ನವೆಂಬರ್ ತಿಂಗಳಲ್ಲಿ ಸದ್ದು ಮಾಡಿದ ಟಾಪ್ 10 ಕಾರುಗಳು

By Nagaraja

ವಾಹನೋದ್ಯಮ ಹಿನ್ನಡೆ ಅನುಭವಿಸುತ್ತಿರುವ ನಡುವೆಯೂ ಗ್ರಾಹಕರ ಮೇಲಿನ ತನ್ನ ಬದ್ಧತೆಯನ್ನು ಪ್ರದರ್ಶಿಸುವುದರಿಂದ ಮಾತ್ರ ವಾಹನ ತಯಾರಿಕ ಸಂಸ್ಥೆಗಳು ಹಿಂಜರಿಯುತ್ತಿಲ್ಲ. ಅಂತೆಯೇ ಹೊಸ ಹೊಸ ಮಾದರಿಗಳನ್ನು ಪರಿಚಯಿಸುವುದರಲ್ಲಿ ಮಗ್ನವಾಗಿದೆ.

ಈ ನಡುವೆ ಕಾರು ಮಾರಾಟ ಈ ವರ್ಷಾಂತ್ಯದಲ್ಲಿ ಎರಡಂಕಿಯ ವೃದ್ಧಿ ತಲುಪುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮಂಕಾಗಿರುವ ಮಾರಾಟ ಪ್ರಕ್ರಿಯೆ ತೀರಾ ಹಿನ್ನಡೆಗೆ ಕಾರಣವಾಗಿದೆ.

ಸರಕಾರದ ಅಬಕಾರಿ ಸುಂಕ ನೀತಿ ಡಿಸೆಂಬರ್ ಅಂತ್ಯದ ವರೆಗೂ ಮುಂದುವರಿದಿರುವ ನಡುವೆಯೂ ವಾಹನ ಮಾರುಕಟ್ಟೆ ಪುನಶ್ಚೇತನದ ಸೂಚನೆ ಕಂಡಿಲ್ಲ. ಈ ನಡುವೆ ಗ್ರಾಹಕರಿಗೆ ವಷ್ಯಾಂತ್ಯದಲ್ಲಿ ಆಕರ್ಷಕ ಆಫರುಗಳನ್ನು ನೀಡಲಾಗಿತ್ತು. ಇದೀಗ ಮಾರಾಟದ ಲೆಕ್ಕಾಚಾರದಲ್ಲಿ ನವೆಂಬರ್ ತಿಂಗಳಲ್ಲಿ ಸದ್ದು ಮಾಡಿದ ಟಾಪ್ 10 ಕಾರುಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ.

10. ಮಾರುತಿ ಸುಜುಕಿ ಸೆಲೆರಿಯೊ

10. ಮಾರುತಿ ಸುಜುಕಿ ಸೆಲೆರಿಯೊ

ಟಾಪ್ 10 ಪಟ್ಟಿಯ ಅಂತಿಮ ಸ್ಥಾನದಲ್ಲಿ ತನ್ನ ಸಾನಿಧ್ಯ ವ್ಯಕ್ತಪಡಿಸಲು ದೇಶದ ನಂ.1 ಕಾರು ಸಂಸ್ಥೆ ಮಾರುತಿ ಸುಜುಕಿ ಜನಪ್ರಿಯ ಸೆಲೆರಿಯೊ ಮಾದರಿಗೆ ಸಾಧ್ಯವಾಗಿದೆ. ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಆಯ್ಕೆಯಲ್ಲಿ ಬಂದಿರುವ ಸೆಲೆರಿಯೊ ಉತ್ತಮ ಮಾರಾಟ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಒಟ್ಟು ಮಾರಾಟ - 4,926

 

