ಫೋಕ್ಸ್‌ವ್ಯಾಗನ್ ಟೈಗನ್ ಬದಲು ಟಿ-ರಾಕ್ ಭಾರತ ಪ್ರವೇಶ?

By Nagaraja

ಕಳೆದ ಸ್ವಲ್ಪ ಸಮಯದಿಂದ ಫೋಕ್ಸ್‌ವ್ಯಾಗನ್ ಟೈಗನ್ ಭಾರತ ಪ್ರವೇಶಕ್ಕೆ ಸಂಬಂಧಿಸಿದಂತೆ ಊಹಾಪೋಹಗಳೆದಿದ್ದವು. ಇದಕ್ಕೆ ಪೂರಕವೆಂಬಂತೆ 2014 ಫೆಬ್ರವರಿ ತಿಂಗಳಲ್ಲಿ ನಡೆದ ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು.

ಇದು ಪ್ರಮುಖವಾಗಿಯೂ ರೆನೊ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಳ್ಳಲಿದೆಯೆಂಬ ಸೂಚನೆ ಲಭಿಸಿತ್ತು. ಆದರೆ ಇದೀಗ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ ಫೋಕ್ಸ್‌ವ್ಯಾಗನ್ ಟೈಗನ್ ಭಾರತ ಪ್ರವೇಶ ಕಷ್ಟ ಸಾಧ್ಯವಾಗಿದೆ. ಇದರ ಬದಲಾಗಿ ನೂತನ ಟಿ-ರಾಕ್ (T-Roc) ಕಾನ್ಸೆಪ್ಟ್ ಕಾರನ್ನು ಭಾರತಕ್ಕೆ ಪರಿಚಯಿಸುವ ಸಾಧ್ಯತೆಗಳಿವೆ.

ಫೋಕ್ಸ್‌ವ್ಯಾಗನ್ ಟೈಗನ್ ಬದಲು ಟಿ-ರಾಕ್ ಭಾರತ ಪ್ರವೇಶ?

ಭಾರತ ವಾಹನ ಮಾರುಕಟ್ಟೆಯಲ್ಲಿ ಟೈಗನ್‌ನಂತಹ ಮಾದರಿಗಳನ್ನು ಪರಿಚಯಿಸುವುದು ಬೆಲೆಯ ದೃಷ್ಟಿಕೋನದಲ್ಲಿ ಫೋಕ್ಸ್‌ವ್ಯಾಗನ್‌ಗೆ ದುಬಾರಿಯೆನಿಸಲಿದೆ. ಇದೇ ಕಾರಣಕ್ಕಾಗಿ ಟೈಗನ್ ಯೋಜನೆಯಿಂದ ಹಿಂದೆ ಸರಿಯುವ ಸಾಧ್ಯತೆಯಿದೆ.

ಫೋಕ್ಸ್‌ವ್ಯಾಗನ್ ಟೈಗನ್ ಬದಲು ಟಿ-ರಾಕ್ ಭಾರತ ಪ್ರವೇಶ?

ಇನ್ನೊಂದೆಡೆ 2014 ಜಿನೆವಾ ಮೋಟಾರು ಶೋದಲ್ಲಿ ಅನಾವರಣಗೊಂಡಿದ್ದ ಟಿ-ರಾಕ್, ಎರಡು ಬಾಗಿಲುಗಳ ಕಾನ್ಸಪ್ಟ್ ಕಾರಾಗಿದ್ದು ಹೊಚ್ಚ ಹೊಸ ನೂತನ ಫ್ಲ್ಯಾಟ್‌ಫಾರ್ಮ್ ಪಡೆದುಕೊಂಡಿದೆ.

ಫೋಕ್ಸ್‌ವ್ಯಾಗನ್ ಟೈಗನ್ ಬದಲು ಟಿ-ರಾಕ್ ಭಾರತ ಪ್ರವೇಶ?

