ರಸ್ತೆಗಿಳಿಯಲು ಟಾಟಾ ನ್ಯಾನೋ ಸಿಎನ್‌ಜಿ ವರ್ಷನ್ ಸಿದ್ಧ

By Nagaraja

ಇತ್ತೀಚೆಗಷ್ಟೇ ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್, ಟಾಟಾ ನ್ಯಾನೋ ಸಿಎನ್‌ಜಿ ವರ್ಷನ್ 'ಇಮ್ಯಾಕ್ಸ್' ಕಾರನ್ನು ಅನಾವರಣಗೊಳಿಸಿತ್ತು. ಇದರ ಬೆನ್ನಲ್ಲೇ ಪುಣೆ ನಗರದಲ್ಲಿ ಟೆಸ್ಟಿಂಗ್ ವೇಳೆ ಆಟೋ ವೀಕ್ಷಕರ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿವೆ.

ಮುಂದಿನ 70 ದಿನಗಳೊಳಗೆ ಅಂದರೆ ಎರಡು ವರೆ ತಿಂಗಳೊಳಗೆ ನ್ಯಾನೋ ಸಿಎನ್‌ಜಿ ವರ್ಷನ್ ರಸ್ತೆಗಿಳಿಯಲಿದೆ. ಇದೇ ಸಂದರ್ಭದಲ್ಲಿ ಇಂಡಿಗೊ ಇಸಿಎಸ್ ಇಮ್ಯಾಕ್ಸ್ ಹಾಗೂ ಇಂಡಿಕಾ ಇವಿ2 ಇಮ್ಯಾಕ್ಸ್ ಸಿಎನ್‌ಜಿ ವೆರಿಯಂಟ್‌ಗಳು ಸಹ ಪರಿಚಯವಾಗಲಿದೆ.

ಆದರೆ ನ್ಯಾನೋ ಟೆಸ್ಟಿಂಗ್ ವೇಳೆ ಇಮ್ಯಾಕ್ಸ್ ಲೊಗೊ ಲಗತ್ತಿಸದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿಂದೆ ಅನಾವರಣ ಸಂದರ್ಭದಲ್ಲಿ ಇಮ್ಯಾಕ್ಸ್ ಟ್ಯಾಗ್ ಲಗತ್ತಿಸಲಾಗಿತ್ತು.

ಟಾಟಾ ನ್ಯಾನೋ ಸಿಎನ್‌ಜಿ 'ಇಮ್ಯಾಕ್ಸ್'

ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳಿಂದ ಬೆಸತ್ತು ಹೋಗಿರುವ ಗ್ರಾಹಕರಿಗೆ ನ್ಯಾನೋ ಸಿಎನ್‌ಜಿ ವರ್ಷನ್ ಮೂಲಕ ಬದಲಿ ವ್ಯವಸ್ಥೆ ಕಲ್ಪಿಸುವ ಇರಾದೆ ಹೊಂದಿದೆ.

ಟಾಟಾ ನ್ಯಾನೋ ಸಿಎನ್‌ಜಿ 'ಇಮ್ಯಾಕ್ಸ್'

ದೇಶದ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ನಿರಂತರ ಅಂತರಾಳದಲ್ಲಿ ಹೆಚ್ಚಳಗೊಳ್ಳುತ್ತಿದೆ. ಇದು ಇತರ ಮಾಡೆಲ್‌ಗಳನ್ನು ಆಯ್ಕೆ ಮಾಡುವಂತೆ ಗ್ರಾಹಕರನ್ನು ಪ್ರೇರೇಪಿಸುತ್ತಿದೆ.

ಟಾಟಾ ನ್ಯಾನೋ ಸಿಎನ್‌ಜಿ 'ಇಮ್ಯಾಕ್ಸ್'

ಎಆರ್‌ಎಐ ಮಾನ್ಯತೆ ಪ್ರಕಾರ ಟಾಟಾ ನ್ಯಾನೋ ಇಮ್ಯಾಕ್ಸ್ ಸಿಎನ್‌ಜಿ ವರ್ಷನ್ ಪ್ರತಿ ಕೆ.ಜಿ.ಗೆ 36 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಸಿಎನ್‌ಜಿ ಸ್ಟೋರ್ ಮಾಡುವ ನಿಟ್ಟಿಲ್ಲಿ ಇದರಲ್ಲಿ 32 ಲೀಟರ್ ಟ್ಯಾಂಕ್ ಲಗತ್ತಿಸಲಾಗಿದೆ.

ಟಾಟಾ ನ್ಯಾನೋ ಸಿಎನ್‌ಜಿ 'ಇಮ್ಯಾಕ್ಸ್'

ಹಾಗೆಯೇ ಪರಿಸರ ಸ್ನೇಹಿ ವಿಚಾರಕ್ಕೂ ಹೆಚ್ಚು ಗಮನ ಕೊಡಲಾಗಿದ್ದು, ಪ್ರತಿ ಕೀ.ಮೀ.ಗೆ 75 ಗ್ರಾಂ ಕಾರ್ಬನ್ ಡೈಓಕ್ಸೈಡ್ ಹೊಗೆ ಹೊರಸೂಸಲಿದೆ. ಈ ಮೂಲಕ ದೇಶದ ಸ್ವಚ್ಛ ಕಾರುಗಳಲ್ಲಿ ನ್ಯಾನೋ ಕೂಡಾ ಒಂದಾಗಿದೆ ಎಂಬುದನ್ನು ನಿರೂಪಿಸಲಿದೆ.

ಟಾಟಾ ನ್ಯಾನೋ ಸಿಎನ್‌ಜಿ 'ಇಮ್ಯಾಕ್ಸ್'

ಇನ್ನು ದರ ಗಮನಿಸಿದರೆ ನೀವು ಸಿಎನ್‌ಜಿ ಮೋಡ್‌ನಲ್ಲಿ ಡ್ರೈವ್ ಮಾಡಿದರೆ ಪ್ರತಿ ಕಿಲೋಮೀಟರ್‌ಗೆ ಕೇವಲ 1.11 ರು. ಮಾತ್ರ ವೆಚ್ಚ ತಗುಲಲಿದೆ.

ಟಾಟಾ ನ್ಯಾನೋ ಸಿಎನ್‌ಜಿ 'ಇಮ್ಯಾಕ್ಸ್'

ಹಾಗೆಯೇ ಟಾಟಾ ಮೋಟಾರ್ಸ್ ತನ್ನ ನ್ಯಾನೋ ಸಿಎನ್‌ಜಿ ಇಮ್ಯಾಕ್ಸ್ ವರ್ಷನ್‌ಗೆ 4 ವರ್ಷಗಳ ಅಥವಾ 60,000 ಕೀ.ಮೀ. ವರೆಗೂ ವಾರಂಟಿ ಖಾತ್ರಿಪಡಿಸುತ್ತಿದೆ.

More from DriveSpark

Article Published On: Friday, July 12, 2013, 14:08 [IST]
English summary
Tata Motors has announced a CNG variant of the 2013 Nano at the company’s Horizonext 2013, which saw a slew of model updates and refreshes. The 2013 Tata nano emax CNG does not differ from the regular Nano in how it looks. The only visible changes are the ‘emax' badge, a green surround for the speedometer, and an ‘on-off' switch for the CNG fuel supply.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+