ಕಾರೇ ಸ್ಮಾರ್ಟ್ ಆದಾಗ - ಸ್ಮಾರ್ಟ್ ಫೋನ್ ಕಾರು
ವಿಶ್ವದೆಲ್ಲಡೆಯ ಕಾರು ಸಂಶೋಧಕರು ಭವಿಷ್ಯದ ಕಾರು ಪರಿಕಲ್ಪನೆ ಅಭಿವೃದ್ಧಿಪಡಿಸುವುದರಲ್ಲಿ ಮಗ್ನರಾಗಿರುತ್ತಾರೆ. ಎಂಜಿನಿಯರ್‌ಗಳ ಇಂತಹ ಕಠಿಣ ಪ್ರಯತ್ನದ ಫಲವಾಗಿ ಹೊಸದಾಗಿ ಬರುವ ಕಾರುಗಳಿಗೆ ನೂತನ ಕಾನ್ಸೆಪ್ಟ್‌ಗಳು ಆಳವಡಿಕೆಯಾಗುತ್ತದೆ.
ಆದರೆ ಕೆಲವೊಂದು ಕಾರು ಪರಿಕಲ್ಪನೆಗಳನ್ನು ಸಾಮಾನ್ಯ ಜನರಿಂದ ಊಹಿಸಲು ಸಾಧ್ಯವಿಲ್ಲ. ಉದಾಹರಣೆಗೆ ನಾವಿಂದು ಸ್ಮಾರ್ಟ್ ಫೋನ್ ಕಾನ್ಸೆಪ್ಟ್ ಕಾರನ್ನು ಪರಿಚಯಿಸಲಿದ್ದೇವೆ. ಖಂಡಿತವಾಗಿಯೂ ಇದು ನಿಮ್ಮ ಪಾಲಿಗೆ ಹೊಸತನವನ್ನು ತರಲಿದೆ.
ತಂತ್ರಜ್ಞಾನ ಎಷ್ಟು ಅಭಿವೃದ್ಧಿ ಪಡೆಯುತ್ತಿದೆ ಎಂಬುದಕ್ಕೆ ಇಂದೊಂದು ನಿದರ್ಶನವಾಗಿದೆ. 2012ನೇ ಸಾಲಿನಲ್ಲಿ ಸಾಗಿದ ಟೊಯೊಟಾ ಮೋಟಾರ್ ಶೋದಲ್ಲಿ ಟೊಯೊಟಾ ಫನ್ ವಿಐಐ (Toyota Fun Vii) ಸ್ಮಾರ್ಟ್ ಫೋನ್ ಕಾರು ಪ್ರದರ್ಶನಗೊಂಡಿತ್ತು. ಇದರಲ್ಲಿ ಸ್ಮಾರ್ಟ್ ಫೋನ್ ಫೀಚರ್‌ಗಳನ್ನು ಕಾರಿಗೆ ಆಳವಡಿಸುವುದು ಎಂಜಿನಿಯರ್‌ಗಳ ಗುರಿಯಾಗಿತ್ತು.
ಹಾಗಿದ್ದರೆ ಬನ್ನಿ ಸ್ಮಾರ್ಟ್ ಫೋನ್ ಕಾರಿನ ಬಗೆಗಿನ ಕೆಲವೊಂದು ಕುತೂಹಲಕಾರಿ ಅಂಶಗಳನ್ನು ನಾವೀಗ ಬಹಿರಂಗಪಡಿಸಲಿದ್ದೇವೆ.

The Smart Phone Car
ಟೊಯೊಟಾ ಅಭಿವೃದ್ಧಪಡಿಸುತ್ತಿರುವ Fun Vii ಕಾರಿನಲ್ಲಿ ಸ್ಮಾರ್ಟ್ ಫೋನ್‌ನ ಆಧುನಿಕ ತಂತ್ರಜ್ಞಾನಗಳನ್ನು ಆಳವಡಿಸಲು ಪ್ರಯತ್ನಿಸಲಾಗುತ್ತಿದೆ.

The Smart Phone Car
ಸ್ಮಾರ್ಟ್ ಫೋನ್ ತರಹನೇ ಕಾರಿನ ಬಾಡಿಯನ್ನು ಬದಲಾಯಿಸಲಾಗಿದೆ. ಹಾಗೆಯೇ ಕಾರು ವಿನ್ಯಾಸ ಕೂಡಾ ಸ್ಮಾರ್ಟ್ ಫೋನ್‌ಗೆ ಹೊಂದಿಕೆಯಾಗುತ್ತಿದೆ.

The Smart Phone Car
ಇದಕ್ಕಾಗಿಯೇ ಟೊಯೊಟಾ ಬಾಸ್ ಅಕಿಯೊ ಟೊಟೊಡಾ ಇದನ್ನು 'ಸ್ಮಾರ್ಟ್ ಫೋನ್ ಆನ್ ವೀಲ್ಸ್' ಎಂದು ಬಣ್ಣಿಸಿದ್ದಾರೆ.

