ಮಾರುತಿ ಸೆಲೆರಿಯೊ ಪ್ರತಿಸ್ಪರ್ಧಿ ಟೊಯೊಟಾ ಐಗೊ

By Nagaraja

ಇತ್ತೀಚೆಗಷ್ಟೇ ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದ ಮಾರುತಿ ಸುಜುಕಿ ಸೆಲೆರಿಯೊ ಭಾರಿ ಸಂಖ್ಯೆಯಲ್ಲಿ ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಪೈಕಿ ಆಟೋಮ್ಯಾಟಿಕ್ ವರ್ಷನ್ ಸೆಲೆರಿಯೊ, ಮ್ಯಾನುವಲ್‌ಗಿಂತಲೂ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿದೆ.

ಅಂದ ಹಾಗೆ ಮಾರುತಿ ಅಂಗಸಂಸ್ಥೆಯಾಗಿರುವ ಸುಜುಕಿ, ಯುರೋಪ್‌ನಲ್ಲೂ ಸೆಲೆರಿಯೊ ಪರಿಚಯಿಸಿದೆ. 2014 ಜಿನೆವಾ ಮೋಟಾರು ಶೋದಲ್ಲಿ ಸೆಲೆರಿಯೊ ಪ್ರದರ್ಶನ ಕಂಡಿತ್ತು. ಈ ನಡುವೆ ಜಪಾನ್ ಮೂಲದ ಸಂಸ್ಥೆ ಆಗಿರುವ ಟೊಯೊಟಾ ಕೂಡಾ ಜಿನೆವಾದಲ್ಲಿ ನೂತನ ಐಗೊ ಕಾರನ್ನು ಪ್ರದರ್ಶಿಸಿದೆ. ಪ್ರಸ್ತುತ ಕಾರು ಪ್ರಮುಖವಾಗಿ ಯುರೋಪ್‌ ಮಾರುಕಟ್ಟೆಯಲ್ಲಿ ಸುಜುಕಿ ಸೆಲೆರಿಯೊ ಆವೃತ್ತಿಗೆ ಪ್ರತಿಸ್ಪರ್ಧಿಯಾಗಿರಲಿದೆ. ಹಾಗಾಗಿ ಈ ಬಹುನಿರೀಕ್ಷಿತ ಕಾರು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆಯೇ ಎಂಬುದು ಕುತೂಹಲ ಕೆರಳಿಸಿದೆ. ಇವೆಲ್ಲಕ್ಕೂ ಟೊಯೊಟಾದಿಂದಲೇ ಉತ್ತರ ಲಭಿಸಬೇಕಾಗಿದೆ. ಅಷ್ಟಕ್ಕೂ ಟೊಯೊಟಾ ಐಗೊದಲ್ಲಿರುವ ವಿಶೇಷತೆಗಳೇನು? ಸೆಲೆರಿಯೊಗೆ ಹೇಗೆ ಸ್ಪರ್ಧೆ ಒಡ್ಡಲಿದೆ ಎಂಬುದನ್ನು ತಿಳಿದುಕೊಳ್ಳೋಣವೇ..

ಮಾರುತಿ ಸೆಲೆರಿಯೊ ಪ್ರತಿಸ್ಪರ್ಧಿ ಟೊಯೊಟಾ ಐಗೊ

ನಿಮ್ಮ ಮಾಹಿತಿಗಾಗಿ, ಟೊಯೊಟಾ ಐಗೊ ಹೊಸ ಕಾರೇನಲ್ಲ. ಸ್ವಾತಂತ್ರ್ಯ ಹಾಗೂ ಚಲನಶೀಲತೆ ಸಂಕೇತವಾಗಿರುವ ಐಗೊ 2005ನೇ ಇಸವಿಯಿಂದಲೇ ಮಾರುಕಟ್ಟೆಯಲ್ಲಿದೆ. ಇದೀಗ ಮತ್ತಷ್ಟು ಸ್ಟೈಲಿಷ್ ಹಾಗೂ ಆಕ್ರಮಣಕಾರಿ ವಿನ್ಯಾಸದೊಂದಿಗೆ ಆಗಮನವಾಗಲಿದೆ.

ಮಾರುತಿ ಸೆಲೆರಿಯೊ ಪ್ರತಿಸ್ಪರ್ಧಿ ಟೊಯೊಟಾ ಐಗೊ

ಇದರಲ್ಲಿ ಜಪಾನ್ ವಾಹನ ತಯಾರಕ ಸಂಸ್ಥೆಯು ಸಿಂಗಲ್ ಎಂಜಿನ್ ಒದಗಿಸುತ್ತಿದ್ದು, ಅಂದರೆ 1.0 ಲೀಟರ್ ಎಂಜಿನ್ ಹೊಂದಿರಲಿದೆ. ಇದು 68 ಅಶ್ವಶಕ್ತಿ ಉತ್ಪಾದಿಸಲಿದೆ. ಇದು 14.2 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ಹಾಗೂ ಗಂಟೆಗೆ ಗರಿಷ್ಠ 160 ಕೀ.ಮೀ. ವೇಗತೆಯಲ್ಲಿ ಸಂಚರಿಸಲಿದೆ.

