ಮಾರಾಟ ಕುದುರಿಸಲು ಟಾಟಾ 8 ಮಾಸ್ಟರ್ ಪ್ಲಾನ್!

By Nagaraja

ಮಾರಾಟದಲ್ಲಿ ತೀವ್ರ ಕುಸಿತದ ಭೀತಿ ಎದುರಿಸುತ್ತಿರುವ ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ತನ್ನ ಪ್ರಯಾಣಿಕ ವಿಭಾಗದ ವಾಹನಗಳಲ್ಲಿ ಹೊಸ ನೀತಿ ಅನುಸರಿಸಲು ಮುಂದಾಗುತ್ತಿದೆ.

ಇದರ ಅಂಗವಾಗಿ ತನ್ನ ಜನಪ್ರಿಯ ಕಾರುಗಳ ಫೇಸ್ ಲಿಫ್ಟ್ ಆವೃತ್ತಿಗಳ ಸರಣಿಯನ್ನು ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ. ಮಾರುಕಟ್ಟೆಯಲ್ಲಿ ಇದು ಎಷ್ಟರ ಮಟ್ಟಿಗೆ ಯಶ ಕಾಣಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.

ಆಕ್ರಮಣಕಾರಿ ನಡೆಗೆ ಮುಂದಾಗಿರುವ ಟಾಟಾ ಮೋಟಾರ್ಸ್, ಎಂಟು ನೂತನ ಅಪ್‌ಗ್ರೇಡ್‌ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಇದರಲ್ಲಿ ಇಂಡಿಗೊ ಇಸಿಎಸ್, ಟಾಟಾ ಸುಮೋ ಗೋಲ್ದ್, ಟಾಟಾ ನ್ಯಾನೋ ಹಾಗೂ ಇಂಡಿಕಾ ಅಪ್‌ಗ್ರೇಡ್ ವರ್ಷನ್ ಹಾಗೆಯೇ ಟಾಟಾ ಇಂಡಿಗೊ, ಟಾಟಾ ಇಂಡಿಕಾ ಹಾಗೂ ಟಾಟಾ ನ್ಯಾನೋ ಸಿಎನ್‌ಜಿ ವರ್ಷನ್ ಒಳಗೊಂಡಿರಲಿದೆ. ಇದರ ಜತೆಗೆ ಟಾಟಾ ಸಫಾರಿ ಸ್ಟ್ರೋಮ್ ಎಡಿಷನ್ ಕೂಡಾ ಆಗಮನವಾಗಲಿದೆ.

ಟಾಟಾ ನ್ಯಾನೋ ಸಿಎನ್‌ಜಿ

ಮಾರುಕಟ್ಟೆ ಉತ್ತೇಜಿಸುವ ಸಲುವಾಗಿ ವಿಶ್ವದ ಅಗ್ಗದ ಕಾರೆಂಬ ಹೆಗ್ಗಳಿಕೆ ಪಡೆದಿರುವ ಟಾಟಾ ನ್ಯಾನೋ ಸಿಎನ್‌ಜಿ ವರ್ಷನ್ ಆಗಮನವಾಗುತ್ತಿದೆ. ಮೂಲಗಳ ಪ್ರಕಾರ ಟಾಟಾ ನ್ಯಾನೋ ಸಿಎನ್‌ಜಿ ಗುರುವಾರ ಬಿಡುಗಡೆಯಾಗಲಿದೆ.

ಇಂಡಿಗೊ ಇಸಿಎಸ್

ನೂತನ ಫೇಸ್‌ಲಿಫ್ಟ್ ಇಂಡಿಗೊ ಸಿಎಸ್‌ಸಿ ಕಾರಿನಲ್ಲಿ ಹೊಸ ಫ್ರಂಟ್ ಬಂಪರ್, ಸ್ಪೋಕ್ಡ್ ಹೆಡ್‌ಲ್ಯಾಂಪ್ ಹಾಗೂ ಪರಿಷ್ಕೃತ ಗ್ರಿಲ್ ಒಳಗೊಂಡಿರಲಿದೆ.

ಟಾಟಾ ಸುಮೋ ಗೋಲ್ದ್

ಟಾಟಾ ಪಾಲಿಗೆ ಸದಾ ಸಿಹಿ ಅನುಭವ ನೀಡಿರುವ ಟಾಟಾ ಸುಮೋ ಗೋಲ್ಡ್ ಕೂಡಾ ಹೊಸ ಕಲರ್ ವೆರಿಯಂಟ್‌ನಲ್ಲಿ ಆಗಮನವಾಗಲಿದೆ. ಇದರ ಜತೆ ಗ್ರಾಫಿಕ್ಸ್ ಹಾಗೂ ಸಂಪೂರ್ಣ ವೀಲ್ ಕವರ್, ಡ್ಯುಯಲ್ ಎಸಿ ಕೂಲಿಂಗ್ ಹಾಗೂ ಬ್ಲೂಟೂತ್/ಯುಎಸ್‌ಬಿ ಕನೆಕ್ಟಿವಿಟಿ ಪಡೆಯಲಿದೆ.

ಟಾಟಾ ಇಂಡಿಕಾ

ಅದೇ ರೀತಿ ಅಪ್‌ಗ್ರೇಡ್ ಇಂಡಿಕಾ ವರ್ಷನ್‌ನಲ್ಲಿ ಸ್ಮಾರ್ಟ್ ಶಿಫ್ಟ್ ಗೇರ್ ತಂತ್ರಜ್ಞಾನ, ಡ್ಯುಯಲ್ ಪಾಥ್ ಸಸ್ಫೆಷನ್ ಜತೆಗೆ ಡ್ಯುಯಲ್ ಟೋನ್ ಇಂಟಿರಿಯರ್ ಪಡೆದುಕೊಳ್ಳಲಿದೆ.

ಟಾಟಾ ಸಫಾರಿ ಸ್ಟ್ರೋಮ್

ಇನ್ನು ಟಾಟಾ ಸಫಾರಿ ಸ್ಟ್ರೋಮ್ ಎಕ್ಸ್‌ಪ್ಲೋರರ್ ಎಡಿಷನ್‌ನಲ್ಲಿ ಟಚ್‌ಸ್ಕ್ರೀನ್, ಡಬಲ್ ಡಿನ್ ಮಾಹಿತಿ ಸಿಸ್ಟಂ, ಡೋರ್ ವೈಸರ್ ಜತೆ ಇತರ ಆಕರ್ಷಕ ಕಿಟ್ ಹೊಂದಿರಲಿದೆ.

More from DriveSpark

Article Published On: Wednesday, June 19, 2013, 19:04 [IST]
English summary
Tata Motors announces new updated models of Nano, Sumo Gold, Indigo eCS and Indica with new features plus the new CNG range – Tata Indica CNG, Tata Indigo CNG and Tata Nano CNG — and the Explorer Edition of the Tata Safari Storme.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+