The Smart Phone Car
ಟೊಯೊಟಾ ಫನ್ Vii ಎಲೆಕ್ಟ್ರಿಕ್ ಕಾರು ಆಗಿದ್ದರಿಂದ ಪರಿಸರ ಸ್ನೇಹಿ ಕೂಡಾ ಆಗಿರಲಿದೆ. ಹಾಗೆಯೇ ವೈರ್‌ಲೆಸ್ ತಂತ್ರಜ್ಞಾನದ ಮೂಲಕ ರಿ ಚಾರ್ಜ್ ಕೂಡಾ ಮಾಡಬಹುದಾಗಿದೆ.

The Smart Phone Car
ಒಟ್ಟು ಮೂರು ಮಂದಿಗೆ ಕುಳಿತುಕೊಳ್ಳುವ ಸಿಟ್ಟಿಂಗ್ ವ್ಯವಸ್ಥೆಯನ್ನು ಈ ಸ್ಮಾರ್ಟ್ ಫೋನ್ ಕಾರು ಹೊಂದಿದೆ.

The Smart Phone Car
ಟೊಯೊಟಾ ಸ್ಮಾರ್ಟ್ ಫೋನ್ ಕಾರಿನ ಇಂಟಿರಿಯರ್ ಭಾಗಗಳಲ್ಲೂ ಟಚ್ ಸ್ಕ್ರೀನ್ ಆಳವಡಿಸಲಾಗಿದೆ. ಇದರ ಮುಖಾಂತರ ನೀವು ಬಯಸಿದ್ದೇ ಆದ್ದಲ್ಲಿ ಕಾರಿನ ಬಣ್ಣ ಕೂಡಾ ಬದಲಾಯಿಸಬಹುದು. ಹಾಗೆಯೇ ಸೋಷಿಯಲ್ ಮೀಡಿಯಾ ಟೂಲ್ಸ್ ಬಳಕೆ ಮಾಡುವ ಮೂಲಕ ಸಂವಹನ ಮಾಡಬಹುದಾಗಿದೆ.

The Smart Phone Car
ಅಂದ ಹಾಗೆ ಸದ್ಯದಲ್ಲೇ ಈ ಸ್ಮಾರ್ಟ್ ಫೋನ್ ಕಾರು ನನಸಾಗಲಿದೆಯೇ ಎಂಬುದಕ್ಕೆ ಟೊಯೊಟಾದಿಂದ ಸ್ಪಷ್ಟ ಉತ್ತರ ಬಂದಿಲ್ಲ.

The Smart Phone Car
ಹಾಗೆಯೇ ಪ್ರಸ್ತುತ ಶತಮಾನದ ಯಾವುದೇ ಹಂತದಲ್ಲಾದರೂ ಈ ಕಾರನ್ನು ತಯಾರಿಸಬಹುದಾಗಿದೆ ಎಂದು ಟೊಯೊಟಾ ಹೇಳಿಕೊಂಡಿದೆ.

The Smart Phone Car
ನಿಮ್ಮ ಸ್ಮಾರ್ಟ್ ಫೋನ್ ಮುಖಾಂತರವಾಗಿಯೂ ಈ ಟೊಯೊಟಾ ಫನ್ Vii ಕಾರಿನ ಬಣ್ಣವನ್ನು ನೀವು ಆಯ್ಕೆ ಮಾಡಬಹುದಾಗಿದೆ.

The Smart Phone Car
ಖಂಡಿತವಾಗಿಯೂ ತಂತ್ರಜ್ಞಾನದಲ್ಲಿ ನೂತನ ಆವಿಷ್ಕಾರಗಳನ್ನು ಇಷ್ಟಪಡುವ ಗ್ರಾಹಕರಿಗೆ ಇದು ಹೊಸತನವನ್ನು ನೀಡಲಿದೆ.

The Smart Phone Car
ಕಾರೇ ಸ್ಮಾರ್ಟ್ ಆದಾಗ

The Smart Phone Car
ಕಾರೇ ಸ್ಮಾರ್ಟ್ ಆದಾಗ

The Smart Phone Car
ಒಟ್ಟಿನಲ್ಲಿ ಇದು ಭವಿಷ್ಯದ ಕಾರುಗಳ ಪರಿಕಲ್ಪನೆ ಆಗಿದ್ದಲ್ಲಿ ಆಟೋಮೊಬೈಲ್ ಜಗತ್ತಿನ ಅಸ್ತಿತ್ವಕ್ಕೆ ಮಾರಕವಾಗುವ ಭೀತಿ ಕಾಡುತ್ತಿದೆ. ಅಂದ ಹಾಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ಮೂಲಕ ಚರ್ಚಿಸಿರಿ...


Click it and Unblock the Notifications








