2013 ಎಸ್‌ಯುವಿ, ಲಗ್ಷುರಿ ಕಾರುಗಳ ಪಟ್ಟಿ
2013ನೇ ಸಾಲಿನಲ್ಲಿ ನೀವು ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಅಥವಾ ಲಗ್ಷುರಿ ಕಾರುಗಳನ್ನು ಖರೀದಿಸಲು ಯೋಜನೆ ಹಾಕಿಕೊಂಡಿದ್ದೀರಾ? ಹಾಗಿದ್ದರೆ ಕನ್ನಡ ಡ್ರೈವ್ ಸ್ಪಾರ್ಕ್ ಈ ಬಗ್ಗೆ ಮಾಹಿತಿಯನ್ನು ಕೊಡಲಿದೆ.
ಆಟೋಮೊಬೈಲ್ ರಂಗದಲ್ಲಿ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯುವಿ ಹಾಗೂ ಲಗ್ಷುರಿ ಕಾರುಗಳಿಗೆ ಭಾರಿ ಬೇಡಿಕೆಯಿದೆ. ಕೆಲವು ದಿನಗಳ ಹಿಂದೆಯಷ್ಟೇ ನಾವು 2013ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವ ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಕಾರುಗಳ ಬಗ್ಗೆ ಮಾಹಿತಿ ಕೊಟ್ಟಿದ್ದೆವು. ಅದಕ್ಕಾಗಿ ಇಲ್ಲಿ ಕ್ಲಿಕ್ಕಿಸಿ. ಇದೀಗ ಈ ಲೇಖದಲ್ಲಿ ಬಹುನಿರೀಕ್ಷಿತ ಎಸ್‌ಯುವಿ ಹಾಗೂ ಲಗ್ಷುರಿ ಕಾರುಗಳತ್ತ ನಿಗಾ ವಹಿಸಲಿದ್ದೇವೆ.
ದೇಶದ ಮಾರುಕಟ್ಟೆಯಲ್ಲಿ ಸಣ್ಣ ಹಾಗೂ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಬೇಡಿಕೆ ಹೆಚ್ಚಿರಬಹುದು. ಆದರೆ ಎಸ್‌ಯುವಿ ಕಾರುಗಳು ತನ್ನದೇ ಆದ ಸ್ಥಾನಮಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ 2012 ಸಾಲಿನಲ್ಲಿ ಪ್ರೀಮಿಯಂ ಕಾರುಗಳ ಬೇಡಿಕೆ ಹೆಚ್ಚಳಗೊಂಡಿರುವುದು ಸ್ಪಷ್ಟ ಸೂಚನೆಯಾಗಿದೆ.

2013 ಎಸ್‌ಯುವಿ, ಲಗ್ಷುರಿ ಕಾರುಗಳ ಪಟ್ಟಿ
2013ನೇ ಸಾಲಿನ ಎಸ್‌ಯುವಿ, ಲಗ್ಷುರಿ ಕಾರುಗಳ ಪಟ್ಟಿಗಾಗಿ ಫೋಟೊ ಫೀಚರ್ ಕ್ಲಿಕ್ಕಿಸುತ್ತಾ ಸಾಗಿರಿ...