09. ಮಾರುತಿ ಸುಜುಕಿ ಸಿಯಾಝ್

09. ಮಾರುತಿ ಸುಜುಕಿ ಸಿಯಾಝ್

ಇತ್ತೀಚೆಗಷ್ಟೇ ಮಾರುತಿಯಿಂದ ಬಿಡುಗಡೆಯಾಗಿರುವ ಸಿಯಾಝ್ ಸೆಡಾನ್ ಕಾರು ಟಾಪ್ 10 ಪಟ್ಟಿಗೆ ಮಗದೊಮ್ಮೆ ಎಂಟ್ರಿ ಕೂಟ್ಟಿದೆ. ಆದರೆ ಅಕ್ಟೋಬರ್ ತಿಂಗಳಲ್ಲಿ ಎಂಟನೇ ಸ್ಥಾನದಲ್ಲಿದ್ದ ಸಿಯಾಝ್ ಈ ಬಾರಿ ಒಂಬತ್ತನೇ ಸ್ಥಾನಕ್ಕೆ ಕುಸಿತ ಕಂಡಿದೆ. ಹಾಗಿದ್ದರೂ ತನ್ನ ವಿಭಾಗದಲ್ಲಿ ಹೋಂಡಾ ಸಿಟಿ ಹಾಗೂ ಹ್ಯುಂಡೈ ವೆರ್ನಾ ಸವಾಲನ್ನು ಪರಿಗಣಿಸಿದಾಗ ಸಿಯಾಝ್ ಉತ್ತಮ ಮಾರಾಟವನ್ನು ಕಾಯ್ದುಕೊಂಡಿದೆ.

ಒಟ್ಟು ಮಾರಾಟ - 5,232

 

08. ಹ್ಯುಂಡೈ ಇಯಾನ್

08. ಹ್ಯುಂಡೈ ಇಯಾನ್

ಎಂಟನೇ ಸ್ಥಾನದಲ್ಲಿ ಸ್ಟೈಲಿಷ್ ಹ್ಯಾಚ್ ಬ್ಯಾಕ್ ಕಾರು ಹ್ಯುಂಡೈ ಇಯಾನ್ ಗುರುತಿಸಿಕೊಂಡಿದೆ. ಮೂರು ಎಂಜಿನ್ ವೆರಿಯಂಟ್‌ಗಳಲ್ಲಿ ಲಭ್ಯವಿರುವ ಇಯಾನ್ ಪೆಟ್ರೋಲ್ ಹಾಗೂ ಎಲ್‌ಪಿಜಿ ಇಂಧನ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಒಟ್ಟು ಮಾರಾಟ - 6,986

 

07. ಹೋಂಡಾ ಸಿಟಿ

07. ಹೋಂಡಾ ಸಿಟಿ

ಸಿಯಾಝ್ ಪ್ರತಿಸ್ಪರ್ಧಿ ಹೋಂಡಾ ಸಿಟಿ ಸ್ವಲ್ಪ ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಏಳನೇ ಸ್ಥಾನದಲ್ಲಿದೆ. ಹೋಂಡಾ ಡೀಸೆಲ್ ಮೂಲಕ ಗ್ರಾಹಕರಿಗೆ ಹೊಸ ಅನುಭವ ನೀಡಿದ್ದ ಹೋಂಡಾ ಸಿಟಿ, ಡಿಸೈನ್ ವಿಷಯದಲ್ಲೂ ಕಿಂಚಿತ್ತು ರಾಜಿಗೂ ತಯಾರಾಗಿಲ್ಲ.

ಒಟ್ಟು ಮಾರಾಟ - 7,252

 

06. ಹ್ಯುಂಡೈ ಗ್ರಾಂಡ್ ಐ10

06. ಹ್ಯುಂಡೈ ಗ್ರಾಂಡ್ ಐ10

ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯ ಮಗದೊಂದು ಸಂಸ್ಥೆ ಟಾಪ್ 10 ಪಟ್ಟಿಯಲ್ಲಿದೆ. ಅದುವೇ ಗ್ರಾಂಡ್ ಐ10. ವಿಶೇಷವೆಂದರೆ ಹೆಚ್ಚು ಕಡಿಮೆ ಅಕ್ಟೋಬರ್ (8,400) ತಿಂಗಳ ಅದೇ ಮಾರಾಟ ಸಂಖ್ಯೆ ಕಾಪಾಡಿಕೊಂಡಿರುವ ಗ್ರಾಂಡ್ ಐ10 ಸ್ಥಿರತೆ ಕಾಪಾಡಿಕೊಂಡಿದೆ.

ಒಟ್ಟು ಮಾರಾಟ - 8,396

 

