ಟಾಟಾ ನ್ಯಾನೋ ಟ್ವಿಸ್ಟ್ ಪವರ್ ಸ್ಟೀರಿಂಗ್ ಕಾರು ಭರ್ಜರಿ ಲಾಂಚ್

Written By:

ದೇಶದ ಗ್ರಾಹಕರು ಕಾತರದಿಂದ ಕಾದು ಕುಳಿತಿದ್ದ ಟಾಟಾ ನ್ಯಾನೋ ಪವರ್ ಸ್ಟೀರಿಂಗ್ ಕಾರು ಕೊನೆಗೂ ಭಾರತದಲ್ಲಿ ಲಾಂಚ್ ಕಂಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 2.36 ಲಕ್ಷ ರು.ಗಳಾಗಿವೆ. ಹೊಸ ನ್ಯಾನೋ ಟ್ವಿಸ್ಟ್ ಎಕ್ಸ್‌ಟಿ ವೆರಿಯಂಟ್ ಬುಕ್ಕಿಂಗ್ ಪ್ರಕ್ರಿಯೆ ಇಂದಿನಿಂದಲೇ ಆರಂಭಗೊಂಡಿದೆ.

ನ್ಯಾನೋ 'ಅತ್ಯಂತ ವಿಶ್ವಾಸಾರ್ಹ ಬ್ರಾಂಡ್'; ನಂಬ್ತೀರಾ?

ನೂತನ ನ್ಯಾನೋ ಟ್ವಿಸ್ಟ್ ಏಕಮಾತ್ರ ಎಕ್ಸ್‌ಟಿ ವೆರಿಯಂಟ್‌ನಲ್ಲಿ ಮಾತ್ರ ಲಭ್ಯವಿರಲಿದೆ. ಇದು ಸಾಮಾನ್ಯ ನ್ಯಾನೋ ಟಾಪ್ ಎಂಡ್ ಆವೃತ್ತಿಗಿಂತಲೂ 14 ಸಾವಿರ ರು.ಗಳಷ್ಟು ದುಬಾರಿಯಾಗಿದೆ. ಅಷ್ಟಕ್ಕೂ ಹೊಸ ನ್ಯಾನೋ ಟ್ವಿಸ್ಟ್ ಎಕ್ಸ್‌ಟಿ ಪವರ್ ಸ್ಟೀರಿಂಗ್ ಸಂಪೂರ್ಣ ಬಾಡಿ ಸ್ಕ್ಯಾನ್‌ಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಪವರ್ ಸ್ಟೀರಿಂಗ್
  

ಪವರ್ ಸ್ಟೀರಿಂಗ್

ಯುರೋಪ್‌ನ ಹೆಸರಾಂತ ಝಡ್‌ಎಫ್ ಸಂಸ್ಥೆ ಅಭಿವೃದ್ಧಿಪಡಿಸಲಾಗಿರುವ ಬ್ರಶ್‌ಲೆಸ್ ಮೋಟಾರು ಪವರ್ ಸ್ಟೀರಿಂಗ್ ನೂತನ ನ್ಯಾನೋದಲ್ಲಿ ಬಳಸಲಾಗಿದೆ. ಇದರ ಜತೆಗೆ ಡ್ಯಾಶ್‌ಬೋರ್ಡ್ ಕೆಳಗಡೆ ಇಸಿಯು ಕೂಡಾ ಲಗತ್ತಿಸಲಾಗಿದೆ.

ಆಕ್ಟಿವ್ ರಿಟರ್ಸ್
  

ಆಕ್ಟಿವ್ ರಿಟರ್ಸ್

ಇದರ ಜತೆಗೆ 'ಆಕ್ಟಿವ್ ರಿಟರ್ನ್' ಎಂಬ ಇನ್ನೊಂದು ಮಹತ್ತರ ವೈಶಿಷ್ಟ್ಯವನ್ನು ಟಾಟಾ ಮೋಟಾರ್ಸ್ ಮುಂದಿಡುತ್ತಿದ್ದು, ಇದರಂತೆ ತಿರುವಿನ ಬಳಿಕ ಸ್ಟೀರಿಂಗ್ ಸ್ವಯಂಚಾಲಿತವಾಗಿ ನೈಜ ಸ್ಥಿತಿಗೆ ಬರಲಿದೆ.

