2015ರಲ್ಲಿ ಟೊಯೊಟಾ ಹೈಡ್ರೋಜನ್ ಕಾರು ನಿರ್ಮಾಣ

By Nagaraja

ಕಳೆದ ವರ್ಷ ನಡೆದ ಟೊಕಿಯೋ ಮೋಟಾರ್ ಶೋದಲ್ಲಿ ಟೊಯೊಟಾ ಹೈಡ್ರೋಜನ್ ಮೊದಲ ಮಾದರಿ ಕಾರನ್ನು ಪ್ರದರ್ಶಿಸಲಾಗಿತ್ತು. ಪ್ರಸ್ತುತ ಫ್ಯೂಯೆಲ್ ಸೆಲೆ ವೆಹಿಕಲ್ (ಎಫ್‌ಸಿವಿ) ಕಾನ್ಸೆಪ್ಟ್ ಇದೀಗ ಉತ್ತರ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆದ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋದಲ್ಲೂ (CES 2014) ಪ್ರದರ್ಶನ ಕಂಡಿದೆ.

ಹ್ಯುಂಡೈನಿಂದ ಜಗತ್ತಿನ ಮೊದಲ ಹೈಡ್ರೋಜನ್ ಕಾರು

ಕಂಪನಿಯ ಪ್ರಕಾರ ಮೊದಲ ಉತ್ಪದನಾ ಮಾದರಿಯು 2015ನೇ ಸಾಲಿನಲ್ಲೇ ನಿರ್ಮಾಣವಾಗಲಿದೆ. ಇದು ವಾಹನ ಪ್ರಿಯರಲ್ಲಿ ಇನ್ನಷ್ಟು ಕುಕೂಹಲ ಕೆರಳಿಸಿದೆ. ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋದಲ್ಲಿ ಪ್ರದರ್ಶನ ಕಂಡಿರುವ ಈ ನಾಲ್ಕು ಬಾಗಿಲುಗಳ ಕಾನ್ಸೆಪ್ಟ್ ಸೆಡಾನ್ ಕಾರನ್ನು ಸಂಪೂರ್ಣ ಮರೆಯಾಚುವ ಮೂಲಕ ಟೊಯೊಟಾ ಸಂಸ್ಥೆಯು ನೋಡುಗರಲ್ಲಿ ಕುತೂಹಲ ಸೃಷ್ಟಿಸಿತ್ತು.

ಫ್ಯೂಯಲ್ ಸೆಲ್ ವೆಹಿಕಲ್

ಫ್ಯೂಯಲ್ ಸೆಲ್ ವೆಹಿಕಲ್

ನಿಮಗೆ ತಿಳಿದಿರುವಂತೆಯೇ ಟೊಯೊಟಾ ಫ್ಯೂಯೆಲ್ ಸೆಲ್ ವೆಹಿಕಲ್ ಹೈಡ್ರೋಜನ್ ಫ್ಯೂಯೆಲ್ ಸೆಲ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ವಾತಾವರಣದ ಜಲಜನಕ ಹಾಗೂ ಆಮ್ಲಜನಕ ಒಟ್ಟುಗೂಡಿಸಿ ಮೋಟಾರು ಚಲಾಯಿಸಲು ವಿದ್ಯುತ್ ಉತ್ಪಾದಿಸುತ್ತದೆ.

ಪರಸರ ಸ್ನೇಹಿ

ಪರಸರ ಸ್ನೇಹಿ

ಇದು ಸಂಪೂರ್ಣ ಪರಿಸರ ಸ್ನೇಹಿಯಾಗಿರಲಿದ್ದು, ಯಾವುದೇ ಹೊಗೆ (ಕಾರ್ಬನ್ ಡೈ ಓಕ್ಸೈಡ್) ಹೊರಸೂಸುವುದಿಲ್ಲ. ಅಂದರೆ ನೀರಾವಿ ಮಾತ್ರ ಹೊರಚೆಲ್ಲಲಿದೆ.