ಆಡಿ ಎಸ್5
ದೇಶದ ಮಾರುಕಟ್ಟೆಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಮಾರಾಟದಲ್ಲಿ ಭಾರಿ ಪ್ರಗತಿ ಸಾಧಿಸಿದ್ದ ಜರ್ಮನಿ ಕಾರು ತಯಾರಕ ಸಂಸ್ಥೆಯಾದ ಆಡಿಯಿಂದ ವಿನೂತನ ಎಸ್5 ಸ್ಪೋರ್ಟ್ಸ್ ಸೆಡಾನ್ ಕಾರು ಬಿಡುಗಡೆಗೊಳ್ಳಲಿದೆ. ಆಡಿ ಕ್ವಾಟ್ರೊ ಫೋರ್ ವೀಲ್ ಡ್ರೈವ್ ಸಿಸ್ಟಿಂನಲ್ಲಿ ಎಸ್5 ಕಾಣಿಸಿಕೊಂಡಿದೆ.
ನಿರೀಕ್ಷಿತ ದರ: 55 ಲಕ್ಷ ರು.
ಫೋರ್ಸ್ ಗುರ್ಖಾ
ಫೋರ್ಸ್ ಮೋಟಾರ್ಸ್ ನೂತನ ಎಸ್‌ಯುವಿ ಕಾರಾದ ಗುರ್ಖಾ ಅನ್ನು ಇದೇ ಸಾಲಿನಲ್ಲಿ ಲಾಂಚ್ ಮಾಡಲಿದೆ. ತ್ರಿ ಡೋರ್ ಎಸ್‌ಯುವಿ ಕಾರಾದ ಗುರ್ಖಾ 2.8 ಲೀಟರ್ ಡಿಐ ಎಫ್‌ಟಿಐ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ನೂತನ ಫೋರ್ಸ್ ಗುರ್ಖಾ ಆಕರ್ಷಕ ಇಂಟಿರಿಯರ್ ಜತೆ ಉತ್ತಮ ನಿರ್ವಹಣೆಯನ್ನು ಪಡೆಯಲಿದೆ. ಸದ್ಯ ಬಂದಿರುವ ಮಾಹಿತಿ ಪ್ರಕಾರ 2013ನೇ ಸಾಲಿನ ಮೊದಲಾರ್ಧದಲ್ಲಿ ಫೋರ್ಸ್ ಗುರ್ಖಾ ಬಿಡುಗಡೆಯಾಗಲಿದೆ.
ನಿರೀಕ್ಷಿತ ದರ: 9 ಲಕ್ಷ ರು.
ಫೋರ್ಸ್ ಎಂಪಿವಿ
ಮರ್ಸಿಡಿಸ್ ಬೆಂಝ್ ಜತೆ ದೀರ್ಘಕಾಲದ ಜತೆಗಾರಿಕೆ ಹೊಂದಿರುವ ಫೋರ್ಸ್ ಮೋಟಾರ್ಸ್ ಬೆಂಝ್ ವಿಯಾನೊ ತಲಹದಿಯಲ್ಲಿ ಸದ್ಯದಲ್ಲೇ ಎಂಪಿವಿ ಕಾರನ್ನು ಲಾಂಚ್ ಮಾಡಲಿದೆ. ಹಾಗಿದ್ದರೂ ಫೋರ್ಸ್ ಎಂಪಿವಿ ಹೆಸರು ಇನ್ನು ಅಧಿಕೃತಗೊಂಡಿಲ್ಲ. ಹಾಗೆಯೇ ಸದ್ಯಕ್ಕೆ ದರದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.