ಟರ್ನಿಂಗ್ ರೇಡಿಯಸ್
  

ಟರ್ನಿಂಗ್ ರೇಡಿಯಸ್

ಈ ನೂತನ ಫೀಚರ್ ಆಳವಡಿಕೆಯೊಂದಿಗೆ ಸಮತೋಲನ ಕಾಪಾಡಿಕೊಳ್ಳಲು ನೆರವಾಗಲಿದ್ದು, ಅತಿ ವೇಗದಲ್ಲೂ ಚಾಲಕ ವಿಶ್ವಾಸಾರ್ಹದಿಂದ ಗಾಡಿ ಚಲಾಯಿಸಬಹುದಾಗಿದೆ. ಹಾಗಿದ್ದರೂ ಪವರ್ ಸ್ಟೀರಿಂಗ್ ರಹಿತ ವೆರಿಯಂಟ್‌ನಲ್ಲಿರುವಂತೆಯೇ ನಾಲ್ಕು ಮೀಟರ್ ಟರ್ನಿಂಗ್ ರೇಡಿಯಸ್ ಇದರಲ್ಲಿ ಉಳಿಸಿಕೊಳ್ಳಲಾಗಿದೆ.

ಡ್ಯಾಮ್‌ಸನ್ ಪರ್ಪಲ್ ಕಲರ್
  

ಡ್ಯಾಮ್‌ಸನ್ ಪರ್ಪಲ್ ಕಲರ್

ಇನ್ನುಳಿದಂತೆ ಕಾರಿನ ಹೊರಮೈಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇಲ್ಲಿ ಕಂಡುಬಂದಿರುವ ಏಕೈಕ ಬದಲಾವಣೆಯೆಂದರೆ ನೂತನ ಡ್ಯಾಮ್‌ಸನ್ (Damson) ನೇರಳೆ ಬಣ್ಣವಾಗಿದೆ. ಇದು ಕಾರಿಗೆ ತಾಜಾತನ ನೀಡುತ್ತದೆ.

ಫೀಚರ್ಸ್
  

ಫೀಚರ್ಸ್

ಹಾಗೆಯೇ ಕಾರಿನೊಳಗಡೆ ಪರಿಷ್ಕೃತ ಇನ್ಸ್ಟುಮೆಂಟ್ ಕ್ಲಸ್ಟರ್ ಜತೆ ಚಾಲಕ ಮಾಹಿತಿ ಸಿಸ್ಟಂ, ಡಿಜಿಟಲ್ ಕ್ಲಾಕ್, ಸರಾಸರಿ ಇಂಧನ ಎಕಾನಮಿ ಇಂಡಿಕೇಟರ್ ಸೇವೆಯನ್ನು ಕಂಪನಿ ಒದಗಿಸುತ್ತಿದೆ. ಇದರ ಜತೆಗೆ ಡಿಸ್ಟಾನ್ಸ್ ಟು ಎಮ್ಟಿ ಫೀಚರ್ಸ್ ಕೂಡಾ ಸೌಲಭ್ಯವಿದೆ.

ಎಂಜಿನ್
  

ಎಂಜಿನ್

ಏತನ್ಮಧ್ಯೆ ಎಂಜಿನ್ ಮಾನದಂಡಗಳಲ್ಲಿ ಯಾವುದೇ ವ್ಯತ್ಯಾಸ ತರಲಾಗಿಲ್ಲ. ಇದು 624ಸಿಸಿ 2 ಸಿಲಿಂಡರ್ ಪೆಟ್ರೋಲ್ ಮೋಟಾರಿನಿಂದ ನಿಯಂತ್ರಿಸಲ್ಪಡುತ್ತಿದ್ದು, 38 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಂತೆಯೇ ನಾಲ್ಕು ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ ಹೊಂದಿರಲಿದೆ.

