ಭಾರತಕ್ಕೆ ಟೊಯೊಟಾ ಇಟಿಯೋಸ್, ಲಿವಾ ಎಕ್ಸ್‌ಕ್ಲೂಸಿವ್ ಎಡಿಷನ್
ಮುಂಬರುವ ಹಬ್ಬದ ಆವೃತ್ತಿಯು ಭಾರತೀಯರ ಪಾಲಿಗೆ ಹೆಚ್ಚು ವಿಶೇಷವೆನಿಸಿಕೊಳ್ಳಲಿದೆ. ಅದರಲ್ಲೂ ಪ್ರಮುಖವಾಗಿ ಕಾರು ಪ್ರಿಯರು ಕಾತರದಿಂದ ಕಾಯುತ್ತಿದ್ದ ಎರಡು ಎಕ್ಸ್‌ಕ್ಲೂಸಿವ್ ಆವೃತ್ತಿಗಳು ಈ ಸಂದರ್ಭದಲ್ಲಿ ಲಾಂಚ್ ಆಗಲಿವೆ.
ಹೌದು, ದೇಶದ ಕಾರು ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನಮಾನ ಕಾಪಾಡಿಕೊಂಡು ಬಂದಿರುವ ಟೊಯೊಟಾ ಈ ಹಬ್ಬದ ಆವೃತ್ತಿಯಲ್ಲಿ ಇಟಿಯೋಸ್ ಹಾಗೂ ಲಿವಾ ಎಕ್ಸ್‌ಕ್ಲೂಸಿವ್ ಎಡಿಷನ್‌ಗಳನ್ನು ಬಿಡುಗಡೆ ಮಾಡಲಿದೆ.
ನಿಮ್ಮ ಮಾಹಿತಿಗಾಗಿ, ಈ ಎಕ್ಸ್‌ಕ್ಲೂಸಿವ್ ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಕಾರುಗಳ 1000 ಯುನಿಟ್‌ಗಳಷ್ಟೇ ನಿರ್ಮಾಣವಾಗಲಿದ್ದು, ಹಾಗಾಗಿ ಗ್ರಾಹಕರು ತ್ವರೆ ಮಾಡಿಕೊಳ್ಳುವಂತೆ ಜಪಾನ್ ಮೂಲದ ಕಾರು ತಯಾರಕ ಸಂಸ್ಥೆಯಾದ ಟೊಯೊಟಾ ವಿನಂತಿಸಿಕೊಂಡಿದೆ.

ಎಕ್ಸ್‌ಕ್ಲೂಸಿವ್ ಎಡಿಷನ್
ಮಿಡ್ ರೇಂಜ್ ಜಿ ವೆರಿಯಂಟ್ ತಲಹದಿಯಲ್ಲಿ ವಿಶೇಷ ಇಟಿಯೋಸ್ ಹಾಗೂ ಲಿವಾ ಮಾಡೆಲ್ ತಯಾರಿಸಲಾಗಿದೆ. ಹಾಗಿದ್ದರೂ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದರ ಜತೆ ಫೈವ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಇಂಟಿರಿಯರ್
ಹಿಂದಿನ ಜಿ ವೆರಿಯಂಟ್ ಇಂಟಿರಿಯರ್ ಏಕಮಾತ್ರ ಬಣ್ಣಗಳಲ್ಲಿ ಲಭ್ಯವಾಗುತ್ತಿದ್ದರೆ ನೂತನ ಎಕ್ಸ್‌ಕ್ಲೂಸಿವ್ ಎಡಿಷನ್ ಡ್ಯುಯಲ್ ಟೋನ್ ಕ್ರೀಮ್ ಕಲರ್‌ನಿಂದ ಆಗಮನವಾಗಲಿದೆ.

ಎಕ್ಸ್‌ಕ್ಲೂಸಿವ್ ಬ್ಯಾಡ್ಜ್
ಎಲ್ಲ ಎಕ್ಸ್‌ಕ್ಲೂಸಿವ್ ಆವೃತ್ತಿಗಳನ್ನು ಸುಲಭವಾಗಿ ಗುರುತಿಸಿಕೊಳ್ಳಬಹುದಾಗಿದೆ. ಯಾಕೆಂದರೆ ಇದು ಎಕ್ಸ್‌ಕ್ಲೂಸಿವ್ ಬ್ಯಾಡ್ಜ್ ಪಡೆಯಲಿದೆ.

ವೈಶಿಷ್ಟ್ಯ
ನೂತನ ಎಕ್ಸ್‌ಕ್ಲೂಸಿವ್ ಎಡಿಷನ್ ಬ್ಲೂಟೂಟ್ ಆಡಿಯೋ ಸಿಸ್ಟಂ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸುಧಾರಿತ ಸಿಟ್ಟಿಂಗ್ ವ್ಯವಸ್ಥೆ ಹಾಗೂ ಇತರ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ದರ ಮಾಹಿತಿ - ಎಕ್ಸ್ ಶೋ ರೂಂ ದೆಹಲಿ
- ಲಿವಾ ಎಕ್ಸ್‌ಕ್ಲೂಸಿವ್ - ಪೆಟ್ರೋಲ್: ರು. 495,349
- ಲಿವಾ ಎಕ್ಸ್‌ಕ್ಲಾಸಿವ್ - ಡೀಸೆಲ್: ರು. 605,400
- ಇಟಿಯೋಸ್ ಎಕ್ಸ್‌ಕ್ಲೂಸಿವ್ - ಪೆಟ್ರೋಲ್: ರು. 605,900
- ಇಟಿಯೋಸ್ ಎಕ್ಸ್‌ಕ್ಲೂಸಿವ್ - ಡೀಸೆಲ್: ರು. 713,243


Click it and Unblock the Notifications








