ಮುಂಬೈ ಮಾಯಾನಗರಿಯಲ್ಲಿ ರೇಂಜ್ ರೋವರ್ ಮಾಯೆ

By Nagaraja

ಅಂದೊಂದು ದೈತ್ಯ ಕಾರು. ತನ್ನ ಆಧುನಿಕ ತಂತ್ರಜ್ಞಾನಗಳನ್ನು ಆವಿಷ್ಕರಿಸುವುದರ ನಿಟ್ಟಿನಲ್ಲಿ ವಿಶೇಷ Rallyಯೊಂದನ್ನು ಹಮ್ಮಿಕೊಳ್ಳಲಾಗಿತ್ತು. ಹೌದು, ಅಲ್ಲಿ ದೂರದ ಯುರೋಪ್ ಖಂಡದಿಂದ ಆರಂಭವಾಗಿದ್ದ ರೇಂಜ್ ರೋವರ್ ಹೈಬ್ರಿಡ್ ಸಿಲ್ಕ್ ಟ್ರೈಲ್ 2013 ದಂಡಯಾಂತ್ರೆ (Range Rover Hybrid Silk Trail Expedition 2013) ಭಾರತದ ಮಾಯಾನಗರಿ ಮುಂಬೈನಲ್ಲಿ ಸಮಾಪನಗೊಂಡಿದ್ದು, ಭಾರಿ ಯಶಸ್ಸನ್ನು ಸಾಧಿಸಿದೆ.

ನಿಮ್ಮ ಮಾಹಿತಿಗಾಗಿ, ಹಿಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ಸಿಲ್ಕ್ ರೂಟನ್ನು ರೇಂಜ್ ರೋವರ್ ಎಸ್‌ಯುವಿ ಪ್ರೊಟೊಟೈಪ್ ಕಾರುಗಳಿಗಾಗಿ ಬಳಸಲಾಗಿತ್ತು. ಬೆಟ್ಟ, ಗುಡ್ಡಗಾಡು, ಮರಭೂಮಿ ಸೇರಿದಂತೆ ಎಲ್ಲ ತರಹದ ಭೂಪ್ರದೇಶವನ್ನು ಹೊಂದಿರುವ ಈ ಹಾದಿಯಲ್ಲಿ ರೇಂಜ್ ರೋವರ್‌ ಹೈಬ್ರಿಡ್ ಎಸ್‌ಯುವಿಗಳು ಭರ್ಜರಿ ಸವಾರಿ ನಡೆಸುವಲ್ಲಿ ಯಶಸ್ಸನ್ನು ಕಂಡಿದೆ.

ಒಟ್ಟು ಎರಡು ತಿಂಗಳುಗಷ್ಟು ಸಾಗಿದ್ದ ಈ ಯಾತ್ರೆಯು 17,000 ಕೀ.ಮೀ.ಗಳಷ್ಟು ಕ್ರಮಿಕರಿಸಿತ್ತು. ಇದು ರೇಂಜ್ ರೋವರ್ ಹೈಬ್ರಿಡ್ ಕಾರುಗಳನ್ನು ಸಾಮರ್ಥ್ಯವನ್ನು ನಿರೂಪಿಸಿದ್ದು, ಸದ್ಯದಲ್ಲೇ ಉತ್ಪಾದನಾ ವರ್ಷನ್ ಪಡೆದುಕೊಳ್ಳುವ ಸಂಕೇತ ನೀಡಿವೆ.

Range Rover Hybrid Silk Trail Expedition

ಆಗಸ್ಟ್ 22ರಂದು ಲ್ಯಾಂಡ್ ರೋವರ್ ತವರೂರು ಬ್ರಿಟನ್‌ನ ಸೊಲಿಹಲ್‌ನಿಂದ ಆರಂಭಿಸಿದ್ದ ರಾಲಿಯು, ಲ್ಯಾಂಡ್ ರೋವರ್ ಮಾತೃಸಂಸ್ಥೆ ಟಾಟಾ ಮೋಟಾರ್ಸ್ ತವರೂರಾದ ಮುಂಬೈನಲ್ಲಿ ಕೊನೆಗೊಂಡಿದೆ.

