ದೇಶದ ಟಾಪ್ SUV-MUV ಕಾರುಗಳು
ಭಾರತೀಯ ಮಾರುಕಟ್ಟೆಗಳು ನಿಧಾನವಾಗಿ ಹ್ಯಾಚ್‌ಬ್ಯಾಕ್ ಕಾರುಗಳಿಂದ ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಹಾಗೂ ಮಲ್ಟಿ ಯುಟಿಲಿಟಿ ವೆಹಿಕಲ್‌ಗಳತ್ತ (ಎಂಯುವಿ) ಸ್ಥಳಾಂತರವಾಗುತ್ತಿವೆ. ದೊಡ್ಡ ಕುಟುಂಬಗಳಿಗೆ ಆರಾಮದಾಯಕವಾಗಿ ಸಂಚರಿಸಬಹುದಾದ ಹಾಗೂ ಹೆಚ್ಚು ಗುಣಮಟ್ಟವು ಗ್ರಾಹಕರನ್ನು ಹೆಚ್ಚು ಆಕರ್ಷಿಸುವಂತಾಗಿದೆ.
ಗ್ರಾಹಕರ ಬೇಡಿಕೆಯನ್ನು ಪರಿಗಣಿಸಿ ಎಸ್‌ಯುವಿ ಹಾಗೂ ಎಂಯುವಿ ಕಾರುಗಳ ಬೇಡಿಕೆ ಹೆಚ್ಚಾಗ ತೊಡಗಿದೆ. ಇದು ಇತರ ಹ್ಯಾಚ್‌ಬ್ಯಾಕ್ ಕಾರುಗಳಿಗಿತಂಲೂ ಹೆಚ್ಚು ಆರಾಮದಾಯಕವಾಗಿದೆ.
ದೇಶದಲ್ಲಿ ಎಸ್‌ಯುವಿ ಕಾರುಗಳು ಎಷ್ಟು ಜನಪ್ರಿಯವಾಗಿದೆ ಎಂಬುದಕ್ಕೆ ನಾವೊಂದು ಉದಾಹರಣೆ ಕೊಡಲಿದ್ದೇವೆ. ಸಣ್ಣ ಕಾರು ಮಾರುಕಟ್ಟೆಯಲ್ಲಿ ಭಾರಿ ಯಶ ಸಾಧಿಸಿರುವ ದೇಶ ನಂ. 1 ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಕೂಡಾ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಎರ್ಟಿಗಾ ಎಂಯುವಿ ಕಾರನ್ನು ಲಾಂಚ್ ಮಾಡಿತ್ತು. ಅಲ್ಲದೆ ಸದ್ಯದಲ್ಲೇ ಕಾಂಪಾಕ್ಟ್ ಎಸ್‌ಯುವಿ ಕಾರೊಂದನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಮೂಲಕ ಬದಲಾವಣೆಗೆ ತಕ್ಕಂತೆ ಮಾರುತಿ ಕೂಡಾ ಎಸ್‌ಯುವಿ ಮಾರುಕಟ್ಟೆ ತಂತ್ರವನ್ನು ಅನುಸರಿಸುತ್ತಿವೆ.
ಅದೇ ರೀತಿ ಸಾಂಟಾ ಫೆ ಪ್ಲಾಟ್ ಫಾರ್ಮ್‌ನಲ್ಲಿ ಎಸ್‌ಯುವಿ ಕಾರೊಂದನ್ನು ಬಿಡುಗಡೆ ಮಾಡಲು ದೇಶದ ನಂ.2 ಕಾರು ತಯಾರಕ ಸಂಸ್ಥೆಯಾದ ಹ್ಯುಂಡೈ ಯೋಜನೆ ಹಾಕಿಕೊಂಡಿದೆ. ಅಂದ ಹಾಗೆ ಮುಂಬರುವ ದಿನಗಳಲ್ಲಿ ದೇಶಕ್ಕೆ ಮತ್ತಷ್ಟು ಎಸ್‌ಯುವಿ ಕಾರುಗಳ ಪರಿಚಯವಾಗಲಿದೆ. ಹಾಗಿರುವಾಗ ಕಾರು ಪ್ರಿಯರಿಗೆ ಈಗಾಗಲೇ ದೇಶದಲ್ಲಿ ಸದ್ದು ಮಾಡಿರುವ ಎಸ್‌ಯುವಿ ಹಾಗೂ ಎಂಪಿವಿ ಕಾರುಗಳ ಕುರಿತು ಮಾಹಿತಿ ಕೊಡಲಿದ್ದೇವೆ.

