ಫೋಕ್ಸ್‌ವ್ಯಾಗನ್ ಕಾಂಪಾಕ್ಟ್ ಎಸ್‌ಯುವಿ ಆಫ್ ರೋಡ್ ಗಾಡಿ
ವಿಶ್ವದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಫೋಕ್ಸ್‌ವಾಗನ್, ಅತಿ ನೂತನ ಕಾನ್ಸೆಪ್ಟ್ ಕಾಂಪಾಕ್ಟ್ ಎಸ್‌ಯುವಿ ಆಫ್ ರೋಡರ್ ಕಾರೊಂದನ್ನು ಪ್ರದರ್ಶಿಸಿದೆ. ಹೌದು, ನೂತನ ಟಿ-ಆರ್‌ಒಸಿ (T-ROC) ಕಾನ್ಸೆಪ್ಟ್ ಕಾರನ್ನು ಆಫ್ ರೋಡ್ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ.
ಪ್ರಸ್ತುತ ಕಾರು 2014 ಜಿನೆವಾ ಮೋಟಾರು ಶೋದಲ್ಲಿ ಅನಾವರಣಗೊಂಡಿದೆ. ಹಾಗಿದ್ದರೂ ನಿಕಟ ಭವಿಷ್ಯದಲ್ಲಿ ನಿರ್ಮಾಣ ವರ್ಷನ್ ಪಡೆದುಕೊಳ್ಳಲಿದೆಯೇ ಎಂಬುದು ತಿಳಿದು ಬಂದಿಲ್ಲ.

ಕಂಪನಿಯ ಎಂಕ್ಯೂಬಿ ತಲಹದಿಯಲ್ಲಿ ನಿರ್ಮಾಣವಾಗಿರುವ ಫೋಕ್ಸ್‌ವ್ಯಾಗನ್ ಟಿ-ಆರ್‌ಒಸಿ ಕಾನ್ಸೆಪ್ಟ್ ಕಾರು, ತೆಗೆಯಬಹುದಾದ ವಿಭಜಿತ ಮೇಲ್ಚಾವಣಿ ಪಡೆದುಕೊಂಡಿದೆ. ಇದನ್ನು ಕಾರ್ಬನ್ ವಸ್ತುಗಳಿಂದ ತಯಾರಿಸಲಾಗಿದೆ.

ಆಯಾಮ
ಫೋಕ್ಸ್‌ವ್ಯಾಗನ್ ಕಾಂಪಾಕ್ಟ್ ಎಸ್‌ಯುವಿ ಕಾನ್ಸೆಪ್ಟ್ 4179 ಎಂಎಂ ಉದ್ದ, 1831 ಎಂಎಂ ಅಗಲ ಮತ್ತು 1501 ಎಂಎಂ ಎತ್ತರವನ್ನು ಪಡೆದುಕೊಂಡಿದೆ.

ಇದರಲ್ಲಿ 2.0 ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಆಳವಡಿಸಲಾಗಿದ್ದು, 184 ಪಿಎಸ್ ಪವರ್ (380 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದನ್ನು ಫೋಕ್ಸ್‌ವ್ಯಾಗನ್ ಗಾಲ್ಫ್ ಆವೃತ್ತಿಯಿಂದ ಆಮದು ಮಾಡಿಕೊಳ್ಳಲಾಗಿದೆ.

ಅಂತೆಯೇ ಟಿ-ಆರ್‌ಒಸಿ ಕಾನ್ಸೆಪ್ಟ್ ಕಾರು ಸೆವೆನ್ ಸ್ಪೀಡ್ ಡಿಎಸ್‌ಜಿ ಟ್ರಾನ್ಸ್‌ಮಿಷನ್ ಜತೆ ಹಾಲ್ಡೆಕ್ಸ್ ಆಲ್ ವೀಲ್ ಡ್ರೈವ್ ಸಿಸ್ಟಂ, ಹಿಲ್ ಡಿಸೆಂಟ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಸೇವೆಗಳನ್ನು ಪಡೆದುಕೊಂಡಿದೆ.

ಸಂಸ್ಥೆಯ ಪ್ರಕಾರ ಫೋಕ್ಸ್‌ವ್ಯಾಗನ್ ಕಾನ್ಸೆಪ್ಟ್ ಕಾರು ಪ್ರತಿ ಲೀಟರ್‌ಗೆ ಭರ್ಜರಿ 24.4 ಮೈಲೇಜ್ ನೀಡುವಷ್ಟು ಸಕ್ಷಮವಾಗಿರಲಿದೆ. ಹಾಗೆಯೇ ಈ ಪರಿಸರ ಸ್ನೇಹಿ ಕಾರು ಪ್ರತಿ ಕೀ.ಮೀ.ಗೆ 129 ಗ್ರಾಂಗಳಷ್ಟು ಮಾತ್ರ ಕಾರ್ಬನ್ ಡೈ ಓಕ್ಸೈಡ್ ಹೊರಚಿಮ್ಮಲಿದೆ.

ಇನ್ನುಳಿದಂತೆ ಗಂಟೆಗೆ ಗರಿಷ್ಠ 209 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ. ಅದೇ ರೀತಿ ಕೇವಲ 6.9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿದೆ.

ಡ್ರೈವಿಂಗ್ ಮೋಡ್
ಸ್ಟ್ರೀಟ್,
ಆಫ್ ರೋಡ್,
ಸ್ನೊ

ಮುಂಭಾಗ ಹಾಗೂ ಹಿಂಭಾಗದಲ್ಲಿ ಕ್ಯಾಮೆರಾ ಸೌಲಭ್ಯವಿದ್ದು, ಸುತ್ತುಮುತ್ತಲಿನ ಚಿತ್ರಣವನ್ನು ದೊಡ್ಡದಾದ 12.3 ಇಂಚಿನ ಟಿಎಫ್‌ಟಿ ಪರದೆಯಲ್ಲಿ ತೋರಿಸಲಿದೆ.

ಕಾರಿನ ಹೊರಗಿನ ವಿನ್ಯಾಸ ಬಗ್ಗೆ ಮಾತನಾಡುವುದಾದ್ದಲ್ಲಿ, 3ಡಿ ರೇಡಿಯೇಟರ್ ಗ್ರಿಲ್, ಡೇ ಟೈಮ್ ರನ್ನಿಂಗ್ ಲೈಟ್ಸ್, ಎಲ್‌ಇಡಿ ಹೆಡ್‌ಲೈಟ್, ಟೈಲ್ ಲೈಟ್ಸ್, ದೊಡ್ಡದಾದ ಸ್ಕಿಡ್ ಪ್ಲೇಟ್ ಮತ್ತು ಆಯತಾಕಾರದ ಟೈಲ್‌ಪೈಪ್ ಲಗತ್ತಿಸಲಾಗಿದೆ.

ಸದ್ಯಕ್ಕೆ ಕಾನ್ಸೆಪ್ಟ್ ಹಂತದಲ್ಲಿರುವ ಫೋಕ್ಸ್‌ವ್ಯಾಗನ್ ಟಿ-ಆರ್‌ಒಸಿ ಕಾಂಪಾಕ್ಟ್ ಎಸ್‌ಯುವಿ, ಯಾವಾಗ ನಿರ್ಮಾಣ ಹಂತ ತಲುಪಲಿದೆ ಎಂಬುದು ಇನ್ನೂ ನಿಗದಿಯಾಗಿಲ್ಲ. ಇದರಿಂದಾಗಿ ದರ ಮಾಹಿತಿ ನೀಡುವಲ್ಲಿ ವಿಫಲವಾಗಿದೆ.


Click it and Unblock the Notifications