Range Rover Hybrid Silk Trail Expedition

53 ದಿನಗಳಷ್ಟು ಕಾಲ ಸಾಗಿದ ಈ ಜೈತ್ರಯಾತ್ರೆಯು 13 ದೇಶಗಳನ್ನು ಸುತ್ತುವರಿದಿತ್ತಲ್ಲದೆ ಭರ್ತಿ 16,853 ಕೀ.ಮೀ.ಗಳನ್ನು ಕ್ರಮಿಕರಿಸಿತ್ತು.

Range Rover Hybrid Silk Trail Expedition

ಒಟ್ಟು ಮೂರು ರೇಂಜ್ ವೋವರ್ ಡೀಸೆಲ್ ಹೈಬ್ರಿಡ್ ಕ್ರೀಡಾ ಉತ್ಪಾದಕ ವಾಹನಗಳು ಜತೆಗೆ ಇತರ ಸಹಾಯಕ ಕಾರುಗಳು ರಾಲಿಯನ್ನು ಪ್ರತಿನಿಧಿಸಿದ್ದವು.

Range Rover Hybrid Silk Trail Expedition

ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಪೊಲೆಂಡ್, ಉಕ್ರೇನ್, ರಷ್ಯಾ, ಕಜಕಿಸ್ತಾನ, ಉಜ್ಭೇಕಿಸ್ತಾನ, ಕಿರ್ಗಿಸ್ತಾನ, ಚೀನಾ (ಟಿಬೆಟ್ ಸೇರಿ), ನೇಪಾಳ ಮೂಲಕ ಅಂತಿಮವಾಗಿ ಅಕ್ಟೋಬರ್ 14ರಂದು ಭಾರತ ಪ್ರವೇಶ ಪಡೆದಿತ್ತು.

Range Rover Hybrid Silk Trail Expedition

ಪುರಾತನ ರಾಜರ ಕಾಲಘಟ್ಟದಲ್ಲಿ ವಾಣಿಜ್ಯಕ್ಕಾಗಿ ಇದೇ ಸಿಲ್ಕ್ ಹಾದಿಯನ್ನು ಬಳಸಲಾಗಿತ್ತು. ಇದು ಪ್ರಮುಖವಾಗಿ ಯುರೋಪ್ ಹಾಗೂ ಏಷ್ಯಾ ಖಂಡಗಳನ್ನು ಬಂಧಿಸುತ್ತಿತ್ತು.

Range Rover Hybrid Silk Trail Expedition

ಅದೇ ರೀತಿ ಅತಿ ಸಾಹಸಾತ್ಮಕ ಮಾರ್ಗವನ್ನು ಹೊಂದಿರುವ ಸಿಲ್ಕ್ ರೂಟ್‌ನಲ್ಲಿ ಸಂಚರಿಸಿದ ಮೊದಲ ಹೈಬ್ರಿಡ್ ಎಸ್‌ಯುವಿ ಕಾರೆಂಬ ಹೆಗ್ಗಳಿಕೆಗೆ ರೇಂಜ್ ರೋವರ್ ಪಾತ್ರವಾಗಿದೆ.

Range Rover Hybrid Silk Trail Expedition

ಹಾದಿ ಎಷ್ಟು ಕ್ಲಿಷ್ಟಕರವಾಗಿತ್ತೆಂದರೆ ವಾಹನಗಳ ಜತೆ ಇದರಲ್ಲಿನ ಸವಾರರು ಸಹ ಕನಿಷ್ಠ ಉಷ್ಣಪಾತ 10ಡಿಗ್ರಿಯಿಂದ ಹಿಡಿದು ಗರಿಷ್ಠ 43 ಡಿಗ್ರಿ ತಾಪಮಾನವನ್ನು ಅರಗಿಸಿಕೊಳ್ಳಬೇಕಾಗಿತ್ತು.

