ವ್ಯಾಗನಾರ್ 7 ಸೀಟುಗಳ ಎಂಪಿವಿ ಅನಿರೀಕ್ಷಿತ ಎಂಟ್ರಿ
ನಿಮಗೆಲ್ಲರಿಗೂ ವ್ಯಾಗನಾರ್ ಹ್ಯಾಚ್‌ಬ್ಯಾಕ್ ಕಾರಿನ ಬಗ್ಗೆ ತಿಳಿದೇ ಇದೆ. ತನ್ನದೇ ಆದ ವಿಶಿಷ್ಟ ವಿನ್ಯಾಸವನ್ನು ಕಾಪಾಡಿಕೊಂಡಿರುವ ಈ ಹ್ಯಾಚ್‌ಬ್ಯಾಕ್ ಕಾರು ಇದೀಗ ಪರಿಷ್ಕೃತಗೊಳ್ಳುತ್ತಿದೆ.
ಹೌದು, ಮಾರುತಿ ಸುಜುಕಿ ಮಾತೃಸಂಸ್ಥೆಯಾಗಿರುವ ಸುಜುಕಿ, ಇಂಡೋನೇಷ್ಯಾದಲ್ಲಿ ಸಾಗುತ್ತಿರುವ 2013 ಇಂಡೋನೇಷ್ಯಾ ಅಂತರಾಷ್ಟ್ರೀಯ ಮೋಟಾರ್ ಶೋದಲ್ಲಿ (ಐಐಎಂಎಸ್) ನೂತನ ವ್ಯಾಗನಾರ್ ಮಲ್ಟಿ ಪರ್ಪಸ್ ವಾಹನವನ್ನು (ಎಂಪಿವಿ) ಪ್ರದರ್ಶನಕ್ಕಿರಿಸಿದೆ.
ನಿಮ್ಮ ಊಹೆಯಂತೆಯೇ ನೂತನ ಕರಿಮೂನ್ ವ್ಯಾಗನಾರ್ 3 ರಾಸ್ (Karimun Wagon R 3 Rows) ಕಾನ್ಸೆಪ್ಟ್ ಕಾರು ಹೆಚ್ಚು ಸ್ಪೋರ್ಟಿ ಲುಕ್ ಪಡೆದುಕೊಂಡಿದ್ದು, ಎಂಪಿವಿ ಸೆಗ್ಮೆಂಟ್‌ಗೆ ಹೊಂದಿಕೆಯಾಗುವ ರೀತಿಯಲ್ಲಿ ಗಾತ್ರವನ್ನು ವಿನ್ಯಾಸಗೊಳಿಸಲಾಗಿದೆ.
ಸಬ್ ಫೋರ್ ಮೀಟರ್ ಪರಿಧಿಯೊಳಗೆ ಆಗಮನವಾಗಲಿರುವುದರಿಂದ ಭಾರತ ಮಾರುಕಟ್ಟೆಯಲ್ಲಿ ತೆರಿಗೆ ವಿನಾಯಿತಿ ಪೆಡುಕೊಳ್ಳಲು ನೆರವಾಗಲಿದೆ. ಇದು ಇನ್ನಷ್ಟೇ ಆಗಮನವಾಗಬೇಕಾಗಿರುವ ಹೋಂಡಾ ಮೊಬಿಲಿಯೊ ಹಾಗೂ ದಟ್ಸನ್ ಗೊ ಪ್ಲಸ್ ಎಂಪಿವಿ ಕಾರುಗಳಿಗೆ ನಿಕಟ ಪ್ರತಿಸ್ಪರ್ಧಿಯೆನಿಸಲಿದೆ.

ವ್ಯಾಗನಾರ್ ಫ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ನೂತನ ಎಂಪಿವಿ, ಮೂರು ಸಾಲುಗಳ ಸಿಟ್ಟಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಏಳು ಜನರಿಗೆ ಆರಾಮದಾಯಕವಾಗಿ ಕುಳಿತುಕೊಳ್ಳಬಹುದಾಗಿದೆ.