ಮೈಲೇಜ್
  

ಮೈಲೇಜ್

ಇನ್ನು ಕಂಪನಿಯ ಪ್ರಕಾಯ ನೂತನ ನ್ಯಾನೋ ಕಾರು ಪ್ರತಿ ಲೀಟರ್‌ಗೆ 25 ಕೀ.ಮೀ. ವರೆಗೆ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಬಣ್ಣಗಳು
  

ಬಣ್ಣಗಳು

 • ಡ್ಯಾಮ್‌ಸನ್ ಪರ್ಪಲ್ (ಹೊಸದು)
 • ಡ್ಯಾಜ್ಲ್ ಬ್ಲೂ (ಹೊಸದು)
 • ಪಪ್ಪಯಾ ಓರೆಂಜ್
 • ಪಿಯರ್ಲ್ ವೈಟ್
 • ಮೆಟಿಯೊರ್ ಸಿಲ್ವರ್
 • ರಾಯಲ್ ಗೋಲ್ಡ್ (ಹೊಸದು)
ಹೊರಮೈ
  

ಹೊರಮೈ

 • ಬಾಡಿ ಕಲರ್ ಬಂಪರ್,
 • ಬಾಡಿ ಕಲರ್ ಡೋರ್ ಹ್ಯಾಂಡಲ್,
 • ಮುಂಭಾಗ ಹಾಗೂ ಹಿಂದುಗಡೆ ಕ್ರೋಮ್ ಸ್ಟ್ರಿಪ್,
 • ಔಟ್‌ಸೈಡ್ ರಿಯರ್ ವ್ಯೂ ಮಿರರ್,
 • ಫ್ರಂಟ್ ಫಾಗ್ ಲ್ಯಾಂಪ್,
 • ವೀಲ್ ಕವರ್,
 • ಏರೋಕಿಟ್,
 • ಟಿಂಟಡ್ ಗ್ಲಾಸಸ್,
 • ಫ್ರಂಟ್ ವೈಪರ್, ವಾಶರ್,
 • ಫ್ರಂಟ್ ವಿಂಡ್‌ಶೀಲ್ಡ್,
 • ರೂಫ್ ಬೀಡಿಂಗ್ ,
 • ರೂಫ್ ಸ್ಪಾಯ್ಲರ್,
 • ರೂಫ್ ಮೌಂಟೆಡ್ ಆಂಟೆನಾ,
 • ಕ್ಲಿಯರ್ ಲೆನ್ಸ್ ಹೆಡ್‌ಲ್ಯಾಂಪ್ ಆಂಡ್ ಟೈಲ್ ಲ್ಯಾಂಪ್.
ಇಂಟಿರಿಯರ್
  

ಇಂಟಿರಿಯರ್

 • ಸೀಟ್ ಅಪ್‌ಹೋಲ್‌ಸ್ಟ್ರೆ
 • ಡೋರ್ ಟ್ರಿಮ್,
 • ಡ್ಯಾಶ್‌ಬೋರ್ಡ್,
 • ಸೆಂಟರ್ ಫಾಸಿಯಾ,
 • ಡ್ಯುಯಲ್ ಗ್ಲೋವ್ ಬಾಕ್ಸ್,
 • ಆಂಪಿಸ್ಟ್ರೀಮ್‌ಟಿಎಂ ಮ್ಯೂಸಿಕ್ ಸಿಸ್ಟಂ,
 • ಸಿಡಿ, ಎಂಪಿ3, ಒಕ್ಸ್, ಯುಎಸ್‌ಬಿ, ಬ್ಲೂಟೂತ್,
 • ಫ್ರಂಟ್ ಮತ್ತು ರಿಯರ್ ಸ್ಪೀಕರ್ಸ್,
 • ಬೆಜೆಲ್ ಸ್ಪೀಕರ್ಸ್,
 • ಪ್ರೀಮಿಯಂ ಸೀಟ್ಸ್,
 • ರಿಯರ್ ಪಾರ್ಸೆಲ್ ಶೆಲ್ಫ್ ಜತೆ ಇಂಟೆಗ್ರೇಟಡ್ ಸ್ಪೀಕರ್ಸ್,
 • ಎ, ಬಿ, ಸಿ ಪಿಲ್ಲರ್ ಟ್ರಿಮ್ಸ್,
 • ಎಲೆಕ್ಟ್ರಾನಿಕ್ ಟ್ರಿಪ್ ಮೀಟರ್ ,
 • ಫ್ಯೂಯಲ್ ಗೇಜ್,
 • ಸ್ಟೀರಿಂಗ್ ವೀಲ್,
 • ಸೌಕರ್ಯ ಹಾಗೂ ಅನುಕೂಲತೆ,
 • ಎಲೆಕ್ಟ್ರಿಕ್ ಪವರ್ ಆಸಿಸ್ಟಡ್ ಸ್ಟೀರಿಂಗ್,
 • ಡಿಸ್ಟಾನ್ಸ್ ಟು ಎಮ್ಟಿ ಡಿಸ್‌ಪ್ಲೇ,
 • ಸರಾಸರಿ ಫ್ಯೂಯಲ್ ಎಕಾನಮಿ ಡಿಸ್‌ಪ್ಲೇ,
ಇಂಟಿರಿಯರ್
  

