ಬುಲೆಟ್ ಪ್ರೂಫ್ ಕಿಟ್‌ನೊಂದಿಗೆ ಮಹೀಂದ್ರ ಸ್ಕಾರ್ಪಿಯೊ ಎಂಟ್ರಿ
ದೇಶದ ಸರ್ವಕಾಲಿಕ ಶ್ರೇಷ್ಠ ಎಸ್‌ಯುವಿ ಕಾರುಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಸ್ಕಾರ್ಪಿಯೊ, ಇದೀಗ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಪಡೆದುಕೊಳ್ಳಲಿದೆ.
ಹೌದು, ಸ್ಕಾರ್ಪಿಯೊ ಕ್ರೀಡಾ ಬಳಕೆಯ ವಾಹನದಲ್ಲಿ ಬುಲೆಟ್ ಪ್ರೂಫ್ ಕಿಟ್ ಲಭ್ಯವಿರಲಿದೆ. ಗ್ರಾಹಕರು ಬಯಸಿದ್ದಲ್ಲಿ ನಿಮ್ಮ ಮಹೀಂದ್ರ ಸ್ಕಾರ್ಪಿಯೊಗೆ ಬುಲೆಟ್ ಪ್ರೂಫ್ ಕಿಟ್ ಲಗತ್ತಿಸಬಹುದಾಗಿದೆ. ಅಂತರ್ಜಾಲ ಶಾಪಿಂಗ್ ಜಾಲತಾಣ ಸ್ನಾಪ್‌ಡೀಲ್ ಡಾಟ್ ಕಾಮ್ ಜತೆ ಪಾಲುದಾರಿಕೆ ಹೊಂದಿರುವ ಮಹೀಂದ್ರ ಇಂತಹದೊಂದು ಆಫರ್ ಮುಂದಿಡುತ್ತಿದೆ.

ಢಿಫೆನ್ಸ್ ಲ್ಯಾಂಡ್ ಸಿಸ್ಟಂ ವಿನ್ಯಾಸಗೊಳಿಸಿರುವ ಈ ಬುಲೆಟ್ ಪ್ರೂಫ್ ಕಿಟ್‌ನಲ್ಲಿ ಇಂಧನ ಟ್ಯಾಂಕ್‌ನಲ್ಲಿ ಸ್ಪೋಟಕ ತಡೆ ಘಟಕ, ಬುಲೆಟ್ ಪ್ರೂಫ್ ಗ್ಲಾಸ್, ಪ್ಯಾನೆಲ್ ಹಾಗೂ ಟ್ರಾಕಿಂಗ್ ಡಿವೈಸ್ ಹೊಂದಿರಲಿದೆ.

9 ಎಂಎಂ ಪಿಸ್ತಾಲ್ ಆಕ್ರಮಣವನ್ನು ತಡೆಯುವ ಶಕ್ತಿಯನ್ನು ಇದು ಹೊಂದಿದೆ. ಒಟ್ಟಿನಲ್ಲಿ ಚುನಾವಣಾ ಪ್ರಚಾರದ ವೇಳೆ ನಮ್ಮ ರಾಜಕೀಯ ನಾಯಕರುಗಳಿಗೆ ಇದೊಂದು ಉತ್ತಮ ಆಯ್ಕೆಯಾಗಿರಲಿದೆ.

ಅಂದ ಹಾಗೆ ಬುಲೆಟ್ ಪ್ರೂಫ್ ಕಿಟ್ ದರ 12.67 ಲಕ್ಷ ರು.ಗಳಾಗಿವೆ. ಹಾಗೆಯೇ ಆಸಕ್ತ ಗ್ರಾಹಕರು ಪ್ರಾರಂಭದಲ್ಲಿ ರು. 75,000 ಪಾವತಿಸಬೇಕಾಗಿದೆ. ಇದು ವಿತರಣೆ ಶುಲ್ಕ ಜತೆಗೆ ಎಲ್ಲ ತೆರಿಗೆಗಳನ್ನು ಹೊಂದಿರಲಿದೆ.

ಪ್ರಸ್ತುತ ಬುಲೆಟ್ ಪ್ರೂಫ್ ಕಿಟ್ ಎರಡು ವರ್ಷಗಳ ವಾರಂಟಿಯನ್ನು ಹೊಂದಿರಲಿದ್ದು, ಒಂದು ವರ್ಷದ ಉಚಿತ ವಿಮೆ ಪ್ಯಾಕೇಜ್ ಸಹ ಲಭ್ಯವಾಗಲಿದೆ.

ಫೀಚರ್ಸ್
ಪ್ರಾರಂಭಿಕ ಬುಕ್ಕಿಂಗ್ ದರ ರು. 75,000
ಎಲ್ಲ ಬದಿಗಳಲ್ಲೂ ಬುಲೆಟ್ ಪ್ರೂಫ್ ಪ್ಯಾನೆಲ್
ಇಂಧನ ಟ್ಯಾಂಕ್‌ಗೆ ಸ್ಪೋಟಕ ತಡಾ ಘಟಕ
ಫ್ರಿ ಪಿಕಪ್ ಆಂಡ್ ಡೋರ್ ಡೆಲಿವರಿ
ಬುಲೆಟ್ ಪ್ರೂಫ್ ಗ್ಲಾಸ್
ಉಚಿತ ವಿಮಾ ಸೌಲಭ್ಯ
2 ವರ್ಷಗಳ ವಾರಂಟಿ


Click it and Unblock the Notifications








