ಗುಣಮಟ್ಟ ಹೆಚ್ಚಿಸಲು ಟಾಟಾ ಮೋಟಾರ್ಸ್ ತಯಾರಿ

By Nagaraja

ಈ ಹಿಂದೆಯೂ ಹಲವು ಬಾರಿ ಟಾಟಾ ಮೋಟಾರ್ಸ್ ಕಾರು ಬ್ರಾಂಡ್ ಬಗ್ಗೆ ಸಂದೇಹಗಳು ಎದ್ದಿದ್ದವು. ಪ್ರತಿಯೊಬ್ಬ ಕಾರು ಖರೀದಿ ಗ್ರಾಹಕರು ಸಹ ಟಾಟಾ ಕಾರುಗಳನ್ನು ಖರೀದಿಸುವಾಗ ಮುಂದಾಲೋಚನೆ ಮಾಡುತ್ತಾರೆ.

ಯಾಕೆಂದರೆ ಟಾಟಾ ಕಾರು ಬ್ರಾಂಡ್‌ಗಳಲ್ಲಿ ಗುಣಮಟ್ಟದ ಅಭಾವವಿದೆ ಎಂಬುದು ಹೆಚ್ಚಿನ ಟೀಕೆಗೆ ಗುರಿಯಾಗುತ್ತಿತ್ತು. ಇವೆಲ್ಲದರಿಂದ ಎಚ್ಚೆತ್ತುಕೊಂಡಿರುವ ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್, ಉತ್ಪಾದನೆಯ ಗುಣಮಟ್ಟ ಹೆಚ್ಚಿಸಲು ನೂತನ ಯೋಜನೆಗಳನ್ನು ಅನುಸರಿಸಲಿದೆ. ಇದು ದೇಶದ ಕಾರು ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನುಂಟು ಮಾಡಲಿದೆ.

ದೇಶದಲ್ಲಿ ಅತಿ ಅಗ್ಗದ ನ್ಯಾನೋದಿಂದ ಆರಂಭಿಸಿ ಟಾಟಾ ಇಂಡಿಕಾ, ವಿಸ್ಟಾ, ಆರಿಯಾ, ಮಾಂಝಾ ಹಾಗೂ ಸಫಾರಿ ಸ್ಟ್ರೋಮ್‌ಗಳಂತಹ ಜನಪ್ರಿಯ ಆವೃತ್ತಿಗಳನ್ನು ಟಾಟಾ ಮೋಟಾರ್ಸ್ ಮಾರುಕಟ್ಟೆಗೆ ಪರಿಚಯಿಸಿದೆ.

ಈ ಬಗ್ಗೆ ಮಾತನಾಡಿರುವ ಟಾಟಾ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಕಾರ್ಲ್ ಸ್ಲಿಮ್, ಭವಿಷ್ಯದಲ್ಲಿ ನಿಕಟ ಪ್ರತಿಸ್ಪರ್ಧಿಗಳನ್ನು ಎದುರಿಸಲು ಕಾರಿನ ಗುಣಮಟ್ಟ ಹೆಚ್ಚಿಸುವಲ್ಲಿ ಗಮನ ಕೇಂದ್ರಿಕರಿಸಲಾಗುವುದು ಎಂದಿದ್ದಾರೆ.

ಟಾಟಾ ಬ್ರಾಂಡ್

ಟಾಟಾ ಬ್ರಾಂಡ್

ಎಷ್ಟು ಪ್ರಮಾಣದಲ್ಲಿ ಕಾರು ಉತ್ಪಾದಿಸಲಾಗುತ್ತದೆ ಎಂಬುದು ಮುಖ್ಯವಲ್ಲ. ಬದಲಾಗಿ ಕಾರಿನ ಗುಣಮಟ್ಟಕ್ಕೆ ಗ್ರಾಹಕರು ಮೊದಲ ಆದ್ಯತೆಯನ್ನು ಕೊಡುತ್ತಿದ್ದಾರೆ ಎಂಬುದನ್ನು ಟಾಟಾ ಮನಗಂಡಿದೆ.