ಇಂಟಿರಿಯರ್

 • ಡಿಜಿಟಲ್ ಕ್ಲಾಕ್ (ಎಲ್‌ಇಡಿ ಡಿಸ್‌ಪ್ಲೇ),
 • ರಿಮೋಟ್ ಕೀಲೆಸ್ ಎಂಟ್ರಿ ,
 • ಎಸಿ, ಹೀಟರ್,
 • ಫ್ರಂಟ್ ಪವರ್ ವಿಂಡೋಸ್,
 • 12 ವಿ ಪವರ್ ಸಾಕೆಟ್,
 • ಕಪ್ ಹೋಲ್ಡರ್ ಇನ್ ಫ್ರಂಟ್ ಕನ್ಸೋಲ್ ,
 • ಕ್ಯಾಬಿನ್ ಲ್ಯಾಂಪ್ ,
 • ಎಲ್ಲ ಡೋರ್‌ಗಳಲ್ಲೂ ಮ್ಯಾಗಜಿನ್ ಆಂಡ್ ಕಾಯಿನ್ ಹೋಲ್ಡರ್,
 • ಮ್ಯಾಪ್ ಪಾಕೆಟ್ ಇಂಟೆಗ್ರಲ್ ಜತೆಗೆ ಡ್ರೈವರ್, ಸಹ ಚಾಲಕ ಸೀಟ್,
 • ಫ್ರಂಟ್ ಸೀಟ್ ಹೆಡ್ ರೆಸ್ಟ್ ,
 • ರಿಯರ್ ಸೀಟ್ ಇಂಟೆಗ್ರಲ್ ಹೆಡ್ ರೆಸ್ಟ್,
 • ಡ್ರೈವರ್ ಮತ್ತು ಪ್ಯಾಸೆಂಜರ್ ಬದಿಯಲ್ಲಿ ಸನ್‌ವೈಸರ್
 • ಇಂಟೆಗ್ರೇಟಡ್ ವ್ಯಾನಿಟಿ ಮಿರರ್ ಜತೆ ಸಹ ಚಾಲಕ ಸನ್‌ವೈಸರ್,
 • ಡ್ರೈವರ್ ಸೀಟ್ ಜತೆ ಸ್ಲೈಡರ್,
 • ಪ್ಯಾಸೆಂಜರ್ ಸೈಡ್ ಸೀಟ್ ಜತೆ ಸ್ಲೈಡರ್,
 • ಫ್ರಂಟ್ ಆಸಿಸ್ಟ್ ಗ್ರಿಪ್ಸ್ ,
 • ರಿಯರ್ ಆಸಿಸ್ಟ್ ಗ್ರಿಪ್ಸ್,
 • ಲೊ ಫ್ಯೂಯಲ್ ವಾರ್ನಿಂಗ್ ಲ್ಯಾಂಪ್,
 • ರಿಯರ್ ಸೀಟ್ ಫೋಲ್ಡಿಂಗ್.
ಸುರಕ್ಷತೆ
  

