ಸ್ಕೋಡಾ ಒಕ್ಟಾವಿಯಾ ಅನಾವರಣ; ಭಾರತ ಎಂಟ್ರಿ ಯಾವಾಗ?
ಎಲ್ಲ ಹೊಸತನ ಹೊಂದಿರುವ ನೂತನ ಒಕ್ಟಾವಿಯಾ ಆರ್‌ಎಸ್ ಕಾರನ್ನು ಸ್ಕೋಡಾ ಅನಾವರಣಗೊಳಿಸಿದೆ. ಇದು ಒಕ್ಟಾವಿಯಾ ಆವೃತ್ತಿಗಳ ಪೈಕಿ ಅತಿ ವೇಗದಲ್ಲಿ ಉತ್ಪಾದನೆ ಪೂರ್ಣಗೊಳಿಸಿದ ಕಾರಾಗಿದೆ.
ಪ್ರಸ್ತುತ ಜುಲೈ 10ರಿಂದ ಆರಂಭವಾಗಲಿರುವ ಗುಡ್‌ವುಡ್ ಫೇಸ್ಟಿವಲ್‌ನಲ್ಲಿ ನೂತನ ಒಕ್ಟಾವಿಯಾ ಆರ್‌ಎಸ್ ಕಾರನ್ನು ಸ್ಕೋಡಾ ಪ್ರದರ್ಶನವಾಗಲಿದೆ. ಇದಾದ ಬೆನ್ನಲ್ಲೇ ಈ ಸ್ಪೋರ್ಟಿ ಸೆಡಾನ್ ಕಾರು ಬ್ರಿಟನ್ ಸೇರಿದಂತೆ ಯುರೋಪ್ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ.
ನೂತನ ಸ್ಕೋಡಾ ಒಕ್ಟಾವಿಯಾದ ಆಧುನಿಕ ತಂತ್ರಜ್ಞಾನ ಆಳಡಿಸಲಾಗಿದ್ದು, ಭಾರತಕ್ಕೆ ಯಾವಾಗ ಪ್ರವೇಶ ಪಡೆಯಲಿದೆ ಎಂಬುದು ಕಾರು ಪ್ರಿಯರ ಉತ್ಸಾಹಕ್ಕೆ ಕಾರಣವಾಗಿದೆ.

ಎಂಜಿನ್ ಮಾಹಿತಿ
2.0 ಲೀಟರ್ ಟಿಎಸ್‌ಐ ಪೆಟ್ರೋಲ್ ಎಂಜಿನ್ (220 ಅಶ್ವಶಕ್ತಿ)
2.00 ಲೀಟರ್ ಟಿಡಿಐ ಡೀಸೆಲ್ ಎಂಜಿನ್ (184 ಅಶ್ವಶಕ್ತಿ)

ಟ್ರಾನ್ಸ್‌ಮಿಷನ್
ಎರಡು ಎಂಜಿನ್‌ಗಳು 6 ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ನಿರ್ವಹಣೆ
ನೂತನ ಸ್ಕೋಡಾ ಒಕ್ಟಾವಿಯಾ ಆರ್‌ಎಸ್ ಪೆಟ್ರೋಲ್ ಕೇವಲ 6.8 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಪ್ರತಿ ಗಂಟೆಗೆ 248 ಕೀ.ಮೀ. ಗರಿಷ್ಠ ವೇಗತೆ ಹೊಂದಿದೆ. ಹಾಗೆಯೇ ಡೀಸೆಲ್ ಕಾರು 8.1 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧನೆ ಹಾಗೂ ಗಂಟೆಗೆ ಗರಿಷ್ಠ 232 ಕೀ.ಮೀ. ವೇಗವನ್ನು ಹೊಂದಿದೆ.

ಇಂಧನ ದಕ್ಷತೆ
ಹಾಗಿದ್ದರೂ ಇಂಧನ ದಕ್ಷತೆ ಯಾವುದೇ ಅಧಿಕೃತ ಮಾಹಿತಿಯನ್ನು ಸ್ಕೋಡಾ ಬಹಿರಂಗಪಡಿಸಿಲ್ಲ.

ನೂತನ ಸ್ಕೋಡಾ ನಿರ್ವಹಣೆಯನ್ನು ಪರಿಷ್ಕೃತಗೊಳಿಸಲಾಗಿದ್ದು, ಸ್ಪೋರ್ಟ್ಸ್ ಸಸ್ಫೆಷನ್ ಪಡೆದುಕೊಂಡಿದೆ.

ಡೈಮಷನ್
ಉದ್ದ ಹಾಗೂ ಆಕರ್ಷಕ ಬಾಡಿ ಹೊಂದಿರುವ ಸ್ಕೋಡಾ 102 ಎಂಎಂ ವೀಲ್ ಬೇಸ್ ಹೊಂದಿದೆ.

Skoda Octavia RS

Skoda Octavia RS

Skoda Octavia RS



Click it and Unblock the Notifications








