ಟೊಯೊಟಾ ಇನ್ನೋವಾ ಪರಿಷ್ಕತ ಆವೃತ್ತಿ ಸದ್ಯದಲ್ಲೇ ಲಾಂಚ್
ಇತ್ತೀಚೆಗಷ್ಟೇ ಇಂಡೋನೇಷ್ಯಾ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ ಟೊಯೊಟಾ ಇನ್ನೋವಾ ಮಲ್ಟಿ ಪರ್ಪಸ್ ವೆಹಿಕಲ್ (ಎಂಪಿವಿ) ಫೇಸ್‌ಲಿಫ್ಟ್ ವರ್ಷನ್ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಬಲ್ಲ ಮೂಲಗಳ ಪ್ರಕಾರ ನೂತನ ಇನ್ನೋವಾ ಹಬ್ಬದ ಸೀಸನ್ ಮುಂಚಿತವಾಗಿ ಅಂದರೆ ಇದೇ ಸೆಪ್ಟೆಂಬರ್‌ನಲ್ಲಿ ಲಾಂಚ್ ಆಗುವ ಸಾಧ್ಯತೆಗಳಿವೆ.
2005ನೇ ಇಸವಿಯಲ್ಲಿ ಭಾರತ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ ಟೊಯೊಟಾ ಇನ್ನೋವಾ ಈಗಲೂ ದೇಶದಲ್ಲಿ ಉತ್ತಮ ಮಾರುಕಟ್ಟೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬಹುತೇಕ ಒಂದು ದಶಕ ಪೂರೈಸುತ್ತಿರುವ ಇನ್ನೋವಾ ಇದೀಗ ಮೂರನೇ ಬಾರಿಗೆ ಫೇಸ್‌ಲಿಫ್ಟ್ ವರ್ಷನ್ ಪರಿಚಯಿಸಲು ಸಿದ್ಧವಾಗಿದೆ.

ವಿನ್ಯಾಸ
ನೂತನ ಇನ್ನೋವಾ ಮುಂಭಾಗದ ವಿನ್ಯಾಸದಲ್ಲಿ ಬದಲಾವಣೆಗಳನ್ನು ನೀವು ನೋಡಬಹುದು. ಕಾರಿನ ಎದುರುಗಡೆ ದೊಡ್ಡದಾದ ಫ್ರಂಟ್ ಗ್ರಿಲ್ ಪಡೆದುಕೊಂಡಿದ್ದು, ಹಿಂಭಾಗದಲ್ಲೂ ಆಕರ್ಷಕ ಲುಕ್ ನೀಡಲಾಗಿದೆ.

ಎಂಜಿನ್
ಇಂಡೋನೇಷ್ಯಾ ಆವೃತ್ತಿಯಲ್ಲಿ ಇನ್ನೋವಾ ಫೇಸ್‌ಲಿಫ್ಟ್ 2.0 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಗರಿಷ್ಠ 136 ಬಿಎಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಹಿಂದಿನ ಆವೃತ್ತಿಯಲ್ಲಿರುವ 2.5 ಲೀಟರ್ ಡೈರಕ್ಟ್ ಇಂಜೆಕ್ಷನ್ ಡೀಸೆಲ್ ಎಂಜಿನ್ ಆಳವಡಿಸಲಾಗುತ್ತಿದೆ.

ಲಾಂಚ್ ದಿನಾಂಕ
ಟೊಯೊಟಾ ಇನ್ನೋವಾ ಫೇಸ್‌ಲಿಫ್ಟ್ ವರ್ಷನ್ ಲಾಂಚ್ ಅಧಿಕೃತ ದಿನಾಂಕ ಇನ್ನು ಬಿಡುಗಡೆಗೊಂಡಿಲ್ಲ. ಹಾಗಿದ್ದರೂ ಸದ್ಯದಲ್ಲೇ ಈ ಬಗ್ಗೆ ಮಾಹಿತಿ ದೊರಕಲಿದೆ.

