ಬರುತ್ತಿದೆ ಫೋಕ್ಸ್‌ವ್ಯಾಗನ್ ನೂತನ ಬಜೆಟ್ ಕಾರು ಬ್ರಾಂಡ್

By Nagaraja

ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ಜಗತ್ತಿನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಫೋಕ್ಸ್‌ವ್ಯಾಗನ್, ಬೆಳೆದು ಬರುತ್ತಿರುವ ಮಾರುಕಟ್ಟೆಗಳನ್ನು ಗುರಿಯಾಗಿರಿಸಿಕೊಂಡು ಬಜೆಟ್ ಕಾರುಗಳನ್ನು ನಿರ್ಮಿಸಲಾಗಿದೆ. ಈ ಮಹತ್ತರ ಯೋಜನೆಗಾಗಿ ಜರ್ಮನಿಯ ಈ ಪ್ರತಿಷ್ಠಿತ ವಾಹನ ತಯಾರಕ ಸಂಸ್ಥೆಯು ಹೊಸತಾದ ಬಜೆಟ್ ಕಾರು ಬ್ರಾಂಡ್ ಸ್ಥಾಪಿಸಲಿದೆ.

ಈ ಎಲ್ಲದರ ಮೂಲಕ ಮಾರಾಟ ನೀತಿಯನ್ನು ಸಂಪೂರ್ಣವಾಗಿ ಪುನಶ್ಚೇತನಗೊಳಿಸುವ ಬೃಹತ್ ಯೋಜನೆಯನ್ನು ಸಂಸ್ಥೆ ಹೊಂದಿದೆ. ಈ ಹಿಂದೆ ತನ್ನದೇ ನಿಲುವಿನಲ್ಲಿ ಭದ್ರವಾಗಿದ್ದ ಫೋಕ್ಸ್‌ವ್ಯಾಗನ್ ಬಜೆಟ್ ಕಾರುಗಳನ್ನು ನಿರ್ಮಿಸದಿರಲು ನಿರ್ಧರಿಸಿತ್ತು. ಇದು ತನ್ನ ಉತ್ಪನ್ನಗಳ ಗುಣಮಟ್ಟಕ್ಕೆ ಧಕ್ಕೆಯನ್ನುಂಟು ಮಾಡಲಿದೆ ಎಂಬುದು ಸಂಸ್ಥೆಯ ನಿಲುವಾಗಿತ್ತು.

2016-17ನೇ ಸಾಲಿನಲ್ಲಿ ಫೋಕ್ಸ್‌ವ್ಯಾಗನ್ ಬಜೆಟ್ ಕಾರು ಎಂಟ್ರಿ?

ಗುಣಮಟ್ಟತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಜೆಟ್ ಕಾರಿಗಿಂತಲೂ ಹೆಚ್ಚು ಖರ್ಚು ಮಾಡಬೇಕಾಗಿರುವುದು ಅನಿವಾರ್ಯ ಎಂಬುದು ಸಂಸ್ಥೆಗೆ ಮನವರಿಕೆಯಾಗಿತ್ತು.

2016-17ನೇ ಸಾಲಿನಲ್ಲಿ ಫೋಕ್ಸ್‌ವ್ಯಾಗನ್ ಬಜೆಟ್ ಕಾರು ಎಂಟ್ರಿ?

ಆದರೆ ಮುಂದುವರಿದ ಬೆಳವಣಿಗೆಯಲ್ಲಿ ಕಾರ್ಯಸಾಧ್ಯವಾದ ಪ್ರಸ್ತಾಪವನ್ನು ಮುಂದುವರಿಸಲಿದ್ದು, ಅನುಮೋದನೆಗಾಗಿ ಕಾಯುತ್ತಿದೆ. ಅಂದರೆ ಎಲ್ಲವೂ ಅಂದುಕೊಂಡತೆ ನಡೆದ್ದಲ್ಲಿ ಪೋಕ್ಸ್‌ವ್ಯಾಗನ್‌ಗೆ ನೂತನ ಬಜೆಟ್ ಕಾರು ಬ್ರಾಂಡ್‌ ಸೇರ್ಪಡೆಯಾಗಲಿದೆ.

2016-17ನೇ ಸಾಲಿನಲ್ಲಿ ಫೋಕ್ಸ್‌ವ್ಯಾಗನ್ ಬಜೆಟ್ ಕಾರು ಎಂಟ್ರಿ?