Range Rover Hybrid Silk Trail Expedition

ಸಿಲ್ಕ್ ರೂಟ್, ವಿಶ್ವದ ಅತ್ಯಂತ ಕಠಿಣ ಹಾದಿಯನ್ನು ಹೊಂದಿರುವ ಭೂಪ್ರದೇಶವಾಗಿದೆ. ಇದು ಅಡ್ಡಾದಿಡ್ಡಿ ರಸ್ತೆ, ಆಳವಾದ ಗುಂಡಿ, ಬಿಸಿ ಬಿಸಿ ಮರುಭೂಮಿ, ಧೂಳಿನಿಂದ ಆವೃತವಾದ ರಸ್ತೆ, ಮಣ್ಣಿನ ಹಲವಾರು ಶೈಲಿಯ ರಸ್ತೆ, ಜಲ್ಲಿಯಿಂದ ಕೂಡಿದ ರಸ್ತೆ ಹಾಗೆಯೇ ಜಾನುವಾರು ಜಾಡುಗಳನ್ನು ಹೊಂದಿತ್ತು.

Range Rover Hybrid Silk Trail Expedition

ಪ್ರಸ್ತುತ ತಂಡವು ಅಪಾಯಕಾರಿ ಪರ್ವತಗಳನ್ನು ಹೇಗೆ ದಾಟುತ್ತದೆಯೋ ಅದೇ ರೀತಿ ನದಿಯನ್ನು ಹಾದು ಹೋಗಬೇಕಾಗಿತ್ತು. ಹಾಗೆಯೇ ಅತ್ಯಂತ ಎತ್ತರದಲ್ಲಿ ತೆಳು ಗಾಳಿಯ ಅನುಭವ ಇನ್ನಷ್ಟು ಸುಖಕರವಾಗಿತ್ತು.

Range Rover Hybrid Silk Trail Expedition

ಸಮುದ್ರ ಮಟ್ಟದಿಂದ 3,350ರಿಂದ 5,379 ಮೀಟರ್ ಎತ್ತರ ಪರ್ವತ ಶಿಖರದಲ್ಲೂ ಆಮ್ಲಕನಕ ಅಂಶ ಶೇಕಡಾ 10ರಷ್ಟು ಅಭಾವವಿದ್ದರೂ ಸಾಹಸಿಕರಿಗೆ ಇಂದೊಂದು ಸಮಸ್ಯೆಯಾಗಿರಲಿಲ್ಲ.

Range Rover Hybrid Silk Trail Expedition

ಅದೇ ರೀತಿ 5,300 ಮೀಟರ್ ಎತ್ತರದಲ್ಲಿರುವ ಚೀನಾದ ಕ್ಸಿನ್‌ಜಿಯಾಂಗ್ ಟಿಬೆಟ್ ಹೆದ್ದಾರಿಯಲ್ಲಿ ಪಯಣಿಸಿದ ರೇಂಜ್ ರೋವರ್ ಹೈಬ್ರಿಡ್, ಈ ಹಾದಿಯಲ್ಲಿ ಸಾಗಿದ ಮೊದಲ ವಿದೇಶಿ ದಾಖಲಾತಿ ಹೊಂದಿದ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

Range Rover Hybrid Silk Trail Expedition

ಅಂದ ಹಾಗೆ ರೇಂಜ್ ರೋವರ್ ಹೈಬ್ರಿಡ್ ಎಸ್‌ಯುವಿ ಟಿಡಿವಿ6 3.0 ಲೀಟರ್ ಟರ್ಬೊ ಎಂಜಿನ್‌ನಿಂದ ನಿಯಂತ್ರಿಸ್ಪಡುತ್ತದೆ. ಹಾಗೆಯೇ 35 ಕೆಡಬ್ಲ್ಯು ಎಲೆಕ್ಟ್ರಿಕ್ ಮೋಟಾರ್ ಸಹ ಹೊಂದಿದೆ.