ದೇಶದ ಮಾರುಕಟ್ಟೆಯಲ್ಲಿ ಈಗಾಗಲೇ ಸದ್ದು ಮಾಡಿರುವ ಟಾಪ್ ಎಸ್‌ಯುವಿ/ಎಂಯುವಿ ಕಾರುಗಳ ಮಾಹಿತಿಗಾಗಿ ಫೋಟೊ ಫೀಚರ್ ಕ್ಲಿಕ್ಕಿಸುತ್ತಾ ಸಾಗಿರಿ...

ಮಹೀಂದ್ರ ಬೊಲೆರೊ
ಒಂದು ಕಾಲದಲ್ಲಿ ದೇಶದ ಜನಪ್ರಿಯ ಎಸ್‌ಯುವಿ ಕಾರು ಎನಿಸಿಕೊಂಡಿದ್ದ ಮಹೀಂದ್ರ ಬೊಲೆರೊ ಸರ್ವೋತ್ಕೃಷ್ಟ ಕಾರಾಗಿದೆ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಿರುವ ಮಹೀಂದ್ರ ಬೊಲೆರೊ ನಿರ್ವಹಣೆ ಕೂಡಾ ತುಂಬಾ ಸುಲಭವಾಗಿದೆ.
ಎಕ್ಸ್ ಶೋ ರೂಂ ದರ: 5.66-7.27 ಲಕ್ಷ ರು.

ಪ್ರೀಮಿಯಂ ರಿಯೊ
ಪ್ರೀಮಿಯಂ ರಿಯೊ ದೇಶದ ಮೊದಲ ಕಾಂಪಾಕ್ಟ್ ಎಸ್‌ಯುವಿ ಕಾರಾಗಿದೆ. ನಾಲ್ಕು ಮೀಟರ್ ಉದ್ದ ಮಿತಿಯೊಳಗಿರುವ ರಿಯೊ ಉತ್ತಮ ರಸ್ತೆ ಉಪಸ್ಥಿತಿ ಹಾಗೂ ಇಂಧನ ದಕ್ಷತೆಯನ್ನು ಹೊಂದಿದೆ. ರಿಯೊ ಇದೀಗಷ್ಟೇ ಫಿಯೆಟ್‌ನ ಜನಪ್ರಿಯ ಮಲ್ಟಿ ಜೆಟ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಕಾರನ್ನು ಬಿಡುಗಡೆಗೊಳಿಸಿತ್ತು.
ಎಕ್ಸ್ ಶೋ ರೂಂ ದರ: 5.73 - 6.93 ಲಕ್ಷ ರು.

ಮಹೀಂದ್ರ ಥಾರ್
ಕ್ಲಾಸಿಕ್ ಫೋರ್ ವೀಲ್ ಎಸ್‌ಯುವಿ ಡ್ರೈವಿಂಗ್‌ಗೆ ಮಹೀಂದ್ರ ಥಾರ್ ಪ್ರಸಿದ್ಧವಾಗಿದೆ. ಪ್ರೀಮಿಯಂ ಎಸ್‌ಯುವಿ ಲುಕ್ ಹೊಂದಿಲ್ಲದಿದ್ದರೂ ಆಫ್ ರೋಡ್ ಪಯಣದಲ್ಲಿ ಹೆಚ್ಚು ಪರಿಣಾಮಕಾರಿಯೆನಿಸಿದೆ.
ಎಕ್ಸ್ ಶೋ ರೂಂ ದರ: 4.63 - 6.98 ಲಕ್ಷ ರು.

ಷೆವರ್ಲೆ ತವೆರಾ
ಷೆವರ್ಲೆ ತವೆರಾ ತನ್ನ ಜನಪ್ರಿಯತೆಯಿಂದಲೇ ಹೆಚ್ಚಿನ ಮಾನ್ಯತೆ ಗಿಟ್ಟಿಸಿಕೊಂಡಿದೆ. ಈ ಮೂಲಕ ಬ್ರಾಂಡ್ ಇಮೇಜ್ ಹೆಚ್ಚಿಸಿಕೊಳ್ಳಲು ಷೆವರ್ಲೆಗೆ ಸಾಧ್ಯವಾಗಿತ್ತು.
ಎಕ್ಸ್ ಶೋ ರೂಂ ದರ: 6.75 - 10.42 ಲಕ್ಷ ರು.