ಮಾರುತಿ ಸೆಲೆರಿಯೊ ಪ್ರತಿಸ್ಪರ್ಧಿ ಟೊಯೊಟಾ ಐಗೊ

ಹಿಂದಿನ ಮಾದರಿಗಿಂತಲೂ ಹೆಚ್ಚು ಪರಿಷ್ಕೃತ ಎಕ್ಸ್-ಶಿಫ್ಟ್ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಟೊಯೊಟಾ ಇದರಲ್ಲಿ ಬಳಕೆ ಮಾಡಲಿದೆ.ಇದು ಈ ಹ್ಯಾಚ್‌ಬ್ಯಾಕ್ ಕಾರು ಗರಿಷ್ಠ ಇಂಧನ ಕ್ಷಮತೆ ನೀಡಲು ನೆರವಾಗಲಿದೆ.

ಮಾರುತಿ ಸೆಲೆರಿಯೊ ಪ್ರತಿಸ್ಪರ್ಧಿ ಟೊಯೊಟಾ ಐಗೊ

ನೀವು ನೋಡುತ್ತಿರುವಂತೆಯೇ ಮುಂಭಾಗದಲ್ಲಿ ಸೆಲೆರಿಯೊಗಿಂತ ಪ್ರೀಮಿಯಂ ಲುಕ್ ಕಾಪಾಡಿಕೊಳ್ಳುಲ್ಲಿ ಐಗೊ ಯಶಸ್ಸನ್ನು ಕಂಡಿದೆ. ಇದು ಎಕ್ಸ್ ವಿನ್ಯಾಸಕ್ಕೆ ಮೊರೆ ಹೋಗಿರುವುದನ್ನು ಕಾಣಬಹುದು.

ಮಾರುತಿ ಸೆಲೆರಿಯೊ ಪ್ರತಿಸ್ಪರ್ಧಿ ಟೊಯೊಟಾ ಐಗೊ

ಇನ್ನು ಬದಿಯಲ್ಲಿ ಸುಲಭವಾದ ವಿನ್ಯಾಸ ಕಲ್ಪಿಸಿಕೊಡಲಾಗಿದೆ. ಆದರೆ 5 ಸ್ಪೋಕ್ ಅಲಾಯ್ ವೀಲ್‌ಗಳು ಕಾರಿಗೆ ಕ್ರೀಡಾತ್ಮಕ ವಿನ್ಯಾಸ ಪ್ರದಾನ ಮಾಡಲಿದೆ.

ಮಾರುತಿ ಸೆಲೆರಿಯೊ ಪ್ರತಿಸ್ಪರ್ಧಿ ಟೊಯೊಟಾ ಐಗೊ

ಐಗೊ ಹಿಂದಿನ ಆವೃತ್ತಿಗಿಂತಲೂ 25 ಎಂಎಂ ಹೆಚ್ಚು ಉದ್ದ ಹೊಂದಿರಲಿದೆ. ಇನ್ನು ಕಾರಿನ ಹಿಂದುಗಡೆ ಫ್ಯೂಚರಿಸ್ಟಿಕ್ ವಿನ್ಯಾಸದ ಟೈಲ್ ಲ್ಯಾಂಪ್ ಕ್ಲಸ್ಟರ್ ಪಡೆದುಕೊಳ್ಳಲಿದೆ. ಹಾಗೆಯೇ ಬೂಟ್ ಸಾಮರ್ಥ್ಯ 29 ಲೀಟರುಗಳಷ್ಟು ಹೆಚ್ಚು ಸಿಗಲಿದೆ. ಇದು ನಿಮ್ಮ ಪಯಣವನ್ನು ಸುಲಭಗೊಳಿಸಲಿದೆ.

ಮಾರುತಿ ಸೆಲೆರಿಯೊ ಪ್ರತಿಸ್ಪರ್ಧಿ ಟೊಯೊಟಾ ಐಗೊ

ಅಂತಿಮವಾಗಿ ಕಾರಿನೊಳಗೆ ಆಕರ್ಷಕ ಮಾಹಿತಿ ಮನರಂಜನಾ ವ್ಯವಸ್ಥೆ ಲಭ್ಯವಿರಲಿದೆ. ಒಟ್ಟಿನಲ್ಲಿ ಸದ್ಯಕ್ಕಂತೂ ಟೊಯೊಟಾ ಐಗೊ ಭಾರತ ಪ್ರವೇಶಿಸುವ ಯಾವುದೇ ಸೂಚನೆಗಳು ಲಭಿಸಿಲ್ಲ. ಹಾಗಾಗಿ ಸದ್ಯಕ್ಕೆ ಸೆಲೆರಿಯೊ ಅಬ್ಬರವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಖಚಿತವಾಗಿದೆ.

More from DriveSpark

Article Published On: Friday, March 7, 2014, 10:23 [IST]
English summary
Toyota has revealed their all new AYGO at the 2014 Geneva Motor Show. The car has been designed to be more stylish and aggressive looking than the previous generation model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+