Range Rover Hybrid Silk Trail Expedition

ಈ ಮೂಲಕ ರೇಂಜ್ ರೋವರ್ ಹೈಬ್ರಿಡ್ ಕಾರುಗಳು ಗರಿಷ್ಠ ನಿರ್ವಹಣೆ ನೀಡುವಲ್ಲಿ ಯಶಸ್ಸನ್ನು ಕಂಡಿದೆ. ಖಂಡಿತ ಭವಿಷ್ಯದ ಸಂಚಾರದಲ್ಲಿ ಇದು ದೊಡ್ಡ ಪರಿಣಾಮ ಬೀರಲಿದೆ.

Range Rover Hybrid Silk Trail Expedition

ಈ ಎಲ್ಲದರ ನಡುವೆಯೂ ಪ್ರತಿ ಲೀಟರ್‌ಗೆ 15.3 ರಿಂದ 15.7 ಕೀ.ಮೀ. ಮೈಲೇಜ್ ಕಾಪಾಡುವಲ್ಲಿ ರೇಂಜ್ ರೋವರ್ ಯಶಸ್ವಿಯಾಗಿರುವುದು ಇನ್ನೊಂದು ವಿಶೇಷವಾಗಿದೆ.

Range Rover Hybrid Silk Trail Expedition

ಕೆಲವೊಂದು ಸಣ್ಣಪುಟ್ಟ ಸವಾಲುಗಳನ್ನು ಎದುರಿಸಿದನ್ನು ಬಿಟ್ಟರೆ ರೇಂಜ್ ರೋವರ್ ರಾಲಿಯು ಸಂಪೂರ್ಣ ಯಶಸ್ಸನ್ನು ಕಂಡಿತ್ತು.

Range Rover Hybrid Silk Trail Expedition

ಹಾಗೆಯೇ ರೇಂಜ್ ರೋವರ್ ಹೈಬ್ರಿಡ್‌ನಲ್ಲಿ ಲಗತ್ತಿಸಲಾಗಿದ್ದ ಡಾಟಾ ಲಾಗರ್ ನೆರವಿನಿಂದ ಬ್ರಿಟನ್‌ನಲ್ಲಿ ಕಾರ್ಯನಿರತವಾಗಿದ್ದ ಎಂಜಿನಿಯರುಗಳಿಗೆ ತಾಂತ್ರಿಕ ಮಾಹಿತಿಯನ್ನು ರವಾನಿಸುತ್ತಿತ್ತು.

Range Rover Hybrid Silk Trail Expedition

ಇದು ಎಲ್ಲ ತರಹದ ಭೂಪ್ರದೇಶದಲ್ಲೂ ಅತ್ಯಧಿಕ ತಾಪಮಾನದಲ್ಲೂ ಎಂಜಿನ್ ಹಾಗೂ ಟ್ರಾನ್ಸ್‌ಮಿಷನ್‌ಗಳ ಗರಿಷ್ಠ ನಿರ್ವಹಣೆಯನ್ನು ಖಾತ್ರಿಪಡಿಸುತ್ತಿದ್ದವು.

Range Rover Hybrid Silk Trail Expedition

ಒಟ್ಟಿನಲ್ಲಿ ಇಂಧನ ಕ್ಷಮತೆಯಲ್ಲಿ ಯಾವುದೇ ರಾಜಿಗೂ ತಯಾರಾಗದ ರೇಂಜ್ ರೋವರ್ ಹೈಬ್ರಿಡ್ ಕಾರುಗಳು, ದೀರ್ಘ ದೂರದ ಐಷಾರಾಮಿ ಪಯಣದ ಅನುಭವನವನ್ನು ಇಡೀ ಜಗತ್ತಿಗೆ ಸಾರಿಗೆ. ಎಲ್ಲ ಯಾತ್ರಿಕರಿಗೂ ಇಂದೊಂದು ಸ್ಮರಣೀಯ ಅನುಭವವಾಗಿತ್ತು.

More from DriveSpark

Article Published On: Tuesday, October 15, 2013, 16:06 [IST]
English summary
This story is about the awe inspiring journey made by three Land Rover Range Rover Hybrid Prototype SUVs. The Silk Trail 2013 expedition started in UK and ended in India. The intercontinental expedition lasting nearly two months saw the team cover a distance of nearly 17,000 kms.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+