ಫೋಕ್ಸ್‌ವ್ಯಾಗನ್, ನಿಸ್ಸಾನ್‌ನಿಂದಲೂ ಸಬ್ 4 ಮೀಟರ್ ಕಾರುಗಳು

By Nagaraja

ದೇಶದಲ್ಲಿ ಸಬ್ ಫೋರ್ ಮೀಟುರ್ ಕಾರುಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ವಿಭಾಗದಲ್ಲಿ ಈಗಾಗಲೇ ಫೋರ್ಡ್ ಇಕೊಸ್ಪೋರ್ಟ್, ಹೋಂಡಾ ಅಮೇಜ್ ಹಾಗೂ ಮಾರುತಿ ಸ್ವಿಫ್ಟ್ ಡಿಜೈರ್ ಆವೃತ್ತಿಗಳು ತನ್ನ ಸಾನಿಧ್ಯವನ್ನು ಗಟ್ಟಿ ಪಡಿಸಿವೆ. ಇದಕ್ಕೆ ಸೇರ್ಪಡೆಯೆಂಬಂತೆ ಫೋಕ್ಸ್‌ವ್ಯಾಗನ್ ಹಾಗೂ ನಿಸ್ಸಾನ್ ಸಂಸ್ಥೆಗಳು ಸಬ್ ಫೋರ್ ಮೀಟರ್ ಎಸ್‌ಯುವಿ ಹಾಗೂ ಸೆಡಾನ್ ಕಾರುಗಳನ್ನು ಲಾಂಚ್ ಮಾಡುವ ಯೋಜನೆ ಹೊಂದಿದೆ.

ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಸಬ್ ಫೋರ್ ಮೀಟರ್ ಎಸ್‌ಯುವಿ ಶಿಪ್ರ ಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಇದೀಗ ಜರ್ಮನಿ ಹಾಗೂ ಜಪಾನ್ ಸಂಸ್ಥೆಗಳು ಸಹ ಇದರತ್ತ ಗಮನ ಕೇಂದ್ರಿಕರಿಸಿದೆ.

ಫೋಕ್ಸ್‌ವ್ಯಾಗನ್, ನಿಸ್ಸಾನ್‌ನಿಂದಲೂ ಸಬ್ 4 ಮೀಟರ್ ಕಾರುಗಳು

ವರದಿಗಳ ಪ್ರಕಾರ ಫೋಕ್ಸ್‌ವ್ಯಾಗನ್ ಕಾಂಪಾಕ್ಟ್ ಎಸ್‌ಯುವಿ ಅಂತಿಮ ಘಟ್ಟದಲ್ಲಿದ್ದು, 251/2 ಎಂಬ ಕೋಡ್ ಪಡೆದುಕೊಂಡಿದೆ.

ಫೋಕ್ಸ್‌ವ್ಯಾಗನ್, ನಿಸ್ಸಾನ್‌ನಿಂದಲೂ ಸಬ್ 4 ಮೀಟರ್ ಕಾರುಗಳು

ಇನ್ನೊಂದೆಡೆ ಮಾರುಕಟ್ಟೆಯನ್ನು ಕೂಲಂಕುಷವಾಗಿ ತುಲನೆ ಮಾಡುತ್ತಿರುವ ನಿಸ್ಸಾನ್ ಈ ಬಗ್ಗೆ ಇನ್ನಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ.

ಫೋಕ್ಸ್‌ವ್ಯಾಗನ್, ನಿಸ್ಸಾನ್‌ನಿಂದಲೂ ಸಬ್ 4 ಮೀಟರ್ ಕಾರುಗಳು

2017ರ ವೇಳೆಗೆ 10 ನೂತನ ಮಾದರಿಗಳನ್ನು ಲಾಂಚ್ ಮಾಡುವುದು ನಿಸ್ಸಾನ್ ಇರಾದೆಯಾಗಿದೆ. ಇದರಂತೆ ಕ್ರಾಸೋವರ್ ಜತೆ ಸನ್ನಿಯ ಸಬ್ ಫೋರ್ ಮೀಟರ್ ಕಾಂಪಾಕ್ಟ್ ಸೆಡಾನ್ ವರ್ಷನ್ ಆಗಮನವಾಗುವ ಸಾಧ್ಯತೆಯಿದೆ.

ಫೋಕ್ಸ್‌ವ್ಯಾಗನ್, ನಿಸ್ಸಾನ್‌ನಿಂದಲೂ ಸಬ್ 4 ಮೀಟರ್ ಕಾರುಗಳು

ಈ ಎರಡು ವಾಹನ ತಯಾರಕರ ಪೈಕಿ ಜರ್ಮನಿಯ ಫೋಕ್ಸ್‌ವ್ಯಾಗನ್ ಕಳೆದ ಕೆಲವು ಸಮಯಗಳಿಂದ ಸುದ್ದಿಯಿಂದ ಸ್ವಲ್ಪ ದೂರದಲ್ಲಿದೆ. ಹಾಗಾಗಿ ಟೈಗನ್ ಫೋಕ್ಸ್‌ವ್ಯಾಗನ್ ಮುಂದಿನ ಕಾಂಪಾಕ್ಟ್ ಎಸ್‌ಯುವಿ ದೇಶಕ್ಕೆ ಪರಿಚಯವಾಗುವ ಸಾಧ್ಯತೆಯಿದೆ.

ಫೋಕ್ಸ್‌ವ್ಯಾಗನ್, ನಿಸ್ಸಾನ್‌ನಿಂದಲೂ ಸಬ್ 4 ಮೀಟರ್ ಕಾರುಗಳು

ಇಷ್ಟೆಲ್ಲ ಆದರೂ ಇಕೊಸ್ಪೋರ್ಟ್‌ಗೆ ಸೆಡ್ಡು ನೀಡುವ ರೀತಿಯಲ್ಲಿ ತಾಂತ್ರಿಕ ವೈಶಿಷ್ಟ್ಯ ಹಾಗೂ ದರ ನಿಗದಿಪಡಿಸಬೇಕಾಗಿರುವುದ ಅತಿ ಅಗತ್ಯವಾಗಿರುತ್ತದೆ. ಮೇಲ್ನೋಟಕ್ಕೆ ಈ ಎರಡು ವಿಷಯಗಳಲ್ಲಿ ಫೋಕ್ಸ್‌ವ್ಯಾಗನ್ ಹಾಗೂ ನಿಸ್ಸಾನ್ ತನ್ನ ಶಕ್ತಿ ಪ್ರದರ್ಶಿಸುವ ಸಾಮರ್ಥ್ಯ ಹೊಂದಿದೆ.

More from DriveSpark

Article Published On: Friday, April 11, 2014, 8:01 [IST]
English summary
Volkswagen and Nissan are eager to enter the sub-4 meter space in India, and are looking to bring out new compact sedan and compact SUV models.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+