ಇದು 2.0 ಲೀಟರ್ ಟಿಡಿಐ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 182 ಅಶ್ವಶಕ್ತಿ (380 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಈ ಆಲ್ ವೀಲ್ ಡ್ರೈವ್ ಕಾಂಪಾಕ್ಟ್ ಎಸ್‌ಯುವಿ, 4 ಮೋಷನ್ ಸಿಸ್ಟಂ ಜತೆ 7 ಸ್ಪೀಡ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ಫೋಕ್ಸ್‌ವ್ಯಾಗನ್ ಟೈಗನ್ ಬದಲು ಟಿ-ರಾಕ್ ಭಾರತ ಪ್ರವೇಶ?

ಎಲ್‌ಇಡಿ ಹೆಡ್‌ಲೈಟ್ ಮತ್ತು 19 ಇಂಚು ಅಲಾಯ್ ವೀಲ್ ಎಂಬಿತ್ಯಾದಿಗಳು ಫೋಕ್ಸ್‌ವ್ಯಾಗನ್ ಟಿ-ರಾಕ್ ಕಾನ್ಸೆಪ್ಟ್ ಕಾರಿನ ವೈಶಿಷ್ಟ್ಯಗಳಾಗಿರಲಿದೆ.

ಫೋಕ್ಸ್‌ವ್ಯಾಗನ್ ಟೈಗನ್ ಬದಲು ಟಿ-ರಾಕ್ ಭಾರತ ಪ್ರವೇಶ?

ಅಂದ ಹಾಗೆ ನೂತನ ಕಾನ್ಸೆಪ್ಟ್ ಕಾರು ಮೊಡ್ಯೂಲರ್ ಟ್ರಾನ್ಸ್‌ವರ್ಸ್ ಮ್ಯಾಟ್ರಿಕ್ (ಎಂಕ್ಯೂಬಿ) ತಲಹದಿಯಲ್ಲಿ ರೂಪುಗೊಳ್ಳಲಿದೆ. ಇದು 1420 ಕೆ.ಜಿ ಭಾರವನ್ನಷ್ಟೇ ಹೊಂದಿರಲಿದೆ.

ಫೋಕ್ಸ್‌ವ್ಯಾಗನ್ ಟೈಗನ್ ಬದಲು ಟಿ-ರಾಕ್ ಭಾರತ ಪ್ರವೇಶ?

ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಟಿ-ರಾಕ್ ಭಾರತದ ಜತೆಗೆ ಇತರ ರಾಷ್ಟ್ರಗಳಿಗೂ ಪರಿಚಿಯಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

ಫೋಕ್ಸ್‌ವ್ಯಾಗನ್ ಟೈಗನ್ ಬದಲು ಟಿ-ರಾಕ್ ಭಾರತ ಪ್ರವೇಶ?

ಇನ್ನೊಂದೆಡೆ ಹಳೆಯ ಪಿಕ್ಯೂ25 ತಲಹದಿಯಲ್ಲಿ ಟೈಗನ್ ರೂಪುಗೊಂಡಿದೆ. ಪೊಲೊ ಹಾಗೂ ವೆಂಟೊ ನಿರ್ಮಾಣದಲ್ಲೂ ಇದೇ ಫ್ಲ್ಯಾಟ್‌ಫಾರ್ಮ್ ಬಳಕೆ ಮಾಡಲಾಗಿತ್ತು.

ಫೋಕ್ಸ್‌ವ್ಯಾಗನ್ ಟೈಗನ್ ಬದಲು ಟಿ-ರಾಕ್ ಭಾರತ ಪ್ರವೇಶ?

ಒಟ್ಟಿನಲ್ಲಿ ನೂತನ ಎಂಕ್ಯೂಬಿ ಫ್ಲ್ಯಾಟ್‌ಫಾರ್ಮ್ ಪರಿಚಯಿಸಲು ಇದು ಸರಿಯಾದ ಸಮಯವಾಗಿದೆ. ಇದು ಡೀಸೆಲ್ ಜತೆಗೆ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲೂ ಲಭ್ಯವಾಗಲಿದೆ.

More from DriveSpark

Article Published On: Tuesday, April 22, 2014, 12:53 [IST]
English summary
Volkswagen India showcased the Taigun at the Auto Expo earlier this year, which was an obvious indication that it would bring this compact SUV here to take on the Renault Duster and Ford EcoSport.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+