ಮಹೀಂದ್ರ ಕ್ವಾಂಟೊ
ಕಾಂಪಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಮಹೀಂದ್ರ ಎಸ್‌ಯುವಿ ಕಾರು ಹೆಚ್ಚು ಪರಿಣಾಮಕಾರಿಯೆನಿಸಿದೆ. ಇದು ಕ್ಸೈಲೋದ ಮಿನಿ ಅವತಾರವಾಗಿದೆ.
ಎಕ್ಸ್ ಶೋ ರೂಂ ದರ: 6 - 7.57 ಲಕ್ಷ ರು.

ರೆನೊ ಡಸ್ಟರ್
ಸದ್ಯ ದೇಶದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಪ್ರಭಾವಿ ಎನಿಸಿಕೊಂಡಿರುವ ಎಸ್‌ಯುವಿ ರೆನೊ ಡಸ್ಟರ್ ಆಗಿದೆ. ಇದರಿಂದಲೇ 2013ನೇ ಸಾಲಿನ ಶ್ರೇಷ್ಠ ಕಾರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಎಕ್ಸ್ ಶೋ ರೂಂ ದರ: 7.19 - 11.29 ಲಕ್ಷ ರು.

ಮಹೀಂದ್ರ ಕ್ಸೈಲೋ
ಮಹೀಂದ್ರ ಬಿಡುಗಡೆಗೊಂಡ ಬಹುನಿರೀಕ್ಷಿತ ಎಂಯುವಿ ಕ್ಸೈಲೋ ಆಗಿತ್ತು. ನಗರ ಸೇರಿದಂತೆ ದೀರ್ಘ ಪಯಣಕ್ಕೂ ಇದು ಹೆಚ್ಚು ಸೂಕ್ತವಾಗಿದೆ. ಹೆಚ್ಚು ಸ್ಥಳಾವಕಾಶ ಹೊಂದಿರುವ ಕ್ಸೈಲೋ ಉತ್ತಮ ಲಗ್ಗೇಜ್ ಸ್ಪೇಸ್ ಕೂಡಾ ಹೊಂದಿದೆ.
ಎಕ್ಸ್ ಶೋ ರೂಂ ದರ: 7.40 - 10.569 ಲಕ್ಷ ರು.

ಮಹೀಂದ್ರ ಸ್ಕಾರ್ಪಿಯೊ
ಸಂಪೂರ್ಣವಾಗಿ ದೇಶದಲ್ಲೇ ಅಭಿವೃದ್ಧಿಪಡಿಸಲಾದ ಮೊದಲ ಎಸ್‌ಯುವಿ ಕಾರೆಂಬ ಹೆಗ್ಗಳಿಕೆಯು ಸ್ಕಾರ್ಪಿಯೊ ಪಡೆದಿದೆ. ಸ್ಕಾರ್ಪಿಯೊ ಇದೀಗಲೂ ಜನರ ಅಚ್ಚುಮೆಚ್ಚಿನ ಕಾರು ಎನಿಸಿಕೊಂಡಿದೆ.
ಎಕ್ಸ್ ಶೋ ರೂಂ ದರ: 7.40 - 10.56 ಲಕ್ಷ ರು.

ಟಾಟಾ ಸಫಾರಿ ಸ್ಟ್ರೋಮ್
ದೇಶದ ಮೊದಲ ಪ್ರೀಮಿಯಂ ಎಸ್‌ಯುವಿ ಎಂಬ ಹೆಗ್ಗಳಿಕೆಯನ್ನು ಟಾಟಾ ಸಫಾರಿ ಸ್ಟ್ರೋಮ್ ಪಡೆದುಕೊಂಡಿದೆ. ಇತ್ತೀಚೆಗಷ್ಟೇ ಸಫಾರಿ ಸ್ಟ್ರೋಮ್ ಪರಿಷ್ಕೃತ ಆವೃತ್ತಿಯನ್ನು ಟಾಟಾ ಬಿಡುಗಡೆಗೊಳಿಸಿತ್ತು. ಈ ನಡುವೆ 6,000 ಬುಕ್ಕಿಂಗ್ ಗಿಟ್ಟಿಸಿಕೊಳ್ಳುವ ಮೂಲಕ ಗಮನ ಸೆಳೆದಿದೆ.
ಎಕ್ಸ್ ಶೋ ರೂಂ ದರ: 9.95 - 13.66 ಲಕ್ಷ ರು.

