ದಾಖಲೆ ಸಮಯದಲ್ಲಿ ಅರಬ್ ಮರುಭೂಮಿ ಕ್ರಮಿಸಿದ ರೇಂಜ್ ರೋವರ್

By Nagaraja

ವಾಹನ ತಯಾರಕ ಸಂಸ್ಥೆಗಳು ತಮ್ಮ ಕಾರಿನ ಸಾಮರ್ಥ್ಯವನ್ನು ನಿರೂಪಿಸುವ ಹಿನ್ನಲೆಯಲ್ಲಿ ಹೊಸ ಹೊಸ ಪ್ರಯತ್ನಕ್ಕೆ ಮುಂದಾಗುತ್ತಿದೆ. ಇದಕ್ಕೊಂದು ಸೇರ್ಪಡೆಯೆಂಬಂತೆ ಜಗತ್ತಿನ ದುಬಾರಿ ಕಾರು ಬ್ರಾಂಡ್‌ಗಳಲ್ಲಿ ಒಂದಾಗಿರುವ ರೇಂಜ್ ರೋವರ್ ನೂತನ ದಾಖಲೆಯೊಂದನ್ನು ಸ್ಥಾಪಿಸಿದೆ.

ಹೌದು ಇದೀಗಷ್ಟೇ ಲಾಂಚ್ ಆಗಿರುವ ರೇಂಜ್ ರೋವರ್ ಸ್ಪೋಟ್, ಅರಬ್ ಮರಭೂಮಿಯನ್ನು ದಾಖಲೆ ಸಮಯದಲ್ಲಿ ಕ್ರಮಿಸುವಲ್ಲಿ ಯಶಸ್ಸನ್ನು ಕಂಡಿದೆ.

ಸಾಮಾನ್ಯವಾಗಿ ದಾಖಲೆಯೊಂದು ಸ್ಥಾಪಿಸುವುದು ಸುಲಭ. ಆದರೆ ಮುರಿಯುವುದು ಅಷ್ಟು ಸುಲಭದ ವಿಚಾರವಲ್ಲ. ಆದರೆ ಈ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ 2014 ರೇಂಜ್ ರೋವರ್ ಸ್ಪೋರ್ಟ್ ಯಶಸ್ವಿಯಾಗಿದೆ.

ದಾಖಲೆ ಸಮಯದಲ್ಲಿ ಅರಬ್ ಮರುಭೂಮಿ ಕ್ರಮಿಸಿದ ರೇಂಜ್ ರೋವರ್

ಜಗತ್ತಿನ ಅತಿದೊಡ್ಡ ಮರಳು ಮರುಭೂಮಿಯಾಗಿರುವ ಅರಬಿಯನ್ ಡಸರ್ಟ್‌ನ 'ಎಮ್ಟಿ ಕ್ವಾರ್ಟರ್' ಪ್ರದೇಶವನ್ನು ಅತಿ ವೇಗದಲ್ಲಿ ಮುನ್ನುಗ್ಗುವಲ್ಲಿ 2014 ರೇಂಜ್ ರೋವರ್ ಯಶಸ್ವಿಯಾಗಿದೆ.

ದಾಖಲೆ ಸಮಯದಲ್ಲಿ ಅರಬ್ ಮರುಭೂಮಿ ಕ್ರಮಿಸಿದ ರೇಂಜ್ ರೋವರ್

ಸೌದಿ ಅರೇಬಿಯಾದ ವಾದಿ ಅಡ್ಡ ವಾಸಿ ಪ್ರದೇಶದಿಂದ ತನ್ನ ಪಯಣ ಆರಂಭಿಸಿದ್ದ ರೇಂಜ್ ರೋವರ್ 849 ಕೀ.ಮೀ. ಹಾದಿ ಕ್ರಮಿಸುವ ಮೂಲಕ ಯುಎಇ ತಲುಪಿತ್ತು.