ದರ ಮಾಹಿತಿ
ಸದ್ಯ ಮಾರುಕಟ್ಟೆಯಲ್ಲಿ 11 ಲಕ್ಷ ರು.ಗಳ ಅಸುಪಾಸಿನಲ್ಲಿ ಇನ್ನೋವಾ ಮಾಡೆಲ್ ಲಭ್ಯವಿದ್ದು, ಇದೀಗ ಆಗಮನವಾಗಲಿರುವ ನೂತನ ಫೇಸ್‌ಲಿಫ್ಟ್ ವರ್ಷನ್ 25,000 ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಗಳಿವೆ.

ಮೂರನೇ ಬಾರಿಗೆ ಫೇಸ್‌ಲಿಫ್ಟ್
2005ರಲ್ಲಿ ಲಾಂಚ್ ಆಗಿದ್ದ ಇನ್ನೋವಾದ ಅಪ್‌ಗ್ರೇಡ್ ವರ್ಷನ್ 2009 ಹಾಗೂ 2011ರಲ್ಲಿ ಲಾಂಚ್ ಆಗಿದ್ದವು. ಇದೀಗ ಮೂರನೇ ಬಾರಿಗೆ ಫೇಸ್‌ಲಿಫ್ಟ್ ವರ್ಷನ್ ಪಡೆದುಕೊಳ್ಳುತ್ತಿದೆ. ಈ ಮುಖಾಂತರ ಉತ್ತಮ ಮಾರುಕಟ್ಟೆ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ.

2016ರಲ್ಲಿ ಆಲ್ ನ್ಯೂ ಇನ್ನೋವಾ
ಅಂದ ಹಾಗೆ ಆಲ್ ನ್ಯೂ ಇನ್ನೋವಾ ಕಾರು 2016ನೇ ಇಸವಿಯಲ್ಲಿ ಲಾಂಚ್ ಆಗಲಿದೆ. ಅಲ್ಲಿಯ ವರೆಗೆ ನೂತನ ಫೇಸ್‌ಲಿಫ್ಟ್ ವರ್ಷನ್‌ನೊಂದಿಗೆ ಆವೇಗ ಕಾಯ್ದುಕೊಳ್ಳುವ ಯೋಜನೆಯಲ್ಲಿದೆ.

ನೂತನ 'ಝಡ್' ವೆರಿಯಂಟ್
ಇನ್ನೋವಾ ಫೇಸ್‌ಲಿಫ್ಟ್ ವರ್ಷನ್‌ನಲ್ಲಿ ನೂತನ ಝಡ್ ವರ್ಷನ್ ಪರಿಚಯಿಸುವ ಸಾಧ್ಯತೆಯಿದೆ. ನೂತನ ಝಡ್ ವೆರಿಯಂಟ್ ಲೆಥರ್ ಸೀಟ್ ಸಹಿತ ಇನ್ನಿತರ ಹೆಚ್ಚಿನ ಇಂಟಿರಿಯರ್ ಫೀಚರ್ಸ್ ಪಡೆದುಕೊಳ್ಳುವ ಸಾಧ್ಯತೆಯಿದೆ.

ಹೊಸ ಇನ್ನೋವಾ ವೆರಿಯಂಟ್ ಇಂತಿರಲಿದೆ:
*ಇನ್ನೋವಾ ಜಿ ವೆರಿಯಂಟ್ (7 ಮತ್ತು 8 ಸೀಟು)
* ಇನ್ನೋವಾ ಜಿಎಕ್ಸ್ ವೆರಿಯಂಟ್ (7 ಮತ್ತು 8 ಸೀಟು)
* ಇನ್ನೋವಾ ವಿಎಕ್ಸ್ ವೆರಿಯಂಟ್ (7 ಮತ್ತು 8 ಸೀಟು)
* ಇನ್ನೋವಾ ಝಡ್ ವೆರಿಯಂಟ್ (ನೂತನ ವರ್ಷನ್)


Click it and Unblock the Notifications