ಟಾಟಾ ಸುಮೋ ಗೋಲ್ಡ್
90ರ ದಶಕದಲ್ಲಿ ಟಾಟಾ ಸುಮೋ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿತ್ತು. ಇದರಿಂದಲೇ ಉತ್ತೇಜನ ಪಡೆದ ಟಾಟಾ ಕಂಪನಿಯು ಟಾಟಾ ಸುಮೋ ಗೋಲ್ಡ್ ಮಾರುಕಟ್ಟೆಗೆ ಪರಿಚಯಿಸಿತ್ತು.
ಎಕ್ಸ್ ಶೋ ರೂಂ ದರ: 5.46 - 7.10 ಲಕ್ಷ ರು.

ಮಹೀಂದ್ರ ಎಕ್ಸ್‌ಯುವಿ 500
ಮಹೀಂದ್ರದಿಂದ ಅತಿ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿರುವ ಎಕ್ಸ್‌ಯುವಿ 500 ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಎಕ್ಸ್‌ಯುವಿ 500 ಈಗಾಗಲೇ ಅನೇಕ ರಾಷ್ಟ್ರಗಳಲ್ಲಿ ಬಿಡುಗಡೆಗೊಂಡಿದೆ.
ಎಕ್ಸ್ ಶೋ ರೂಂ ದರ: 11.71 - 14.28 ಲಕ್ಷ ರು.

ಟೊಯೊಟಾ ಇನ್ನೋವಾ
ಮಲ್ಟಿ ಯುಟಿಲಿಟಿ ವೆಹಿಕಲ್‌ನ ಬೆಂಚ್ ಮಾರ್ಕ್ ಎನಿಸಿಕೊಂಡಿರುವ ಟೊಯೊಟಾ ಇನ್ನೋವಾ ದೇಶದಲ್ಲಿ ಸದ್ದು ಮಾಡಿರುವ ಕಾರು ಆಗಿದೆ.
ಎಕ್ಸ್ ಶೋ ರೂಂ ದರ: 9.09 - 13.89 ಲಕ್ಷ ರು.

ಷೆವರ್ಲೆ ಕಾಪ್ಟಿವಾ
ಅಮೆರಿಕ ಕಾರು ತಯಾರಕರಿಂದ ಪರಿಚಿತವಾಗಿರುವ ಹೈ ಎಂಡ್ ಎಸ್‌ಯುವಿ ಕಾರಾಗಿದೆ ಷೆವರ್ಲೆ ಕಾಪ್ಟಿವಾ. ಇದು ಉತ್ತಮ ನಿರ್ವಹಣೆಗಾಗಿ ಜನಪ್ರಿಯಗೊಂಡಿದೆ.
ಎಕ್ಸ್ ಶೋ ರೂಂ ದರ: 18.75 - 24.60 ಲಕ್ಷ ರು.

ಫೋರ್ಸ್ ಒನ್
ವಾಣಿಜ್ಯ ಕಾರು ತಯಾರಕರಾದ ಫೋರ್ಸ್ ಮೋಟಾರ್ಸ್ ಫೋರ್ಸ್ ಒನ್ ಮೂಲಕ ಪ್ರಯಾಣಿಕ ಕಾರು ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು. ಇದು ಮರ್ಸಿಡಿಸ್ ಬೆಂಝ್‌ನ ಸಿಆರ್‌ಡಿಐ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ.
ಎಕ್ಸ್ ಶೋ ರೂಂ ದರ: 11.52 ಲಕ್ಷ ರು.

ಫೋರ್ಡ್ ಎಂಡೋವರ್
ಫೋರ್ಡ್ ಎಂಡೋವರ್ ದೇಶದ ಮೊದಲ ನೈಜ ಹೈ ಎಂಡ್ ಎಸ್‌ಯುವಿ ಕಾರಾಗಿದೆ. ಇದು ಉತ್ತಮ ಸ್ಥಳಾವಕಾಶ, ಪವರ್, ನಿರ್ವಹಣೆ ಹಾಗೂ ಆಫ್ ರೋಡ್ ಸಾಮರ್ಥ್ಯವನ್ನು ಹೊಂದಿದೆ.
ಎಕ್ಸ್ ಶೋ ರೂಂ ದರ: 17.84 - 20.76 ಲಕ್ಷ ರು.