ಎಲೆಕ್ಟ್ರಿಕ್ ಕಾರಿಗಿಂತಲೂ ಉತ್ತಮ

ಎಲೆಕ್ಟ್ರಿಕ್ ಕಾರಿಗಿಂತಲೂ ಉತ್ತಮ

ಈ ಎಲ್ಲ ವಿಚಾರಗಳನ್ನು ತುಲನೆ ಮಾಡಿದಾಗ ಹೈಡ್ರೋಜನ್ ಸೆಲ್ ಕಾರುಗಳು, ಎಲೆಕ್ಟ್ರಿಕ್ ಕಾರುಗಿಂತಲೂ ಹೆಚ್ಚು ಹಸಿರು ಪ್ರೇಮಿ ಕಾರೆನಿಸಿಕೊಳ್ಳಲಿದೆ.

ವೇಗತೆ

ವೇಗತೆ

ಟೊಯೊಟಾ ಸಂಸ್ಥೆಯ ಪ್ರಕಾರ ಹೈಡ್ರೋಜನ್ ಫ್ಯೂಯೆಲ್ ಸೆಲ್ ವೆಹಿಕಲ್ ಸಂಪೂರ್ಣ ಟ್ಯಾಂಕ್‌ನಲ್ಲಿ 480 ಕೀ.ಮೀ. ವರೆಗೆ ಸಂಚರಿಸಬಹುದಾಗಿದೆ. ಹಾಗೆಯೇ ಕೇವಲ 10 ಸೆಕೆಂಡುಗಳಲ್ಲೇ ಗಂಟೆಗೆ 96 ಕೀ.ಮೀ. ವೇಗವರ್ಧಿಸಲಿದೆ.

ಕೆಲವೇ ನಿಮಿಷಗಳಲ್ಲಿ ರಿಚಾರ್ಜ್

ಕೆಲವೇ ನಿಮಿಷಗಳಲ್ಲಿ ರಿಚಾರ್ಜ್

ಇನ್ನೊಂದು ಮಹತ್ತರ ವೈಶಿಷ್ಟ್ಯವೆಂದರೆ ಎಫ್‌ಸಿವಿ ಕಾರುಗಳನ್ನು ಕೆಲವೇ ನಿಮಿಷಗಳಲ್ಲಿ ರಿಚಾರ್ಜ್ ಮಾಡಬಹುದಾಗಿದೆ. ಕೇವಲ 3ರಿಂದ 5 ಸೆಕೆಂಡುಗಳಲ್ಲಿ ಇದರ ಖಾಲಿ ಟ್ಯಾಂಕ್ ಭರ್ತಿ ಮಾಡಬಹುದಾಗಿದೆ. ಅಷ್ಟೇ ಯಾಕೆ ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಮನೆಯ ಅಗತ್ಯಗಳಿಗೂ ಬಳಕೆ ಮಾಡಬಹುದಾಗಿದೆ.

ಕಡಿಮೆ ನಿರ್ಮಾಣ ವೆಚ್ಚ

ಕಡಿಮೆ ನಿರ್ಮಾಣ ವೆಚ್ಚ

ಅಂತಿಮವಾಗಿ ನಿರ್ಮಾಣ ವೆಚ್ಚ ಕೂಡಾ ಅತಿ ಕಡಿಮೆಯಾಗಿರಲಿದೆ. ಈ ಎಲ್ಲ ವಿಚಾರಗಳು ಭವಿಷ್ಯದ ಸಂಚಾರ ವಾಹನದ ದೃಷ್ಟಿಕೋನದಲ್ಲಿ ಎಫ್‌ಸಿವಿ ಕ್ರಾಂತ್ರಿಕಾರಿ ಬದಲಾವಣೆಗೆ ಕಾರಣವಾಗುವ ನಿರೀಕ್ಷೆಯಿದೆ.

Most Read Articles
 
English summary
Toyota Fuel Cell Vehicle (FCV) concept, a hydrogen prototype car made its debut at the Tokyo Motor Show last year.
Please Wait while comments are loading...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X