ವ್ಹಾವ್...ಟಾಟಾದಿಂದಲೂ ಬರುತ್ತೆ ಕಾಂಪಾಕ್ಟ್ ಎಸ್‌ಯುವಿ!
ಪ್ರಸ್ತುತ ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಸುಗ್ಗಿಯ ಕಾಲ. ಈ ವಿಭಾಗದಲ್ಲಿ ಲಾಂಚ್ ಆಗಿರುವ ಮಹೀಂದ್ರ ಸ್ಕಾರ್ಪಿಯೊ, ರೆನೊ ಡಸ್ಟರ್, ಫೋರ್ಡ್ ಇಕೊಸ್ಪೋರ್ಟ್ ಕಾರು ಭಾರಿ ಯಶ ಕಂಡಿದ್ದವು. ಇದನ್ನು ಗಮನಿಸಿರುವ ದೇಶದ ಇನ್ನಿತರ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳು ಸಹ ಇತ್ತ ಗಮನ ಕೇಂದ್ರಿಕರಿಸಿವೆ.
ದೇಶದ ಒಂದು ವರ್ಗ ಕಾರು ಖರೀದಿಗಾರರು ನಿಧಾನವಾಗಿ ಸ್ವಲ್ಪ ದುಬಾರಿ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಪೈಕಿ ಎಸ್‌ಯುವಿ ಮಾರುಕಟ್ಟೆಯು ಕ್ಷಿಪ್ರ ಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದೆ. (ಮುಂದೆ ಓದಿ)

ಇದೀಗ ದೇಶದ ಅತಿದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಸಬ್ ಫೋರ್ ಮೀಟರ್ ಕಾಂಪಾಕ್ಟ್ ಎಸ್‌ಯುವಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ.

ಇನ್ಯಾಕೆ ತಡ ಟಾಟಾ ಬಹುನಿರೀಕ್ಷಿತ ಕಾಂಪಾಕ್ಟ್ ಎಸ್‌ಯುವಿ ಕಾರು ಮುಂಬರುವ ದೆಹಲಿ ಆಟೋ ಎಕ್ಸ್ ಪೋದಲ್ಲೇ ಅನಾವರಣಗೊಳ್ಳಲಿದೆ. ನಾಲ್ಕು ಮೀಟರ್ ಉದ್ದ ಪರಿಮಿತಿಯೊಳಗೆ ಆಗಮನವಾಗಲಿರುವುದರಿಂದ ಸಹಜವಾಗಿಯೇ ತೆರಿಗೆ ವಿನಾಯಿತಿ ಪೆಡದುಕೊಳ್ಳಲು ನೆರವಾಗಲಿದೆ.

ಅಷ್ಟಕ್ಕೂ ಟಾಟಾ ನೂತನ ಕಾಂಪಾಕ್ಟ್ ಎಸ್‌ಯುವಿ 'ಜಂಪ್' ಎಂದು ಹೆಸರಿಸಿಕೊಳ್ಳಲಿದೆ. ಇದು ಸಂಸ್ಥೆಯ ಎಕ್ಸ್1 ಫ್ಲ್ಯಾಟ್‌ಫಾರ್ಮ್ ತಲಹದಿಯಲ್ಲಿ ನಿರ್ಮಾಣವಾಗಲಿದೆ. ಇದೇ ಫ್ಯಾಟ್‌ಫಾರ್ಮ್‌ನಲ್ಲಿ ಮುಂಬರುವ ಫಾಲ್ಕನ್ ಹಾಗೂ ವಿಸ್ಟಾ ಕಾರು ನಿರ್ಮಾಣವಾಗಿದೆ.

ಸಬ್ ಫೋರ್ ಮೀಟರ್ ಕಾರಿನ ಹೊರತಾಗಿ ಟಾಟಾದ ನೂತನ ಎಸ್‌ಯುವಿ ಭವಿಷ್ಯದ ವಿನ್ಯಾಸದ ಕಾರುಗಳಲ್ಲಿ ಗುರುತಿಸಿಕೊಳ್ಳಲಿದೆ. ವರದಿಗಳ ಪ್ರಕಾರ ಜಂಪ್ 100 ಅಶ್ವಶಕ್ತಿ ಉತ್ಪಾದಿಸುವ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ರೆವೊಟ್ರಾನ್ ಎಂಜಿನ್‌ಗೆ ಸೇರಿದ್ದಾಗಿದೆ. ಇದರ ಜತೆಗೆ ಡೀಸೆಲ್ ಎಂಜಿನ್ ಕೂಡಾ ಆಗಮನವಾಗಲಿದೆ.

ಟಾಟಾ ಮೋಟಾರ್ಸ್ ಜಂಪ್ ಕಾರು 2015ನೇ ಸಾಲಿನಲ್ಲಿ ದೇಶಕ್ಕೆ ಆಗಮಿಸುವ ಸಾಧ್ಯತೆಗಳಿದೆ. ಇದು ಕೇವಲ ಇಕೊಸ್ಪೋರ್ಟ್ ಹಾಗೂ ಡಸ್ಟರ್‌ಗೆ ಮಾತ್ರ ಪ್ರತಿಸ್ಪರ್ಧಿಯಲ್ಲ. ಬದಲಾಗಿ ಸಬ್ ಫೋರ್ ಮೀಟರ್ ಎಸ್‌ಯುವಿಗಳಾಗಿರುವ ಷೆವರ್ಲೆ, ಮಾರುತಿ, ಹ್ಯುಂಡೈ ಮತ್ತು ಹೋಂಡಾ ಕಾರುಗಳಿಗೂ ಸೆಡ್ಡು ನೀಡಲಿದೆ. (ಸ್ಲೈಡರ್ 2,3,4 ಹಾಗೂ 5ರಲ್ಲಿ ಟಾಟಾ ಸುಮೋ ಸಾಂದರ್ಭಿಕ ಚಿತ್ರಗಳ ಬಳಕೆ)


Click it and Unblock the Notifications








