ಆಫ್ ರೋಡ್ ಸ್ಪರ್ಶ ಪಡೆದ ಫೋಕ್ಸ್‌ವ್ಯಾಗನ್ ಬೀಟ್ಲ್
ಐಕಾನಿಕ್ ಫೋಕ್ಸ್‌ವ್ಯಾಗನ್ ಬೀಟ್ಲ್ ಕಾರು ಮಗದೊಮ್ಮೆ ಆಫ್ ರೋಡ್ ಸ್ಪರ್ಶ ಪಡೆದಿದೆ. ಹೌದು, ಪ್ರಖ್ಯಾತ 2014 ಡೆಟ್ರಾಯ್ಟ್ ಮೋಟಾರ್ ಶೋದಲ್ಲಿ ಫೋಕ್ಸ್‌ವ್ಯಾಗನ್ ಐಷಾರಾಮಿ ಬೀಟ್ಲ್ ಆಫ್ ರೋಡ್ ಡ್ಯೂನ್ ಕಾನ್ಸೆಪ್ಟ್ ಪ್ರದರ್ಶನಗೊಂಡಿದೆ.
ಹಿಂದೆ 2000ನೇ ಇಸವಿಯಲ್ಲೂ ಬೀಟ್ಲ್ ಡ್ಯೂನ್ ಕಾನ್ಸೆಪ್ಟ್ ಪ್ರದರ್ಶಿಸಲಾಗಿತ್ತು. ಇದು ದೊಡ್ಡದಾದ ಆಫ ರೋಡ್ ಚಕ್ರ, ಸ್ಕಿಡ್ ಪ್ಲೇಟ್ ಮತ್ತು ಸೈಡ್ ಸಿಲ್ಸ್ ಪಡೆದಿತ್ತು. ಇಲ್ಲಿ ಮರುಭೂಮಿಯಂತಹ ಒರಟಾದ ರಸ್ತೆಗಳಲ್ಲೂ ಫೋಕ್ಸ್‌ವ್ಯಾಗನ್ ಬೀಟ್ಲ್ ಆಫರ್ ರೋಡ್ ಗಾಡಿಯಾಗಿ ಪರಿವರ್ತಿಸುವ ಪ್ರಯಾಣಿಕ ಪ್ರಯತ್ನ ಮಾಡಲಾಗಿತ್ತು.

ಇದೀಗ ಜರ್ಮನಿಯ ಈ ವಾಹನ ತಯಾರಕ ಸಂಸ್ಥೆಯು ಮಗದೊಮ್ಮೆ ಡ್ಯೂನ್ ಕಾನ್ಸೆಪ್ಟ್ ತಲಹದಿಯ ಲೇಟೆಸ್ಟ್ ವರ್ಷನ್ ಪರಿಚಯಿಸಿದೆ. ಇದಕ್ಕೆ ಸಂಬಂಧಿಸಿದ ಎಕ್ಸ್‌ಕ್ಲೂಸಿವ್ ಚಿತ್ರಗಳನ್ನು ಬಿಡುಗಡೆಗೊಳಿಸುವ ಮೂಲಕ ಫೋಕ್ಸ್‌ವ್ಯಾಗನ್ ವಾಹನ ಪ್ರಿಯರಲ್ಲಿ ಕುತೂಹಲ ಇಮ್ಮಡಿಗೊಳಿಸಿದೆ.

ನೂತನ ಫೋಕ್ಸ್‌ವ್ಯಾಗನ್ ಕಾರಿನಲ್ಲಿ ಆಕ್ರಮಣಕಾರಿ ವಿನ್ಯಾಸ ಕಾಪಾಡಿಕೊಳ್ಳಲಾಗಿದೆ. ಇದು ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಆಧುನಿಕತೆಯನ್ನು ಪಡೆದಿರಲಿದೆ.

ನೂತನ ಫೋಕ್ಸ್‌ವ್ಯಾಗನ್ ಡ್ಯೂನ್ ಕಾನ್ಸೆಪ್ಟ್ ಒಳಗಡೆ ಹೆಚ್ಚಿನ ಬದಲಾವಣೆ ತರಲಾಗಿಲ್ಲ. ಇದು 2.0 ಲೀಟರ್ ಫೋರ್ ಸಿಲಿಂಡರ್, ಟರ್ಬೊಚಾರ್ಜ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು 207 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಸಿಕ್ಸ್ ಸ್ಪೀಡ್ ಡಿಎಸ್‌ಜಿ ಕ್ಲಚ್ ಟ್ರಾನ್ಸ್‌ಮಿಷನ್ ಇರಲಿದೆ.

ಇಷ್ಟೆಲ್ಲ ಆದರೂ ಇಲ್ಲಿ ಉದ್ಭವಿಸಿರುವ ದೊಡ್ಡ ಪ್ರಶ್ನೆವೆಂದರೆ ಈ ಕಾನ್ಸೆಪ್ಟ್ ಮಾಡೆಲ್ ಯಾವತ್ತೂ ಉತ್ಪಾದನಾ ವರ್ಷನ್ ಪಡೆದುಕೊಳ್ಳಲಿದೆ ಎಂಬುದು. ಆದರೆ ಸದ್ಯಕ್ಕಿಲ್ಲ ಅನ್ನುವುದನ್ನು ಫೋಕ್ಸ್‌ವ್ಯಾಗನ್ ಸ್ಪಷ್ಟಪಡಿಸಿದೆ.


Click it and Unblock the Notifications








