ಸದ್ಯದಲ್ಲೇ ಟಾಟಾ ನ್ಯಾನೋ ಫೇಸ್‌ಲಿಫ್ಟ್ ವರ್ಷನ್

By Nagaraja

ವಿಶ್ವದ ಅತಿ ಅಗ್ಗದ ಕಾರು ಪರಿಚಯಿಸಿದ ಕೀರ್ತಿ ಹೊಂದಿರುವ ಟಾಟಾ ಮೋಟಾರ್ಸ್, ದೇಶಕ್ಕೆ ಸದ್ಯದಲ್ಲೇ ನೂತನ ಕಾರೊಂದನ್ನು ಪರಿಚಯಿಸಲು ಹೊರಟಿದೆ. ಈ ಬಾರಿ ಕಂಪನಿ ನ್ಯಾನೋದ ರಿಫ್ರೆಶ್ ವರ್ಷನ್ ಪರಿಚಯಿಸಲು ಹೊರಟಿದೆ.

ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲಿ ಟಾಟಾ ನ್ಯಾನೋ ಫೇಸ್‌ಲಿಫ್ಟ್ ವರ್ಷನ್ ಮಾರುಕಟ್ಟೆಗಿಳಿಸಲು ಟಾಟಾ ಮೋಟಾರ್ಸ್ ಯೋಜನೆ ಹೊಂದಿದೆ. ಇದರೊಂದಿಗೆ ಕಳೆಗುಂದಿರುವ ಮಾರಾಟವನ್ನು ಉತ್ತೇಜಿಸುವ ನಿರೀಕ್ಷೆ ಹೊಂದಿದೆ.

ಟಾಟಾ ನ್ಯಾನೋ ಹೊಸ ವರ್ಷನ್ ಕಾಸ್ಮೆಟಿಕ್ ಬದಲಾವಣೆ ಜತೆಗೆ ಒಳಾಂಗಣ ಹಾಗೂ ಹೊರಂಗಣ ವಿನ್ಯಾಸಗಳನ್ನು ಪಡೆಯಲಿದೆ. ಕಾರಿನ ಹಿಂಬದಿಯಲ್ಲಿ ದೊಡ್ಡದಾದ ಕ್ರೋಮ್ ಪಟ್ಟಿ ಹೊಂದಿರಲಿದೆ. ಹಾಗೆಯೇ ರಿಯರ್ ಬಂಪರ್ ಹನಿಕಾಂಬ್ ವಿನ್ಯಾಸದ ಗ್ರಿಲ್ ಪಡೆಯಲಿದ್ದು, ಇದರಿಂದ ಕಾರನ್ನು ತಂಪಾಗಿರಿಸಲು ನೆರವಾಗಲಿದೆ.

ಕಾರಿನ ಒಳಭಾಗದಲ್ಲಿ ಗ್ಲೋವ್ ಬಾಕ್ಸ್ ಹೊಂದಿರಲಿದ್ದು, ಮ್ಯೂಸಿಕ್ ಸಿಸ್ಟಂ ಕೂಡಾ ಹೊಂದಿರಲಿದೆ. ಇನ್ನು ಎಂಜಿನ್ ಬಗ್ಗೆ ಮಾತನಾಡುವುದಾದರೆ ಈ ಹಿಂದಿನ ಆವೃತ್ತಿಗೆ ಸಮಾನವಾದ 624ಸಿಸಿ 2 ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, 37 ಬಿಎಚ್‌ಪಿ (51ಎನ್‍ಎಂ) ಪರ್ ಉತ್ಪಾದಿಸಲಿದೆ. ಹಾಗೆಯೇ ಫೋರ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇರಲಿದೆ.

Tata To Launch Facelifted Nano Soon

ಕಳೆದ ಕೆಲವು ತಿಂಗಳುಗಳಲ್ಲಿ ಟಾಟಾ ನ್ಯಾನೋ ಮಾರಾಟವು ಕುಸಿತ ಕಂಡಿರುವುದರಿಂದ ಫೇಸ್‌ಲಿಫ್ಟ್ ವರ್ಷನ್ ಲಾಂಚ್ ಮಾಡಲು ಕಂಪನಿ ಯೋಜನೆ ಹೊಂದಿದೆ.

Tata To Launch Facelifted Nano Soon

ಇನ್ನು ಈ ಹಿಂದೆಯೇ ಘೋಷಿಸಿರುವಂತೆಯೇ ವರ್ಷಾಂತ್ಯದಲ್ಲಿ ಅಥವಾ 2014ರಲ್ಲಿ ಟಾಟಾ ನ್ಯಾನೋ ಸಿಎನ್‌ಜಿ ಹಾಗೂ ಡೀಸೆಲ್ ಎಂಜಿನ್ ಆಗಮನವಾಗಲಿದೆ. ಟಾಟಾ ನ್ಯಾನೋ ಡೀಸೆಲ್ ಕಾರಿನಲ್ಲಿ 800 ಸಿಸಿ ಶಕ್ತಿಶಾಲಿ ಎಂಜಿನ್ ಹೊಂದಿರಲಿದೆ.

Tata To Launch Facelifted Nano Soon

ಹೊಸ ನ್ಯಾನೋ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇದು ಕಾರಿಗೆ ಆಕರ್ಷಕ ಲುಕ್ ಪ್ರದಾನ ಮಾಡಲಿದೆ.

Tata To Launch Facelifted Nano Soon

ಕಳೆದ ವರ್ಷಕ್ಕೆ ಹೋಲಿಸಿದಾಗ ಟಾಟಾ ನ್ಯಾನೋ ಮಾರಾಟವು ಐದು ಪಟ್ಟುಗಳಷ್ಟು ಕುಸಿದಿದೆ. ಕಳೆದ ವರ್ಷ 7723 ಯುನಿಟ್ ಸೇಲ್ ಆಗಿದ್ದರೆ ಈ ಬಾರಿಯದು 1,504 ಯುನಿಟ್‌ಗಳು ಮಾತ್ರವಾಗಿದೆ.

Tata To Launch Facelifted Nano Soon

ಜನರ ಕಾರು ಎಂದೇ ಪರಿಗಣಿಸಲ್ಪಟ್ಟಿರುವ ಟಾಟಾ ನ್ಯಾನೋದ ರಿಫ್ರೆಶ್ ವರ್ಷನ್ ಹೇಗೆ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Monday, March 18, 2013, 10:03 [IST]
English summary
Tata Motors is all set to launch new facelifted Nano in Indian market. New Nano will be seen with a number of updates both exterior and interior.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+