ಗುಣಮಟ್ಟ ಹೆಚ್ಚಿಸಲು ಟಾಟಾ ಮೋಟಾರ್ಸ್ ತಯಾರಿ

ಖಂಡಿತವಾಗಿಯೂ ಕಳಪೆ ಗುಣಮಟ್ಟ ಹಾಗೂ ಸದ್ಯ ಮಾರುಕಟ್ಟೆಯಲ್ಲಿರುವ ಮಾಡೆಲ್‌ಗಳ ಅಭಿವೃದ್ಧಿಯ ಕೊರತೆಯು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಮಾರಾಟ ಅಂಕಿಅಂಶವನ್ನು ಬಾಧಿಸುತ್ತಿದೆ. ಗುಣಮಟ್ಟದ ಕೊರತೆಯೇ ಟಾಟಾ ವೈಫಲ್ಯಕ್ಕೆ ಹೇತುವಾಗಿತ್ತು. .

ಗುಣಮಟ್ಟ ಹೆಚ್ಚಿಸಲು ಟಾಟಾ ಮೋಟಾರ್ಸ್ ತಯಾರಿ

ಇತ್ತೀಚೆಗಷ್ಟೇ ನಾವು ವರದಿ ಮಾಡಿರುವಂತೆಯೇ ನೂತನ 'ಸುಧಾರಿತ ಮಾಡ್ಯುಲರ್ ಫ್ಲ್ಯಾಟ್ ಫಾರ್ಮ್' ಟಾಟಾ ಮೋಟಾರ್ಸ್ ಜೀವ ನೀಡಲಿದೆ. ಹಾಗೆಯೇ ಟಾಟಾದ ಭವಿಷ್ಯದ ವಾಹನಗಳು ನೂತನ ಫ್ಲ್ಯಾಟ್ ಫಾರ್ಮ್‌ನಲ್ಲೇ ಆಗಮನವಾಗಲಿದೆ.

ಗುಣಮಟ್ಟ ಹೆಚ್ಚಿಸಲು ಟಾಟಾ ಮೋಟಾರ್ಸ್ ತಯಾರಿ

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಈ ನೂತನ ತಂತ್ರಜ್ಞಾನ ಮೂಖಾಂತರ 2015ರ ಬಳಿಕ ಟಾಟಾ ಮೋಟಾರ್ಸ್ ಎಂಟು ನೂತನ ಕಾರುಗಳನ್ನು ಬಿಡುಗಡೆ ಮಾಡಲಿದೆ. ಅಲ್ಲಿಯ ವರೆಗೆ ಸದ್ಯ ಮಾರುಕಟ್ಟೆಯಲ್ಲಿರುವ ಕಾರುಗಳ ಪರಿಷ್ಕೃತ ಆವೃತ್ತಿಗಳು ಮುಂದುವರಿಯಲಿದೆ.

ಗುಣಮಟ್ಟ ಹೆಚ್ಚಿಸಲು ಟಾಟಾ ಮೋಟಾರ್ಸ್ ತಯಾರಿ

ಒಟ್ಟಾರೆಯಾಗಿ ಬಹುರಾಷ್ಟ್ರೀಯ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕ್ರಾಂತಿಕಾರಿ ಯೋಜನೆಗಳೊಂದಿಗೆ ಮುಂದೆ ಬರುವುದನ್ನು ನೋಡಬಹುದಾಗಿದೆ.

More from DriveSpark

Article Published On: Tuesday, September 10, 2013, 9:53 [IST]
English summary
Tata Motors is clearly trying to step up it's game to keep up with rivals, become profitable and to create an image that matches that of any international players. It's not just the Nano that is receiving an image makeover, but all of Tata Motors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+