ಸುರಕ್ಷತೆ

 • ಸೆಂಟ್ರಲ್ ಲಾಕಿಂಗ್,
 • ರಾಡಿಯಲ್ ಟ್ಯೂಬ್‌ಲೆಸ್ ಟೈರ್,
 • ಸೆಂಟರ್ ಹೈ ಮೌಂಟ್ ಸ್ಟಾಪ್ ಲ್ಯಾಂಪ್,
 • ಬೂಸ್ಟರ್ ಆಸಿಸ್ಟಡ್ ಬ್ರೇಕ್,
 • ಫ್ರಂಟ್ ಆಂಡ್ ರಿಯರ್ ಸೀಟ್ ಬೆಲ್ಟ್,
 • ಹೆಚ್ಚುವರಿ ಬಾಡಿ ರೈನ್‌ಫೋರ್ಸ್‌ಮೆಂಟ್,
 • ಇನ್ಟ್ರುಷನ್ ಬೀಮ್.
ಡೈಮಷನ್
  

ಡೈಮಷನ್

 • ಒಟ್ಟು ಉದ್ದ: 3099 ಎಂಎಂ,
 • ಒಟ್ಟು ಅಗಲ: 1495 ಎಂಎಂ (ಒಆರ್‌ವಿಎಂ ಹೊರತುಪಡಿಸಿ),
 • ಒಟ್ಟು ಎತ್ತರ: 1652 ಎಂಎಂ,
 • ವೀಲ್‌ಬೇಸ್: 2230 ಎಂಎಂ,
 • ಗ್ರೌಂಡ್ ಕ್ಲಿಯರನ್ಸ್: 180 ಎಂಎಂ,
 • ಮಿನಿಮಮ್ ಟರ್ನಿಂಗ್ ಸರ್ಕಲ್ ರೇಡಿಯಸ್: 4 ಎಂ,
 • ಸಿಟ್ಟಿಂಗ್ ಸಾಮರ್ಥ್ಯ: 4 ಜನರಿಗೆ,
 • ಇಂಧನ ಟ್ಯಾಂಕ್ ಸಾಮರ್ಥ್ಯ: 15 ಲೀಟರ್,
 • ಕರ್ಬ್ ಭಾರ: 660 ಕೆ.ಜಿ,
 • ಬೂಟ್ ಸ್ಪೇಸ್: ಹಿಂದುಗಡೆ ಸೀಟು ಮಡಚಿದಾಗ 500 ಲೀಟರ್. ಇದರ ಹೊರತಾಗಿ 80 ಲೀಟರ್,
ಎಂಜಿನ್ ಆಂಡ್ ಟ್ರಾನ್ಸ್‌ಮಿಷನ್
  

ಎಂಜಿನ್ ಆಂಡ್ ಟ್ರಾನ್ಸ್‌ಮಿಷನ್

 • ಎಂಜಿನ್ ವಿಧ: 624 ಸಿಸಿ, 2 ಸಿಲಿಂಡರ್, ಎಂಪಿಎಫ್‌ಐ,
 • ಮ್ಯಾಕ್ಸಿಮಮ್ ಪವರ್: 38 ಪಿಎಸ್ @ 5500 +/- 250 ಆರ್‌ಪಿಎಂ,
 • ಮ್ಯಾಕ್ಸಿಮಮ್ ಟಾರ್ಕ್: 51 ಎನ್‌ಎಂ @ 4000 +/- 500 ಆರ್‌ಪಿಎಂ,
 • ಗರಿಷ್ಠ ವೇಗತೆ: 105 kmph,
 • ಗೇರ್ ವಿಧ: ನಾಲ್ಕು ಮುಂದಕ್ಕೆ, 1 ರಿವರ್ಸ್,
 • ಸ್ಟೀರಿಂಗ್ ವಿಧ: ಎಲೆಕ್ಟ್ರಿಕ್ ಪವರ್ ಅಸಿಸ್ಟಡ್ (ಬ್ರಷ್‌ಲೆಷ್ ಟೈಪ್)

English summary
Tata Nano with the long awaited feature of power steering is finally here. Tata Nano Twist, as it is called, is priced at INR 2.36 lakhs (Ex-showroom, Delhi) and comes only in the top end XT variant.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark