ಟಾಟಾದಿಂದ ಆಗಮನವಾಗಲಿದೆ ಹಂದಿ ಮೀನಿನಂತಹ ಕಾರು
ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ನೂತನ ಹ್ಯಾಚ್‌ಬ್ಯಾಕ್ ಕಾರು ಅಭಿವೃದ್ಧಿಯಲ್ಲಿ ತೊಡಗಿದ್ದು, ಇದು ಅಗ್ಗದ ನ್ಯಾನೋ ಹಾಗೂ ಇಂಡಿಯಾ ನಡುವೆ ಕಾಣಿಸಿಕೊಳ್ಳಲಿದೆ.
ವಾಹನೋದ್ಯಮ ಮೂಲಗಳ ಪ್ರಕಾರ ಟಾಟಾ ನೂತನ ಹ್ಯಾಚ್‌ಬ್ಯಾಕ್ ಕಾರು ಹಂದಿ ಮೀನು (ಡಾಲ್ಫಿನ್) ಅಥವಾ ಎಕ್ಸ್0 ಎಂದು ಹೆಸರಿಸಿಕೊಳ್ಳಲಿದೆ. ಈಗಾಗಲೇ ನೂತನ ಕಾರು ಫ್ಲಾಟ್‌ಫಾರ್ಮ್ ಆರಂಭಿಸುವುದಾಗಿ ತಿಳಿಸಿರುವ ಟಾಟಾ ಮೋಟಾರ್ಸ್ ಇದರ ಬೆನ್ನಲ್ಲೇ ಹ್ಯಾಚ್‌ಬ್ಯಾಕ್ ಕಾರು ತಯಾರಿಯಲ್ಲಿ ತೊಡಗಿರುವುದು ವಾಹನ ಪ್ರಿಯರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಅಂದ ಹಾಗೆ ನೂತನ ಹ್ಯಾಚ್‌ಬ್ಯಾಕ್ ಕಾರಿನ ವೈಶಿಷ್ಟ್ಯಗಳೇನು ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ.

ವಿಸ್ಟಾ ಫ್ಲಾಟ್‌ಫಾರ್ಮ್
ಟಾಟಾ ಮೋಟಾರ್ಸ್‌ನಿಂದ ಆಗಮನವಾಗಲಿರುವ ನೂತನ ಡಾಲ್ಫಿನ್ ಅಥವಾ ಎಕ್ಸ್0 ಕಾರು ವಿಸ್ಟಾ ಫ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿದೆ.

ಹ್ಯಾಚ್ ಬ್ಯಾಕ್ ಕಾರು
ದೇಶದ ಪ್ರಯಾಣಿಕ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಪರಿಚಯವಾಗಲಿರುವ ಹ್ಯಾಚ್‌ಬ್ಯಾಕ್ ಕಾರು, ನೂತನ ಡಿಸೈನ್ ಫ್ಲಾಟ್‌ಫಾರ್ಮ್‌ನಿಂದ ಸ್ಫೂರ್ತಿ ಪಡೆದು ತಯಾರಿಸಲಾಗುತ್ತಿದೆ.
ಫೋಟೊ ಕೃಪೆ: ಮೋಟಾರ್ ಬೀಮ್
ಸಿಟಿ ರೈಡ್
ಪ್ರಮುಖವಾಗಿಯೂ ನಗರ ಪ್ರದೇಶದ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ನೂತನ ಕಾರು ತಯಾರಿಸಲಾಗುತ್ತಿದೆ. ಇದು ದೊಡ್ಡದಾದ ಆಕಾರವನ್ನು ಪಡೆದುಕೊಳ್ಳಲಿದೆ.
ಫೋಟೊ ಕೃಪೆ: ಮೋಟಾರ್ ಬೀಮ್
ಆಲ್ಟೊ ಪ್ರತಿಸ್ಪರ್ಧಿ
ದೇಶದ ಮಾರುಕಟ್ಟೆಯಲ್ಲಿ ಈಗಾಗಲೇ ಸದ್ದು ಮಾಡುತ್ತಿರುವ ಮಾರುತಿ ಆಲ್ಟೊ 800, ಹ್ಯುಂಡೈ ಇಯಾನ್ ಹಾಗೂ ಡಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ನೂತನ ಕಾರು ಕಾಣಿಸಿಕೊಳ್ಳಲಿದೆ.

ಸನಂದ್ ಫಾಕ್ಟರಿ
ಗುಜರಾತ್‌ನಲ್ಲಿರುವ ಸನಂದ್ ಫಾಕ್ಟರಿಯಲ್ಲಿ ಟಾಟಾದ ಎಕ್ಸ್0 ಕಾನ್ಸೆಪ್ಟ್ ಕಾರು ಉತ್ಪಾದಕಾ ವರ್ಷನ್ ಪಡೆದುಕೊಳ್ಳುವ ನಿರೀಕ್ಷೆಯಿದೆ.
ಫೋಟೊ ಕೃಪೆ: ಮೋಟಾರ್ ಬೀಮ್
ಪೆಟ್ರೋಲ್, ಡೀಸೆಲ್
ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳಲ್ಲಿ ನೂತನ ಕಾರು ಆಗಮನವಾಗಲಿದೆ. ಇದರಲ್ಲಿ 3 ಸಿಲಿಂಡರ್ ಪೆಟ್ರೋಲ್ ಆಳವಡಿಸುವ ಸಾಧ್ಯತೆಯಿದೆ. ಆದರೆ ಡೀಸೆಲ್ ಎಂಜಿನ್ ಮಾನದಂಡಗಳ ಬಗ್ಗೆ ಮಾಹಿತಿ ಬಂದಿಲ್ಲ. ಇವೆಲ್ಲವೂ ಕಳೆಗುಂದಿರುವ ಮಾರುಕಟ್ಟೆಯನ್ನು ಉತ್ತೇಜಿಸಲು ಟಾಟಾಗೆ ನೆರವಾಗಲಿದೆ.

ಅಡ್ವಾನ್ಸ್ ಮ್ಯಾಡುಲರ್ ಫ್ಲಾಟ್‌ಫಾರ್ಮ್
ಹಾಗೆಯೇ ಲಾಂಚ್ ಯಾವಾಗ ಎಂಬುದು ಸಹ ಇನ್ನೂ ಅಸ್ಪಷ್ಟ. ಇದು ಟಾಟಾ ಮೋಟಾರ್ಸ್‌ನ ನೂತನ ಅಡ್ವನ್ಸಾಡ್ ಮ್ಯಾಡುಲರ್ ಫ್ಲಾಟ್‌ಫಾರ್ಮ್‌ನಲ್ಲಿ (ಎಎಂಪಿ) ನಿರ್ಮಾಣವಾಗುವ ಸಾಧ್ಯತೆಗಳಿವೆ. 2015ರಲ್ಲಿ ಟಾಟಾ ಮೋಟಾರ್ಸ್ ನೂತನ ಕಾರುಗಳು ಆಗಮನವಾಗಲಿದ್ದು, ಈ ವೇಳೆಯಲ್ಲಿ ಡಾಲ್ಫಿನ್ ಪರಿಚಯವಾಗುವ ಸಾಧ್ಯತೆ ಹೆಚ್ಚಾಗಿದೆ.
ಫೋಟೊ ಕೃಪೆ: ಟೀಮ್ ಬಿಎಚ್‌ಪಿ

Click it and Unblock the Notifications