ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಇ ಹೈಬ್ರಿಡ್ ಕಾರು

By Nagaraja

ಪರಿಪೂರ್ಣ ಎಲೆಕ್ಟ್ರಿಕ್ ಕಾರನ್ನು ರಚಿಸುವುದು ಸೂಕ್ತವಲ್ಲ ಎಂಬುದನ್ನು ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ಅರಿತುಕೊಂಡಿದೆ. ಇದೇ ಕಾರಣಕ್ಕಾಗಿ ಹೈಬ್ರಿಡ್ ಕಾರುಗಳ ಬಳಕೆಯು ಹೆಚ್ಚಾಗುತ್ತಿದೆ.

ಭವಿಷ್ಯದಲ್ಲಿ ಹೈಬ್ರಿಡ್ ಕಾರುಗಳು ವಾಹನೋದ್ಯಮದಲ್ಲಿ ಬಹುದೊಡ್ಡ ಪರಿಣಾಮ ಬೀರಲಿದೆ ಎಂಬುದರಲ್ಲಿ ಸಂಶವಿಲ್ಲ. ಇದೀಗ ಜರ್ಮನಿಯ ಪ್ರಖ್ಯಾತ ಕಾರು ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ಸಹ ನೂತನ ಗಾಲ್ಫ್ ಜಿಟಿಇ ಹೈಬ್ರಿಡ್ ಕಾರನ್ನು ಪ್ರದರ್ಶಿಸಿದೆ.

ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಇ ಹೈಬ್ರಿಡ್ ಕಾರು

ಗಾಲ್ಫ್ ಜಿಟಿಇ ಕಾರಿನ ತೂಕವು ಫೋಕ್ಸ್‌ವ್ಯಾಗನ್ ಸಂಸ್ಥೆಯನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿತ್ತು. ಇದು 1,524 ಕೆ.ಜಿಗಳಷ್ಟು ಭಾರ ಹೊಂದಿದೆ. ಆದರೆ ತಯಾರಕರ ಪ್ರಕಾರ ಒಮ್ಮೆ ಸಂಪೂರ್ಣ ಟ್ಯಾಂಕ್ ಭರ್ತಿ ಮಾಡಿದರೆ 583 ಮೈಲ್ ವರೆಗೆ ಸರಾಗವಾಗಿ ಚಲಿಸಬಹುದಾಗಿದೆ.

ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಇ ಹೈಬ್ರಿಡ್ ಕಾರು

ಇದು 1.4 ಲೀಟರ್ 150 ಪಿಎಸ್ ಟಿಎಸ್‌ಐ ಡೈರಕ್ಟ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಜಂಟಿಯಾಗಿ 204 ಪಿಎಸ್ ಪವರ್ ಉತ್ಪಾದಿಸಲಿದೆ.

ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಇ

ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಇ

ಮುಂದುಗಡೆಯಿಂದ ನೋಡುವಾಗ ನೂತನ ಗಾಲ್ಫ್ ಜಿಟಿಇ ಕೂಡಾ ಜಿಟಿಐ ಮತ್ತು ಜಿಟಿಡಿ ಆವೃತ್ತಿಗಳಿಗೆ ಸಮಾನವಾದ ವಿನ್ಯಾಸ ಪಡೆದುಕೊಂಡಿದೆ. ಹಾಗಿದ್ದರೂ ಸಿ ಆಕಾರದ ಎಲ್‌ಇಡಿ ಲೈಟ್ ಈ ಕಾರನ್ನು ಪ್ರತ್ಯೇಕಿಸಲಿದೆ.

ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಇ ಹೈಬ್ರಿಡ್ ಕಾರು

ಇನ್ನು ಕಾರಿನ ಹಿಂದುಗಡೆಯೂ ಹೆಚ್ಚಿನ ಬದಲಾವಣೆ ತರಲಾಗಿಲ್ಲ. ಆದರೆ ಟೈಲ್ ಲೈಟ್ ಮತ್ತು ಡಬಲ್ ಬ್ಯಾರೆಲ್ ಎಕ್ಸಾಸ್ಟ್ ಹೆಚ್ಚು ಕ್ರೀಡಾತ್ಮಕ ಲುಕ್ ಪ್ರದಾನ ಮಾಡುತ್ತಿದೆ.

ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಇ ಹೈಬ್ರಿಡ್ ಕಾರು

ಒಟ್ಟಿನಲ್ಲಿ ಹೇಳಬೇಕೆಂದರೆ ವಿನ್ಯಾಸದ ವಿಚಾರದಲ್ಲಿ ಈಗಿರುವ ಜಿಟಿಇ ಆವೃತ್ತಿಗಿಂತ ಹೆಚ್ಚಿನ ಬದಲಾವಣ ತರಲಾಗಿಲ್ಲ. ಆದರೆ ಶಕ್ತಿಯುತ ಹಾಗೂ ಗುಣಮಟ್ಟಕ್ಕೆ ಆದ್ಯತೆ ಕೊಡಲಾಗಿದೆ.

ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಇ ಹೈಬ್ರಿಡ್ ಕಾರು

ಹಾಗೆಯೇ ಕಾರಿನ ಒಳಭಾಗವು ಶುಭ್ರವಾಗಿ ಗೋಚರಿಸುತ್ತಿದೆ. ಇಲ್ಲಿ 6.5 ಟಚ್‌ಸ್ಕ್ರೀನ್ ಪರದೆ ಸ್ಟಾಂಡರ್ಡ್ ಆಗಿ ದೊರಕಲಿದೆ. ಜತೆಗೆ ಐಷಾರಾಮಿ ಸೌಲಭ್ಯಗಳು ನಿಮ್ಮ ಹರಸಿಕೊಂಡು ಬರಲಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ನೂತನ ಗಾಲ್ಫ್ ಜಿಟಿಇ ಬ್ಯಾಟರಿ ಸಂಪೂರ್ಣ ಚಾರ್ಜ್ ಮಾಡಿಸಲು 3.5 ತಾಸು ತಗುಲಲಿದೆ. ಇದನ್ನು ಮನೆಯ ಸಾಮಾನ್ಯ ಪ್ಲಗ್ ಸಾಕೆಟ್‌ನಿಂದಲೇ ಚಾರ್ಜ್ ಮಾಡಿಸಬಹುದಾಗಿದೆ.

ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಇ ಹೈಬ್ರಿಡ್ ಕಾರು

ಅಂತೆಯೇ ಅತಿ ವಿಶಿಷ್ಟ ಇ ಬಟನ್ ಲಗತ್ತಿಸಲಾಗಿದ್ದು, ಇದು ಹೊಗೆ ರಹಿತ ಪಯಣಯನ್ನು ಪ್ರೋತ್ಸಾಹಿಸಲಿದೆ. ಇದರಲ್ಲಿ ಜಿಟಿಇ ಡ್ರೈವ್ ಮೋಡ್ ಕೂಡಾ ಇದ್ದು, ಕ್ರೀಡಾತ್ಮಕ ಹಾಗೂ ರೋಮಾಂಚಕ ಚಾಲನೆಯ ಅನುಭವ ನೀಡಲಿದೆ.

ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಇ ಹೈಬ್ರಿಡ್ ಕಾರು

ಪ್ರಸಕ್ತ ಸಾಲಿನಲ್ಲೇ ಗಾಲ್ಫ್ ಜಿಟಿಇ ಹೈಬ್ರಿಡ್ ಕಾರು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದ್ದು, ಆಗಸ್ಟ್ ತಿಂಗಳಿಂದ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಇನ್ನು ದರದ ಬಗ್ಗೆ ಮಾತನಾಡುವುದಾದ್ದಲ್ಲಿ 30 ಲಕ್ಷಗಿಂತಲೂ ಹೆಚ್ಚು ದುಬಾರಿಯೆನಿಸಲಿದೆ.

More from DriveSpark

Article Published On: Saturday, March 1, 2014, 7:01 [IST]
English summary
Many Cars manufactures have understood, having a pure electric is not a perfect combination. Hybrid cars are the future, going forward and German car manufacturer has revealed their Golf GTE Hybrid.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+