ಫೋರ್ಡ್ ಇಕೊಸ್ಪೋರ್ಟ್
ಚೆನ್ನೈನ ಘಟದಲ್ಲಿ ಉತ್ಪಾದನೆಯಾಗುತ್ತಿರುವ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ದೇಶದ ಗ್ರಾಹಕರು ಕಾತರದಿಂದ ಕಾಯುತ್ತಿದ್ದಾರೆ. ಈ ಬಹುನಿರೀಕ್ಷಿತ ಕಾಂಪಾಕ್ಟ್ ಎಸ್‌ಯುವಿ 2013ನೇ ಸಾಲಿನ ಮೊದಲಾರ್ಧದಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಫೋರ್ಡ್ ಇಕೊ-ಬೂಸ್ಟ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಪ್ರಸ್ತುತ ಕಾರು ಉತ್ತಮ ನಿರ್ವಹಣೆಯನ್ನು ಖಾತ್ರಿಪಡಿಸುತ್ತಿದೆ. ಹಾಗೆಯೇ 2012ರಲ್ಲಿ ದೇಶದ ಭಾರಿ ಸದ್ದು ಮಾಡಿದ್ದ ರೆನೊ ಡಸ್ಟರ್ ಹಾಗೂ ಮಹೀಂದ್ರ ಕ್ವಾಂಟೊಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ.
ನಿರೀಕ್ಷಿತ ದರ: 9 ಲಕ್ಷ ರು.
ಹ್ಯುಂಡೈ ಹೆಕ್ಸಾಸ್ಪೇಸ್
2012ರ ದೆಹಲಿ ಆಟೋ ಶೋದಲ್ಲಿಯೇ ಹ್ಯುಂಡೈ ಹೆಕ್ಸಾಸ್ಪೇಸ್ ವಾಹನವನ್ನು ಅನಾವರಣಗೊಳಿಸಲಾಗಿತ್ತು. ದೇಶದ ಎಸ್‌ಯುವಿ ಬೇಡಿಕೆಯನ್ನು ಪರಿಗಣಿಸಿ ಹ್ಯುಂಡೈ ಹೆಕ್ಸಾಸ್ಪೇಸ್ ಸದ್ಯದಲ್ಲೇ ಮಾರುಕಟ್ಟೆಗೆ ಆಗಮಿಸಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಸದ್ಯಕ್ಕೆ ಹೆಕ್ಸಾಸ್ಪೇಸ್ ದರದ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಜಾಗ್ವಾರ್ ಎಫ್-ಟೈಪ್
ಸ್ಪೋರ್ಟ್ಸ್ ಕಾರುಗಳು ಉತ್ತಮ ನಿರ್ವಹಣೆ ನೀಡಲಿದೆ ಎಂಬುದನ್ನು ಜಾಗ್ವಾರ್ ಸಾಬೀತುಪಡಿಸಿತ್ತು. ಅದೇ ರೀತಿ ಎಫ್-ಟೈಪ್ ಜಾಗ್ವಾರ್ ಕಾರು ಇದೇ ಸಾಲಿನಲ್ಲಿ ದೇಶದ ರಸ್ತೆಗಿಳಿಯುವ ನಿರೀಕ್ಷೆಯಿದೆ.
ನಿರೀಕ್ಷಿತ ದರ: 70 ಲಕ್ಷ ರು.

ಜೀಪ್ ಗ್ರಾಂಡ್
ಗ್ರಾಂಡ್ ಕೆರೆಕೊ ಮೂಲಕ ಕೆರೊಕೆ ಜೀಪ್ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶಿಸಲಿದೆ. ಎಲ್ಲ ಎಸ್‍ಯುವಿಗಳ ತಾಯಿ ಎಂದು ಪರಿಗಣಿಸಲ್ಪಟ್ಟಿರುವ ಗ್ರಾಂಡ್ ಕೆರೊಕೆ ಪ್ರೀಮಿಯಂ ಫೀಚರ್‌ಗಳನ್ನು ಹೊಂದಿರಲಿದೆ.
ನಿರೀಕ್ಷಿತ ದರ: 25-30 ಲಕ್ಷ ರು.

ಮಾರುತಿ ಸುಜುಕಿ ಎಕ್ಸ್‌ಎ ಅಲ್ಫಾ
ದೇಶದ ಜನಪ್ರಿಯ ಕಾರು ತಯಾರಕರಾದ ಮಾರುತಿ ಸುಜುಕಿಯ ಎಸ್‌ಯುವಿ ಕಾರು ಮಾರುಕಟ್ಟೆಗೆ ಅಪ್ಪಳಿಸಲು ಸಜ್ಜಾಗಿ ನಿಂತಿದೆ. 2012 ದೆಹಲಿ ಆಟೋ ಶೋದಲ್ಲಿ ಮಾರುತಿಯ ಮೊದಲ ಕಾಂಪಾಕ್ಟ್ ಎಸ್‌ಯುವಿ ಅನಾವರಣಗೊಂಡಿತ್ತು. ಕೆಲವು ಮೂಲಗಳ ಪ್ರಕಾರ್ ಎಸ್‌ಯುವಿ ಕಾರಿನ ಬೇಡಿಕೆಯನ್ನು ಪರಿಗಣಿಸಿ ಮಾರುತಿ ಇದೇ ಸಾಲಿನಲ್ಲಿ ಎಕ್ಸ್‌ಎ ಅಲ್ಫಾ ಉತ್ಪಾದನೆಯನ್ನು ಆರಂಭಿಸಲಿದೆ. ಸದ್ಯ ಈ ಬಹುನಿರೀಕ್ಷಿತ ಕಾರಿಗಾಗಿ ಕಾಯಬೇಕಾಗಿದೆ.
ನಿರೀಕ್ಷಿತ ದರ: 9 ಲಕ್ಷ ರು.