ದಾಖಲೆ ಸಮಯದಲ್ಲಿ ಅರಬ್ ಮರುಭೂಮಿ ಕ್ರಮಿಸಿದ ರೇಂಜ್ ರೋವರ್

2014 ರೇಂಜ್ ರೋವರ್ ಸ್ಪೋರ್ಟ್ ಈ ಹಾದಿಯನ್ನು ಕ್ರಮಿಸಲು 10 ಗಂಟೆ 22 ನಿಮಿಷಗಳಷ್ಟು ಸಮಯ ತಗಲಿತ್ತು. ಅಂದರೆ ಗಂಟೆಗೆ ಸರಾಸರಿ 81.87 ಕೀ.ಮೀ. ವೇಗ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ದಾಖಲೆ ಸಮಯದಲ್ಲಿ ಅರಬ್ ಮರುಭೂಮಿ ಕ್ರಮಿಸಿದ ರೇಂಜ್ ರೋವರ್

ಅಂದ ಹಾಗೆ ಸ್ಪೇನ್‌ನ 47 ವರ್ಷದ ರೇಸರ್ Moi Torrallardona ಎಂಬವರು ರೇಂಜ್ ರೋವರ್ ಸ್ಪೋರ್ಟ್ ಕಾರನ್ನು ಓಡಿಸಿದ್ದರು. ಅಲ್ಲದೆ ಸತತ 10 ಬಾರಿ ಡಕಾರ್ ರಾಲಿಯಲ್ಲಿ ಭಾಗವಹಿಸಿದ ಹೆಮ್ಮೆಯು ಅವರಲ್ಲಿದೆ.

ದಾಖಲೆ ಸಮಯದಲ್ಲಿ ಅರಬ್ ಮರುಭೂಮಿ ಕ್ರಮಿಸಿದ ರೇಂಜ್ ರೋವರ್

ನೂತನ ದಾಖಲೆ ಸ್ಥಾಪಿಸಿರುವ ರೇಂಜ್ ರೋವರ್ ಸ್ಪೋರ್ಟ್ 510 ಪಿಎಸ್ ಪವರ್ ಉತ್ಪಾದಿಸಬಲ್ಲ 5.0 ಲೀಟರ್ ಸೂಪರ್ ಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್‌‌ನಿಂದ ನಿಯಂತ್ರಿಸಲ್ಪಟ್ಟಿದೆ.

ದಾಖಲೆ ಸಮಯದಲ್ಲಿ ಅರಬ್ ಮರುಭೂಮಿ ಕ್ರಮಿಸಿದ ರೇಂಜ್ ರೋವರ್

ಸ್ಟಾಂಡರ್ಡ್ ಉತ್ಪನ್ನ ಚಕ್ರಗಳಿಂದ ಈ ದಾಖಲೆ ರಚಿಸಿರುವುದು ಇನ್ನೊಂದು ವಿಶೇಷವಾಗಿದೆ.

ದಾಖಲೆ ಸಮಯದಲ್ಲಿ ಅರಬ್ ಮರುಭೂಮಿ ಕ್ರಮಿಸಿದ ರೇಂಜ್ ರೋವರ್

ಈ ಮೂಲಕ ಎಲ್ಲ ಹಂತದಲ್ಲಿಯೂ ರೇಂಜ್ ರೋವರ್ ಸ್ಪೋರ್ಟ್ ಎಸ್‌ಯುವಿ ವಾಹನ ಅತ್ಯಂತ ಶಕ್ತಿಶಾಲಿ ಎನಿಸಿಕೊಂಡಿದೆ ಎಂಬುದನ್ನು ಸಾಬೀತುಪಡಿಸಿದೆ.

ಹಾಗಿದ್ದರೆ ಇನ್ಯಾಕೆ ತಡ ರೇಂಜ್ ರೋವರ್ ರೋಚಕ ಕ್ಷಣವನ್ನು ವೀಡಿಯೋ ಮುಖಾಂತರ ಆನಂದಿಸಿರಿ...

Article Published On: Tuesday, November 12, 2013, 12:35 [IST]
English summary
Land Rover has realised that a good way to showcase the capabilities of Range Rovers and get some good publicity for a newly launched vehicle is to set records. It's never easy to break a record, but its comparatively easier to set a new one. The first thing you need to do in that case is find one that has not been set.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+