ಟಾಟಾ ಪ್ರತಿಷ್ಠೆ ವೃದ್ಧಿಸಿದ ನ್ಯಾನೋ ಸಿಎನ್‌ಜಿ ವರ್ಷನ್
ಕಳೆಗುಂದಿರುವ ಮಾರಾಟಕ್ಕೆ ಉತ್ತೇಜನ ತುಂಬುವ ನಿಟ್ಟಿನಲ್ಲಿ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ತನ್ನ ಜನಪ್ರಿಯ ನ್ಯಾನೋ ಸಿಎನ್‌ಜಿ ವರ್ಷನ್ ಅನಾವರಣಗೊಳಿಸಿದೆ.
ಈ ಮೂಲಕ ಟಾಟಾ ತನ್ನ ಪ್ರತಿಷ್ಠೆಯನ್ನು ಇನ್ನಷ್ಟು ವೃದ್ಧಿಸುವಂತಾಗಿದೆ. ಈಗಾಗಲೇ ಅಧಿಕೃತವಾಗಿ ಅನಾವರಣಗೊಂಡಿರುವ ಟಾಟಾ ನ್ಯಾನೋ ಸಿಎನ್‌ಜಿ ವರ್ಷನ್ 'ಇಮ್ಯಾಕ್' ಸದ್ಯದಲ್ಲೇ ಮಾರುಕಟ್ಟೆ ಪ್ರವೇಶ ಪಡೆಯಲಿದೆ.
ವಿಶ್ವದ ಅತಿ ಅಗ್ಗದ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನ್ಯಾನೋ, ದೇಶದ ಮಧ್ಯಮ ವರ್ಗದ ಕುಟುಂಬ ನೆಚ್ಚಿನ ಕಾರೆನಿಸಿಕೊಂಡಿತ್ತು. ಹಾಗಿದ್ದರೂ ಮಾರುಕಟ್ಟೆಯಲ್ಲಿ ತನ್ನ ಬೇಡಿಕೆ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿತ್ತು.

ಪೆಟ್ರೋಲ್ ಆವೃತ್ತಿಯನ್ನು ಹೋಲಿಸಿದಾಗ ನೂತನ ಸಿಎನ್‌ಜಿ ವರ್ಷನ್ 30,000 ರು.ಗಳಷ್ಟು ದುಬಾರಿಯಾಗಲಿದೆ.

ಟಾಟಾ ನ್ಯಾನೋ ಸಿಎನ್‌ಜಿ ವರ್ಷನ್ ವರ್ಷನ್ 2 ಸಿಲಿಂಡರ್ 624 ಸಿಸಿ ಎಂಜಿನ್ ಪಡೆದುಕೊಳ್ಳಲಿದೆ. ಇದು ಸಿಎನ್‌ಜಿ ಎಂಜಿನ್‌ನಲ್ಲಿ ಚಲಿಸುವಾಗ 33 ಪಿಎಸ್ ಪವರ್ (45 ಎನ್‌ಎಂ ಟರ್ಕ್ಯೂ) ಉತ್ಪಾದಿಸಲಿದೆ.

ಪ್ರಸ್ತುತ ನ್ಯಾನೋ ಸಿಎನ್‌ಜಿ, ದೇಶದ ಜನಪ್ರಿಯ ಕಾರುಗಳಾದ ಆಲ್ಟೊ ಸಿಎನ್‌ಜಿ, ಹ್ಯುಂಡೈ ಇಯಾನ್ ಎಲ್‌ಪಿ ಹಾಗೂ ಷೆವರ್ಲೆ ಸ್ಪಾರ್ಕ್ ಎಲ್‌ಪಿಜಿ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಸೆಗ್ಮೆಂಟ್‌ಗಳೊಂದಿಗೆ ಸ್ಪರ್ಧಿಸಲಿದೆ.

ಇನ್ನು ಅಪ್‌ಗ್ರೇಡ್ ಟಾಟಾ ನ್ಯಾನೋ, ಸುಧಾರಿತ ಇಂಟಿರಿಯರ್, ಕ್ರೋಮ್ ಎಕ್ಸ್‌ಟೀರಿಯರ್ ಹಾಗೂ ಹೆಚ್ಚಿನ ಬಣ್ಣದ ಆಯ್ಕೆಗಳೊಂದಿಗೆ ಆಗಮನವಾಗಿದೆ.

ಇದರಲ್ಲಿ ರಿಮೋಟ್ ಲಾಕಿಂಗ್, ಟ್ವಿನ್ ಗ್ಲೋವ್ ಬಾಕ್ಸ್, ಮಾಹಿತಿ ಸಿಸ್ಟಂ, ಬ್ಲೂಟೂತ್, ಯುಎಸ್‌ಬಿ, ಎಯುಎಕ್ಸ್ ಕನೆಕ್ಟಿವಿಟಿ ಪ್ಯಾಕೇಜ್‌ಗಳು ಲಭ್ಯವಿರಲಿದೆ.

ಅಂದ ಹಾಗೆ ಟಾಟಾ ನ್ಯಾನೋ ಡೀಸೆಲ್ ವೆರಿಂಯಟ್ ವರ್ಷನ್ ವರ್ಷಾಂತ್ಯ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಆಗಮನವಾಗುವ ನಿರೀಕ್ಷೆಯಿದೆ.

ಇದೀಗ ಟಾಟಾ ನ್ಯಾನೋ ಸಿಎನ್‌ಜಿ ಹಾಗೂ ಅಪ್‌ಗ್ರೇಡ್ ವರ್ಷನ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