ಮರ್ಸಿಡಿಸ್ ಬೆಂಝ್ ಎ ಕ್ಲಾಸ್
ದೇಶದ ಮಾರುಕಟ್ಟೆಯಲ್ಲಿ ಆಡಿ ಹಾಗೂ ಬಿಎಂಡಬ್ಲ್ಯು ಬಳಿಕ ಮೂರನೇ ಸ್ಥಾನಕ್ಕೆ ಕುಸಿದಿದ್ದ ಮರ್ಸಿಡಿಸ್ ಬೆಂಝ್, ಎ-ಕ್ಲಾಸ್ ಪ್ರೀಮಿಯಂ ಕಾರು ಮೂಲಕ ತಿರುಗೇಟು ನೀಡುವ ಭರವಸೆಯನ್ನು ಹೊಂದಿದೆ.
ನಿರೀಕ್ಷಿತ ದರ: 15-20 ಲಕ್ಷ ರು.
ನಿಸ್ಸಾನ್ ಡಸ್ಟರ್ ಕ್ಲೋನ್
ರೆನೊ ಡಸ್ಟರ್ ಯಶಸ್ಸಿನ ಬಳಿಕವೀಗ ನಿಸ್ಸಾನ್ ಕೂಡಾ ಡಸ್ಟರ್ ಕ್ಲೋನ್ ಮೂಲಕ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯಿದೆ. ವಿನ್ಯಾಸದಲ್ಲಿ ಡಸ್ಟರ್ ಕಾರನ್ನೇ ಹೋಲುವ ನಿಸ್ಸಾನ್ ಡಸ್ಟರ್ ಕ್ಲೋನ್ 2013 ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.
ನಿರೀಕ್ಷಿತ ದರ: 9 ಲಕ್ಷ

ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ
ಜರ್ಮನಿಯ ಕಾರು ತಯಾರಕ ಸಂಸ್ಥೆಯಾದ ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ಕಾರನ್ನು ಯುರೋಪ್‌ನಲ್ಲಿ ಬಿಡುಗಡೆಗೊಳಿಸಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಪೊಲೊ ದರದ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ.

ವೊಲ್ವೊ ವಿ40 ವೊಲ್ವೊ
ವಿ40 ಕ್ರಾಸೋವರ್ ಲಾಂಚ್ ಮೂಲಕ ದೇಶದ ಪ್ರೀಮಿಯಂ ಮಾರುಕಟ್ಟೆಗೆ ವೊಲ್ವೊ ಅಪ್ಪಳಿಸಲಿದೆ. ಇದು ಬಿಎಂಡಬ್ಲ್ಯು 1 ಸಿರೀಸ್, ಆಡಿ ಎ3 ಹಾಗೂ ಮರ್ಸಿಡಿಸ್ ಎ-ಕ್ಲಾಸ್ ಬ್ರಾಂಡ್‌ಗಳಿಗೆ ಪೈಪೋಟಿ ನೀಡಲಿದೆ.
ನಿರೀಕ್ಷಿತ ದರ: 25 ಲಕ್ಷ ರು.


Click it and Unblock the Notifications








