಿಕೆ ನೀಡಿದ್ದೇವೆ. ಆದರೆ ಖಂಡಿತವಾಗಿಯೂ ಪೋರ್ಷೆ ಗರಿಷ್ಠ ನಿರ್ವಹಣೆಯನ್ನು ಖಾತ್ರಿಪಡಿಸುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಪೋರ್ಷೆ ಕೆಮಾನ್ ಎಸ್

ಪೋರ್ಷೆ ಕೆಮಾನ್ ಎಸ್

ಪೋರ್ಷೆ ಕೆಮಾನ್ ಎಸ್

ಪೋರ್ಷೆ ಕೆಮಾನ್ ಎಸ್

ಪೋರ್ಷೆ ಕೆಮಾನ್ ಎಸ್

ಪೋರ್ಷೆ ಕೆಮಾನ್ ಎಸ್

ಪೋರ್ಷೆ ಕೆಮಾನ್ ಎಸ್

ಪೋರ್ಷೆ ಕೆಮಾನ್ ಎಸ್



Click it and Unblock the Notifications