05. ಹ್ಯುಂಡೈ ಎಲೈಟ್ ಐ20

05. ಹ್ಯುಂಡೈ ಎಲೈಟ್ ಐ20

2015 ಇಂಡಿಯಾ ಕಾರ್ ಆಫ್ ದಿ ಇಯರ್ ಪ್ರಶಸ್ತಿಗೆ ಪಾತ್ರವಾಗಿರುವ ಹ್ಯುಂಡೈ ಎಲೈಟ್ ಐ10, ಟಾಪ್ 5ಗೆ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ತಾನ್ಯಾಕೆ ಈ ಸ್ಥಾನಕ್ಕೆ ಅರ್ಹವೆಂಬುದನ್ನು ಮಗದೊಮ್ಮೆ ಸಾಬೀತುಪಡಿಸಿದೆ. ವಿಶೇಷವೆಂದರೆ ಒಂದು ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಾಗಿರುವ ಹೊರತಾಗಿರುವ ನವೆಂಬರ್ ತಿಂಗಳಲ್ಲೂ ಸ್ಥಿರತೆ ಕಾಪಾಡಿಕೊಂಡಿರುವ ಹ್ಯುಂಡೈ ಎಲೈಟ್ ಐ20 ನವೆಂಬರ್ ತಿಂಗಳಲ್ಲಿ ಒಠ್ಟು 16,552 ಯುನಿಟ್‌ಗಳ ಮಾರಾಟ ಕಾಯ್ದುಕೊಂಡಿದೆ.

ಒಟ್ಟು ಮಾರಾಟ - 10,552

 

04. ಮಾರುತಿ ಸುಜುಕಿ ಡಿಜೈರ್

04. ಮಾರುತಿ ಸುಜುಕಿ ಡಿಜೈರ್

ಮಾರುತಿಯ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಡಿಜೈರ್ ಕಾಂಪಾಕ್ಟ್ ಸೆಡಾನ್ ಕಾರು ನಂ.4ರಲ್ಲಿ ಕಾಣಿಸಿಕೊಂಡಿದೆ. ಹಾಗಿದ್ದರೂ ಅಕ್ಟೋಬರ್ ತಿಂಗಳಲ್ಲಿ 16,542 ಯುನಿಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದ ಡಿಜೈರ್ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಒಟ್ಟು ಮಾರಾಟ - 12,020

 

03. ಮಾರುತಿ ಸುಜುಕಿ ವ್ಯಾಗನಾರ್

03. ಮಾರುತಿ ಸುಜುಕಿ ವ್ಯಾಗನಾರ್

ಅದೇ ರೀತಿ ಗ್ರಾಹಕರ ಕೈಗೆಟುಕುವ ದರಗಳಲ್ಲಿ ಲಭ್ಯವಾಗುವ ಮಗದೊಂದು ಆಕರ್ಷಕ ಮಾರುತಿ ಕಾರಾಗಿರುವ ವ್ಯಾಗನಾರ್ ಮೂರನೇ ಸ್ಥಾನ ಕಾಯ್ದುಕೊಂಡಿದೆ.

ಒಟ್ಟು ಮಾರಾಟ - 13,545

 

02. ಮಾರುತಿ ಸುಜುಕಿ ಸ್ವಿಫ್ಟ್

02. ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿಯ ಜನಪ್ರಿಯ ಹ್ಯಾಚ್ ಬ್ಯಾಕ್ ಕಾರಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಮಗದೊಮ್ಮೆ ಮಾರುತಿ ಅಧಿಪತ್ಯಕ್ಕೆ ಮುನ್ನಡಿ ಬರೆದಿದೆ.

ಒಟ್ಟು ಮಾರಾಟ - 17,900

 

01. ಮಾರುತಿ ಆಲ್ಟೊ 800

01. ಮಾರುತಿ ಆಲ್ಟೊ 800

ನಿಸ್ಸಂಶವಾಗಿಯೂ ತನ್ನ ಅಗ್ರಸ್ಥಾನವನ್ನು ಯಾರಿಗೂ ಬಿಟ್ಟುಕೊಡಲಾರೆನು ಎಂಬಂತಿರುವ ಮಾರುತಿ ಸುಜುಕಿ ಆಲ್ಟೊ 800 ನಿರೀಕ್ಷೆಯಂತೆಯೇ ಅಗ್ರಸ್ಥಾನ ಕಾಪಾಡಿಕೊಂಡಿದೆ. ಆಲ್ಟೊ ಕೆ10 ಎಎಂಟಿ ವರ್ಷನ್ ಬಿಡುಗಡೆಯೊಂದಿಗೆ ಇನ್ನಷ್ಟು ಉತ್ತೇಜನ ಪಡೆದಿರುವ ಆಲ್ಟೊ, ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ನವೆಂಬರ್ ತಿಂಗಳಲ್ಲಿ ಗರಿಷ್ಠ ಸಂಖ್ಯೆಯ ಮಾರಾಟ ಗಿಟ್ಟಿಸಿಕೊಂಡಿದೆ.

ಒಟ್ಟು ಮಾರಾಟ - 24,201

 

 
English summary
India has seen a dip in car sales over some time now. Manufacturers, in spite of launching new vehicles and even not hiking prices for the existing ones, did little to help sales grow.
Please Wait while comments are loading...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+