ನಿರೀಕ್ಷಿಸಿ ಟಾಟಾ ಮಾಂಝಾ ಹೈಬ್ರಿಡ್ ವರ್ಷನ್
ಭಾರತ ವಾಹನೋದ್ಯಮದ ದೈತ್ಯ ಸಂಸ್ಥೆ ಟಾಟಾ ಮೋಟಾರ್ಸ್ ಮುಂದಿನ ಕೆಲವೇ ತಿಂಗಳುಗಳಲ್ಲಿ ಅಚ್ಚರಿಯ ಉಡುಗೊರೆಯೊಂದನ್ನು ದೇಶದ ಗ್ರಾಹಕರಿಗಾಗಿ ನೀಡಲಿದೆ. ಅದೇನಂತೀರಾ..?
ಹೌದು, ಈ ಹಿಂದೆ ಸಾಗಿದ ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಮಾಂಝಾ ಹೈಬ್ರಿಡ್ ತಳಿಯನ್ನು ದೇಶಕ್ಕೆ ಪರಿಚಯಿಸಲು ಟಾಟಾ ತಯಾರಿ ನಡೆಸುತ್ತಿದೆ. ಹೆಚ್ಚಿನ ಮಾಹಿತಿಗಳಿಗಾಗಿ ಫೋಟೊ ಸ್ಲೈಡರ್‌ಗೆ ಭೇಟಿ ಕೊಡಿರಿ...

ದೇಶದಲ್ಲಿ ಹೈಬ್ರಿಡ್ ಮಾದರಿಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚುತ್ತಿರುವ ಸಾಧ್ಯತೆಯನ್ನು ಮನಗಂಡಿರುವ ಟಾಟಾ ಮಾಂಝಾ ಹೈಬ್ರಿಡ್ ಸೆಡಾನ್ ಕಾರನ್ನು ನಿಕಟ ಭವಿಷ್ಯದಲ್ಲೇ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಈ ಮೂಲಕ ಟಾಟಾ, ದೇಶೀಯ ಮಾರುಕಟ್ಟೆಯಲ್ಲಿ ಹೈಬ್ರಿಡ್ ವರ್ಷನ್ ಮಾರಾಟ ಮಾಡುವ ದೇಶದ ಮೊತ್ತ ಮೊದಲ ವಾಹನ ತಯಾರಕ ಸಂಸ್ಥೆ ಎಂದೆನಿಸಿಕೊಳ್ಳಲಿದೆ.

ವರದಿಗಳ ಪ್ರಕಾರ ಟಾಟಾ ಮಾಂಝಾ ಹೈಬ್ರಿಡ್ ಸೆಡಾನ್ ಕಾರು, 1.05 ಲೀಟರ್ ಡೈರಕ್ಟ್ ಕಾಮನ್ ರೈಲ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದರಲ್ಲಿ 45 ಕೆಡಬ್ಲ್ಯು ಎಲೆಕ್ಟ್ರಿಕ್ ಟ್ರಾಕ್ಷನ್ ಮೋಟಾರು ಸಹ ಇರಲಿದೆ. ಈ ಮೂಲಕ ಹೈಬ್ರಿಡ್ ಪದವನ್ನು ಅರ್ಥಪೂರ್ಣವಾಗಿಸಲಿದೆ.

ಟಾಟಾ ಮಾಂಝಾ ಹೈಬ್ರಿಡ್ ವರ್ಷನ್, ಸಿವಿಟಿ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ. ಹಾಗೆಯೇ ಸಂಪೂರ್ಣ ಚಾರ್ಜ್ ಹಾಗೂ ಭರ್ತಿ ಇಂಧನ ಟ್ಯಾಂಕ್‌ನಲ್ಲಿ 1000 ಕೀ.ಮೀ. ರೇಂಜ್ ವರೆಗೂ ಚಲಿಸುವ ನಿರೀಕ್ಷೆಯಿದೆ. ಈ ಸಂಬಂಧ ಸಂಪೂರ್ಣ ಮಾಹಿತಿ ಇನ್ನು ಕೆಲವೇ ದಿನಗಳಲ್ಲಿ ಲಭಿಸುವ ಸಾಧ್ಯತೆಯಿದೆ.

ಹಾಗಿದ್ದರೂ ಟಾಟಾ ಮಾಂಝಾ ಹೈಬ್ರಿಡ್ ತಳಿ ಸಾಮಾನ್ಯ ಆವೃತ್ತಿಗಿಂತಲೂ ದುಬಾರಿಯೆನಿಸಲಿದೆ. ಪ್ರಸ್ತತ 5.86 ಹಾಗೂ 8.08 ಲಕ್ಷ ರು.ಗಳೆಡೆ ಮಾಂಝಾ ಸೆಡಾನ್ ಕಾರನ್ನು ಮಾರಾಟವಾಗುತ್ತಿದೆ.

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಟಾಟಾ ಮಾಂಝಾ ಹೈಬ್ರಿಡ್ ಕಾರು ಹೆಚ್ಚು ಪರಿಸ್ನೇಹಿ ಆಗಿರಲಿದೆ ಎಂಬುದು ಸಕರಾತ್ಮಕ ಅಂಶವಾಗಿದೆ.

ಇನ್ನು ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ ಹೈಬ್ರಿಡ್ ಮಾದರಿಯಲ್ಲೂ ಟಾಟಾ ಮಾಂಝಾ ಸಮಾನ ವಿನ್ಯಾಸ ಕಾಪಾಡಿಕೊಳ್ಳುವ ಸಾಧ್ಯತೆಯಿದೆ. ಅಂತಿಮವಾಗಿ ಪ್ರಸಕ್ತ ಸಾಲಿನಲ್ಲೇ ಟಾಟಾ ಮಾಂಝಾ ಹೈಬ್ರಿಡ್ ಬಿಡುಗಡೆಯಾಗುವ ನಿರೀಕ್ಷೆಯಿದೆ.


Click it and Unblock the Notifications