ಇದರೊಂದಿಗೆ ಫೋಕ್ಸ್‌ವ್ಯಾಗನ್ ಉಪ ಬ್ರಾಂಡ್‌ಗಳ ಸಂಖ್ಯೆ 13ಕ್ಕೆ ಏರಿಕೆಯಾಗಲಿದೆ. ಈ ಯೋಜನೆಗೆ ಅನುಮೋದನೆ ದೊರಕಿದ್ದಲ್ಲಿ 2016 ಅಥವಾ 2017ನೇ ಸಾಲಿನ ವರ್ಷಾರಂಭದಲ್ಲಿ ಎಲ್ಲ ಹೊಸತನದಿಂದ ಕೂಡಿದ ನೂತನ ಬ್ರಾಂಡ್ ಪರಿಚಯವಾಗಲಿದೆ.

2016-17ನೇ ಸಾಲಿನಲ್ಲಿ ಫೋಕ್ಸ್‌ವ್ಯಾಗನ್ ಬಜೆಟ್ ಕಾರು ಎಂಟ್ರಿ?

ವರದಿಗಳ ಪ್ರಕಾರ ಫೋಕ್ಸ್‌ವ್ಯಾಗನ್ ಮೊದಲ ಬಜೆಟ್ ಕಾರು ಚೀನಾದಲ್ಲಿ ಉತ್ಪಾದನೆಯಾಗಲಿದೆ. ಇದಕ್ಕಾಗಿ ಅಲ್ಲಿನ ಸ್ಥಳೀಯ ಪಾಲುದಾರಿಕೆ ಹೊಂದಿರುವ ಎಸ್‌ಎಐಸಿ ಮತ್ತು ಎಫ್‌ಎಡಬ್ಲ್ಯು ನೆರವನ್ನು ಪಡೆಯಲಿದೆ.

2016-17ನೇ ಸಾಲಿನಲ್ಲಿ ಫೋಕ್ಸ್‌ವ್ಯಾಗನ್ ಬಜೆಟ್ ಕಾರು ಎಂಟ್ರಿ?

ಅಂದ ಹಾಗೆ ಫೋಕ್ಸ್‌ವ್ಯಾಗನ್ ಬಜೆಟ್ ಕಾರುಗಳು ಐದರಿಂದ ಆರು ಲಕ್ಷ ರು.ಗಳಷ್ಟಿರಲಿದೆ. ಇದು ಕೇವಲ ಚೀನಾ ಮಾತ್ರವಲ್ಲ; ಭಾರತ ಸೇರಿದಂತೆ ಬೆಳೆದು ಬರುತ್ತಿರುವ ಏಷ್ಯಾ, ಲ್ಯಾಟಿನ್ ಅಮೆರಿಕಾ ಹಾಗೂ ಇತರ ಯುರೋಪ್ ರಾಷ್ಟ್ರಗಳಿಗೂ ಗುರಿಯಾಗಿರಿಸಿಕೊಳ್ಳಲಿದೆ.

2016-17ನೇ ಸಾಲಿನಲ್ಲಿ ಫೋಕ್ಸ್‌ವ್ಯಾಗನ್ ಬಜೆಟ್ ಕಾರು ಎಂಟ್ರಿ?

ಸದ್ಯ ಫೋಕ್ಸ್‌ವ್ಯಾಗನ್ ಪೈಕಿ ದೇಶದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಮಾರಾಟಕ್ಕೆ ಲಭ್ಯವಾಗುವ ಕಾರೆಂದರೆ ಪೊಲೊ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆರಂಭಿಕ ದರ ಆರು ಲಕ್ಷ ರು.ಗಳಷ್ಟು ದುಬಾರಿಯಾಗಿದೆ. ಹಾಗಾಗಿ ಬಜೆಟ್ ಕಾರು ಪರಿಚಯವಾದ್ದಲ್ಲಿ ದೇಶದ ಮಾರುಕಟ್ಟೆ ದೃಷ್ಟಿಕೋನದಲ್ಲಿ ಉತ್ತಮ ಬೆಳವಣಿಗೆಯಾಗಿರಲಿದೆ.

More from DriveSpark

Article Published On: Saturday, March 22, 2014, 9:19 [IST]
English summary
It is being reported that Volkswagen has revived its plans to launch a new brand that will build budget cars for emerging markets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+