ಮಾರುತಿ ಸುಜುಕಿ ಎರ್ಟಿಗಾ
ದೇಶದ ಮುಂಚೂಣಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ, ಎರ್ಟಿಗಾ ಫ್ಯಾಮಿಲಿ ಕಾರು ಮೂಲಕ ಹೆಚ್ಚು ಜನಮನ್ನಣೆಗೆ ಪಾತ್ರವಾಗಿತ್ತು.
ಎಕ್ಸ್ ಶೋ ರೂಂ ದರ: 5.92 - 8.63 ಲಕ್ಷ ರು.

ನಿಸ್ಸಾನ್ ಇವಾಲಿಯಾ
ಟೊಯೊಟಾ ಇನ್ನೋವಾಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ನಿಸ್ಸಾನ್ ಇವಾಲಿಯಾ ಎಂಯುವಿ ಕಾರು ಆಗಮನವಾಗಿತ್ತು.
ಎಕ್ಸ್ ಶೋ ರೂಂ ದರ: 8.49 - 9.99 ಲಕ್ಷ ರು.

ಸ್ಕೋಡಾ ಯೆಟಿ
ದರದ ವಿಚಾರ ಹೊರತು ಪಡಿಸಿದರೆ ಸ್ಕೋಡಾ ಯೋಟಿ ದೇಶದ ರಸ್ತೆಗಳಲ್ಲಿ ಹೆಚ್ಚು ಹೊಂದಿಕೆಯಾದ ಕಾರಾಗಿದೆ.
ಎಕ್ಸ್ ಶೋ ರೂಂ ದರ: 13.90 - 17.50 ಲಕ್ಷ ರು.

ಸ್ಯಾಂಗ್ಯೊಂಗ್ ರೆಕ್ಸ್ಟಾನ್
ಕೊರಿಯಾದ ಸ್ಯಾಂಗ್ಯೊಂಗ್ ಜತೆ ಪಾಲುದಾರಿಕೆ ಹೊಂದಿರುವ ಮಹೀಂದ್ರ ದೇಶದ ರಸ್ತೆಗೆ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಪರಿಚಯಿಸಿತ್ತು. ಇದು ಹೆಚ್ಚು ಪ್ರೀಮಿಯಂ ಲುಕ್ ಹೊಂದಿದೆ.
ಎಕ್ಸ್ ಶೋ ರೂಂ ದರ: 18.08 - 20.23 ಲಕ್ಷ ರು.

ಟಾಟಾ ಆರಿಯಾ
ಟಾಟಾ ಮೋಟಾರ್ಸ್‌ನಿಂದ ಬಿಡುಗಡೆಯಾದ ಅತಿ ಶ್ರೇಷ್ಠ ಕಾರು ಟಾಟಾ ಆರಿಯಾ ಆಗಿದೆ. ಇದು ಪ್ರೀಮಿಯಂ ಫೀಚರ್ಸ್, ಆಕರ್ಷಕ ಇಂಟಿರಿಯರ್ ಹಾಗೂ ಆಧುನಿಕ ಲುಕ್ ಹೊಂದಿವೆ.
ಎಕ್ಸ್ ಶೋ ರೂಂ ದರ: 11.71 - 16.57 ಲಕ್ಷ ರು.

ಟೊಯೊಟಾ ಫೋರ್ಚುನರ್
ಎಸ್‌ಯುವಿ ಕಾರುಗಳ ಪೈಕಿ ಟೊಯೊಟಾ ಫೋರ್ಚುನರ್ ಬಿಗ್ ಬಾಸ್ ಎನಿಸಿಕೊಂಡಿದೆ. ಇದರ ಪವರ್‌ಫುಲ್ ಎಂಜಿನ್ ಸದೃಢ ನಿರ್ವಹಣೆಗೆ ಸಹಕಾರಿಯಾಗಿದೆ.
ಎಕ್ಸ್ ಶೋ ರೂಂ ದರ: 20.79 - 21.93 ಲಕ್ಷ ರು.


Click it and Unblock the Notifications