ಮೂರನೇ ಸಾಲಿನಲ್ಲಿ ಆರಾಮದಾಯಕ ಸಿಟ್ಟಿಂಗ್‌ಗಾಗಿ ಕಾರಿನ ಗಾತ್ರವನ್ನು ಹೆಚ್ಚಳಗೊಳಿಸಲಾಗಿದೆ. ಹಾಗೆಯೇ ಮ್ಯಾಜಿಕಲ್ 4 ಮೀಟರ್‌ನೊಳಗೆ ಕಾರು ರಸ್ತೆ ಪ್ರವೇಶಿಸಲಿದೆ.

ಹಾಗಿದ್ದರೂ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಂಪನಿ ಹೊರಗೆಡವಿಲ್ಲ. ಸದ್ಯ ಕಾನ್ಸೆಪ್ಟ್ ಹಂತದಲ್ಲಿರುವ ಕಾರು ಇನ್ನಷ್ಟೇ ಉತ್ಪಾದಕ ವರ್ಷನ್ ಪಡೆದುಕೊಳ್ಳಬೇಕಾಗಿದೆ.

ಇಂಡೋನೇಷ್ಯಾದಲ್ಲಿ ಕಡಿಮೆ ವೆಚ್ಚದ ಹಸಿರು ಕಾರು ಯೋಜನೆಯಡಿಯಲ್ಲಿ ಗುರುತಿಸಿಕೊಳ್ಳಲಿರುವ ವ್ಯಾಗನಾರ್, ತೆರಿಗೆ ವಿನಾಯಿತಿ ಗಿಟ್ಟಿಸಿಕೊಳ್ಳಲಿದೆ.

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ವ್ಯಾಗನಾರ್ ಎಂಪಿವಿ 5.3 ಲಕ್ಷ ರು.ಗಳ ಅಸುಪಾಸಿನಲ್ಲಿ ಆಗಮವಾಗುವ ಸಾಧ್ಯತೆಯಿದೆ. ಇದು ನಿಜಕ್ಕೂ ಎಂಪಿವಿ ಸೆಗ್ಮೆಂಟ್‌ನಲ್ಲಿ ಕ್ರಾಂತಿಕಾರಿ ಬೆಳವಣಿಗೆಗಳಿಗೆ ಕಾರಣವಾಗಲಿದೆ.

ಇನ್ನಷ್ಟೇ ಆಗಮನವಾಗಬೇಕಾಗಿರುವ ದಟ್ಸನ್ ಗೊ ಪ್ಲಸ್ ಕೂಡಾ ಇದೇ ಸೆಗ್ಮೆಂಟ್‌ನಲ್ಲಿ ಗುರುತಿಸಿಕೊಂಡಿದ್ದು, ನೇರ ಪೈಪೋಟಿಗೆ ಆಣಿಯಾಗಲಿದೆ.

ಸಾಮಾನ್ಯ ವ್ಯಾಗನಾರ್ 3595ಎಂಎಂ ಉದ್ದವಿದೆ. ಆದರೆ ನೂತನ ಕರಿಮೂನ್ (karimun) ವ್ಯಾಗನಾರ್ ಆರ್ 3 ಕಾನ್ಸೆಪ್ಟ್ ಇದಕ್ಕಿಂತಲೂ ಹೆಚ್ಚು ಉದ್ದವಾಗಿರಲಿದೆ.

ಆದರೆ ಮೂರನೇ ಸಾಲಿನಲ್ಲಿ ಆರಾಮದಾಯಕ ಸಿಟ್ಟಿಂಗ್ ವ್ಯವಸ್ಥೆಯಿರಲಿದೆಯೇ ಎಂಬುದು ಇನ್ನೂ ಸಂಶಯಕ್ಕೆ ಕಾರಣವಾಗಿದೆ. ಯಾಕೆಂದರೆ ಇದು ಇಕ್ಕಟ್ಟಾಗಿ ಗೋಚರವಾಗುತ್ತಿದ್ದು, ಮಕ್ಕಳಿಗೆ ಮಾತ್ರ ಹೆಚ್ಚು ಆರಾಮದಾಯಕವೆನಿಸಲಿದೆ.

ವ್ಯಾಗನಾರ್ ನೂತನ ಎಂಪಿವಿ ಮುಂದಿನ ವರ್ಷ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇದು ಎರ್ಟಿಗಾ ಲೈಫ್ ಯುಟಿಲಿಟಿ ವೆಹಿಕಲ್ ಕೆಳಗಡೆ ಗುರುತಿಸಿಕೊಳ್ಳಲಿದೆ.


Click it and Unblock the Notifications








